Hyundai Ioniq: ಒಮ್ಮೆ ಚಾರ್ಜ್ ಮಾಡಿದರೆ 631 ಕೀ ಮೀ ಮೈಲೇಜ್, ಹುಂಡೈ ನ ಈ ಕಾರಿಗೆ ಹೆಚ್ಚಾಗಿದೆ ಬೇಡಿಕೆ.

631 ಕಿಲೋಮೀಟರ್ ಮೈಲೇಜ್ ನೀಡುವ ಹ್ಯುಂಡೈ ನ ಎರಡನೇ ಎಲೆಕ್ಟ್ರಿಕ್ ಕಾರ್ ಬಿಡುಗಡೆ.

Hyundai Ioniq 5 Electric Car: ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿ (Hyundai Company) ಕಾರು ಪ್ರಿಯರಿಗಾಗಿ ಹೊಸ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ.

ಈ ಕಾರಣದಿಂದಾಗಿ ಹ್ಯುಂಡೈ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಹ್ಯುಂಡೈ ಮಾರುಕಟ್ಟೆಯಲ್ಲಿ ಇದೀಗ ತನ್ನ ಎರಡನೇ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿದೆ.

Launch of Hyundai's second electric car with a mileage of 631 km.
Image Credit: Carwale

ಹ್ಯುಂಡೈ ಐಯೋನಿಕ್ 5 ಎಲೆಕ್ಟ್ರಿಕ್ ಕಾರ್
ಹ್ಯುಂಡೈ ಐಯೋನಿಕ್ 5 ಅನ್ನು x ವೇರಿಯೆಂಟ್ ಲೆವೆಲ್ ಗಳಲ್ಲಿ ಖರೀದಿಗೆ ದೊರೆಯಲಿದೆ. ಇದು 72.6kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಒಂದೇ ಚಾರ್ಜಿನಲ್ಲಿ 631 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಹ್ಯುಂಡೈ ಐಯೋನಿಕ್ 5 ಹ್ಯುಂಡೈ ನ 800V EGMP ಪ್ಲಾಟ್ ಫಾರಂ ಅನ್ನು ಆಧರಿಸಿದೆ.

ಈ ಎಸ್ ಯುವಿಯಲ್ಲಿ ಬ್ಯಾಟರಿ ಪ್ಯಾಕ್ ಎರಡು ಆಕ್ಸಲ್ ನಡುವೆ ಇರಲಿದೆ. ಇದನ್ನು 350 kW ವೇಗದಲ್ಲಿ ಚಾರ್ಜ್ ಮಾಡಬಹುದು. ಹ್ಯುಂಡೈ ಐಯೋನಿಕ್ 5 ನ ಬ್ಯಾಟರಿಯನ್ನು ಕೇವಲ 18 ನಿಮಿಷಗಳಲ್ಲಿ ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಮಾಡಬಹುದು. ಇದೀಗ ಹ್ಯುಂಡೈ Ioniq 5 ಕಾರನ್ನು ರೂ 44 .95 ಲಕ್ಷ ಎಕ್ಸ್ ಶೋ ರೂಮ್ ಬೆಲೆಯಲ್ಲಿ ಬಿಡುಗಡೆ ಮಾಡಿದೆ.

Launch of Hyundai's second electric car with a mileage of 631 km.
Image Credit: Carandbike

ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ಐಇನಿಕ್ 5 ಪ್ಯಾಕ್ ರೇರ್ ಆಕ್ಸೆಲ್ ಗೆ ಸಂಪರ್ಕಗೊಂಡಿರುವ ಏಕೈಕ ಮೋಟಾರ್ ಅನ್ನು ಹೊಂದಿದೆ. ಇದು 217 bhp ಗರಿಷ್ಟ ಪವರ್ ಮತ್ತು 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

ಹ್ಯುಂಡೈ ಐಯೋನಿಕ್ 5 ವಿಶೇಷತೆ
ಇದು ಪ್ಯಾರಾಮೆಟ್ರಿಕ್ ಪಿಕ್ಸೆಲ್ -ಶೈಲಿಯ ಹೆಡ್ ಲ್ಯಾಂಪ್ ಗಳು ಮತ್ತು ಟೈಲ್ ಲೈಟ್ ಗಳನ್ನೂ ಪಡೆದುಕೊಂಡಿದೆ. ವೆಂಟಿಲೇಟೆಡ್ ಫ್ರಾಂಟ್ ಸೀಟ್ , ಪವರ್ ಸೀಟ್, ಕ್ಲೈಮೇಟ್ ಕಂಟ್ರೋಲ್ ವೈಶಿಷ್ಟಗಳನ್ನು ಹೊಂದಿದೆ.

ಹ್ಯುಂಡೈ ಐಯೋನಿಕ್ 5 ಕ್ಯಾಬಿನ್ ಡ್ಯುಯೆಲ್ 12.3 ಇಂಚಿನ ಫುಲ್- TFT ಸ್ಕ್ರೀನ್ , ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಟಚ್ ಸ್ಕ್ರೀನ್ ಇನ್ಪ್ಪೋಟೈನ್ಮೆಂಟ್ ಸಿಸ್ಟಮ್, ADAS ಸೇರಿದಂತೆ ದೊಡ್ಡ ಪವರ್ ಬ್ಯಾಂಕ್, ORVM , ಹ್ಯಾಂಡ್ ಹ್ಯಾಂಡ್ ಫ್ರಿ ಪರೇಟೆಡ್ ಟೈಲ್ ಗೆಟ್ ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Join Nadunudi News WhatsApp Group