Hyundai 5 Star: 20Km ಮೈಲೇಜ್ ಕೊಡುವ ಅಗ್ಗದ 5 ಸ್ಟಾರ್ ಕಾರ್ ಲಾಂಚ್ ಮಾಡಿದ ಹುಂಡೈ, ಟಾಟಾ ಜೊತೆ ಪೈಪೋಟಿ.
ಬರೋಬ್ಬರಿ 18 ರಿಂದ 20 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ 5 ಸ್ಟಾರ್ ರೇಟಿಂಗ್ ನ ಹುಂಡೈ ಕಾರ್.
Hyundai 5 Star Car In India: ಮಾರುಕಟ್ಟೆಯಲ್ಲಿ 5 ಸ್ಟಾರ್ ರೇಟಿಂಗ್ ಕಾರ್ ಗಳು ಸಾಕಷ್ಟು ಆಯ್ಕೆ ಸಿಗುತ್ತದೆ. ಸದ್ಯ Hyundai ಕಂಪನಿಯ ನೂತನ ಮಾದರಿ ತನ್ನ 5 Star Rating ಮೂಲಕ ಇನ್ನಿತರ ಮಾದರಿಗೆ ಬಾರಿ ಪೈಪೋಟಿ ನೀಡಲು ಸಜ್ಜಾಗಿದೆ. ಸದ್ಯ ಮಾರುಕಟ್ಟೆಯಲ್ಲಿ Hyundai ಕಂಪನಿ ಈಗಾಗಲೇ ಹತ್ತು ಹಲವು ಮಾದರಿಯ ಕಾರ್ ಗಳನ್ನೂ ಪರಿಚಯಿಸುವ ಮೂಲಕ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ.
ಮಾರುಕಟ್ಟೆಯಲ್ಲಿ Hyundai ಕಂಪನಿಯ ಕಾರ್ ಗಳು ಬಿಡುಗಡೆಯಾದ ಕೆಲವೇ ದಿನಗಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತವೆ ಎಂದರೆ ತಪ್ಪಾಗಲಾರದು. ಸದ್ಯ Hyundai ಇನ್ನುಮುಂದೆ ತನ್ನ ಎಲ್ಲ ಮಾದರಿಯ ಕಾರ್ ಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಹೆಚ್ಚಿನ ಸುರಕ್ಷತೆಯ ಫೀಚರ್ ಅನ್ನು ಅಳವಡಿಸಲು Hyundai ನಿರ್ಧರಿಸಿದೆ. Hyundai ನ ನೂತನ ಮಾದರಿ ಮಾರುಕಟ್ಟೆಯಲ್ಲಿ ಸದ್ಯ ಸಂಚಲನ ಹೆಚ್ಚಿಸುತ್ತಿದೆ.
5 Star Rating ನ Hyundai ಕಾರ್ ಲಾಂಚ್
ಸದ್ಯ Hyundai Motor India Limited ತನ್ನ ನೂತನ ಮಾದರಿಯ Hyundai Verna ಮಾಡೆಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧವಾಗಿದೆ. Hyundai Verna Car ಟೆಸ್ಟ್ ನಲ್ಲಿ 5 Star Rating ಅನ್ನು ಪಡೆದುಕೊಂಡು 6 Airbag ಗಳನ್ನೂ ಅಳವಡಿಸಿರುವ ಕಾರಣ ಹೈಲೈಟ್ ಆಗಿದೆ.
ಕಂಪನಿಯು Verna ಮಾದರಿಯನ್ನು ಪರಿಚಯಿಸಿ ಇನ್ನುಮುಂದೆ ತಯಾರಿಸುವ ಎಲ್ಲ Car ಗಳಲ್ಲಿ 6 Airbag ಗಳನ್ನೂ ಅಳವಡಿಸುವುದಾಗಿ ಹೇಳಿಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ Hyundai Verna ಬೆಲೆ ಎಷ್ಟು? ಹಾಗೆಯೆ ಈ ಕಾರ್ ನ ಎಂಜಿನ್ ಸಾಮರ್ಥ್ಯದ ಬಗ್ಗೆ ವಿವರ ತಿಳಿಯೋಣ.
Hyundai Verna Car Mileage
Hyundai Verna ಎರಡು ಎಂಜಿನ್ ಆಯ್ಕೆಯಲ್ಲಿ ಲಭ್ಯವಾಗಲಿದ್ದು, ಒಂದು ಎಂಜಿನ್ 1 >5 ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್, 160 PS ಗರಿಷ್ಟ ಪವರ್ ಹಾಗೂ 253 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ DCT ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಾಗಲಿದೆ.
ಹಾಗೆಯೆ 1.5 ಲೀಟರ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 115 PS ಗರಿಷ್ಟ ಪವರ್ ಹಾಗೂ 144Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ನೂತನ ಮಾದರಿಯು ಬಲಿಷ್ಠ ಎಂಜಿನ್ ನೊಂದಿಗೆ ಬರೋಬ್ಬರಿ 18 ರಿಂದ 20 ಕಿಲೋಮೀಟರ್ ಮೈಲೇಜ್ ನೀಡಲಿದೆ.
Hyundai Verna Car ಬೆಲೆ
ಇನ್ನು 6 Airbags, ISOFIX Child Seat Anchorage, EBD , ABS ESC, Front Parking Parking Sensors, All-Wheel Disc Brakes, TPMS, ADAS, Spot Alert, Lane Keep Assist and Adaptive Cruise Control ಸೇರಿದಂತೆ ಹತ್ತು ಹಲವು ಫೀಚರ್ ನೊಂದಿಗೆ 5 Star ಸುರಕ್ಷತಾ ರೇಟಿಂಗ್ ಪಡೆದಿರುವ Hyundai Verna ಮಾರುಕಟ್ಟೆಯಲ್ಲಿ 10.96 ರಿಂದ 17.38 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.