India v/s Pakistan: ಭಾರತ ಪಾಕಿಸ್ತಾನ ಪಂದ್ಯ ನೋಡಲು ಕಾಯುತ್ತಿದ್ದವರಿಗೆ ಬೇಸರದ ಸುದ್ದಿ, ಸ್ಟಾರ್ ಆಟಗಾರ ಹೊರಕ್ಕೆ.
ಇಂಡಿಯಾ ಪಾಕಿಸ್ತಾನ ಪಂದ್ಯದಿಂದ ಸ್ಟಾರ್ ಆಟಗಾರ ಹೊರಕ್ಕೆ.
ICC World Cup 2023 Update: ಸದ್ಯ ICC World Cup 2023 ಎಲ್ಲರಿಗೂ ಹೆಚ್ಚಿನ ಕ್ರೇಜ್ ಮೂಡಿಸುತ್ತಿದೆ ಎನ್ನಬಹುದು. ದೇಶದ ಜನತೆ Team India ದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರತಿ ಪಂದ್ಯವು ಬಹಳ ರೋಚಕ ತಿರುವನ್ನು ಪಡೆದುಕೊಳ್ಳುತ್ತಿದೆ.
ಸದ್ಯ ಕ್ರಿಕೆಟ್ ಅಭಿಮಾನಿಗಳು India V/s Pakistan ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಭಾರತ ತಂಡವು ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸುವುದನ್ನು ನೋಡಲು ಭಾರತೀಯರು ಕಾಯುತ್ತಿದ್ದಾರೆ. ಸದ್ಯ India V/s Pakistan ಪಂದ್ಯ ನಿರೀಕ್ಷೆ ಹೆಚ್ಚುತ್ತಿದ್ದಂತೆ ಭಾರತೀಯರಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ.
India v/s Pakistan
ಶನಿವಾರದಂದು ಅಹಮದಾಬಾದ್ ನಲ್ಲಿ ICC World Cup 2023 ಗಾಗಿ ಭಾರತ ಹಾಗೂ ಪಾಕಿಸ್ತಾನ ತಂಡ ಸೆಣೆಸಾಡಲಿದೆ. ಮತ್ತೊಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ಆಗಲಿದೆ. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನ ಭಾರತೀಯರಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಮುಂದೆ ನಡೆಯಲಿರುವ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಟೀಮ್ ಇಂಡಿಯಾದ ಶ್ರೇಷ್ಠ ಆಟಗಾರ ಹೊರನಡೆಯಲಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.
ಭಾರತ ಪಾಕಿಸ್ತಾನ ಪಂದ್ಯ ನೋಡಲು ಕಾಯುತ್ತಿದ್ದವರಿಗೆ ಬೇಸರದ ಸುದ್ದಿ
ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮ್ಯಾನ್ Shubman Gill ಅವರು ಕಾವೇರಿ ಆಸ್ಪ್ರತೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದಾರೆ. ವಿಶ್ವದ ನಂಬರ್ 2 ಏಕದಿನ ಬ್ಯಾಟರ್ ಡೇಗ್ಯೂನಿಂದ ಬಳಲುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಕಾವೇರಿ ಆಸ್ಪತ್ರೆಯ ವೈದ್ಯರ ತಂಡ ಹೋಟೆಲ್‌ನಲ್ಲಿ ಅವರ ರಕ್ತ ಪರೀಕ್ಷೆಗಳನ್ನು ನಡೆಸಿ ಅವರ ಪ್ಲೇಟ್‌ಲೆಟ್ ಸಂಖ್ಯೆಯನ್ನು ಮೇಲ್ವಿಚಾರಣೆ ಮಾಡಿದ್ದಾರೆ.
ಈ ಬಾರಿ ಮ್ಯಾಚ್ ನಲ್ಲಿ ಗಿಲ್ ಇರುವುದು ಡೌಟ್
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಶನಿವಾರ ಪಾಕಿಸ್ತಾನ ವಿರುದ್ದದ ಹೈವೋಲ್ಟೇಜ್ ಪಂದ್ಯಕ್ಕೆ ಗಿಲ್ ಭಾಗಿಯಾವುಗುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಗಿಲ್ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದರು ಪಂದ್ಯ ಆಡಲು ಹೆಚ್ಚು ಸಮಯ ಬೇಕಾಗಿದೆ. ಏಕೆಂದರೆ ಡೇಗ್ಯೂನಿಂದ ಚೇತರಿಸಿಕೊಂಡರು ದೇಹವು ಸ್ವಲ್ಪ ದಿನಗಳವರೆಗೆ ದುರ್ಬಲವಾಗಿರುತ್ತದೆ. ಹೀಗಾಗಿ ಗಿಲ್ ಮೈದಾನಕ್ಕೆ ಇಳಿಯುವುದು ಸೂಕ್ತವಲ್ಲ. ಶುಭಮನ್ ಗಿಲ್ ಪಾಕಿಸ್ತಾನ ತಂಡದ ವಿರುದ್ಧ ಕಣಕ್ಕಿಳಿಯುವುದು ಶೇ. 90 ರಷ್ಟು ಅಸಾಧ್ಯ ಎನ್ನಬಹುದು.