ICICI Bank EMI: ICICI ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ, UPI ಮೂಲಕ EMI ಪಾವತಿ ಮಾಡಿ.

ಈಗ ಐಸಿಐಸಿಐ ಬ್ಯಾಂಕ್ ಗ್ರಾಹಕರು UPI ಮೂಲಕ ತಮ್ಮ EMI ಪಾವತಿ ಮಾಡಬಹುದಾಗಿದೆ.

ICICI Bank EMI Facilities: ಹೊಸ ಹಣಕಾಸು ವರ್ಷ ಆರಂಭದಿಂದ ಅನೇಕ ನಿಯಮಗಳು ಬದಲಾಗುತ್ತಿವೆ. ಇನ್ನು ಅನೇಕ ಪ್ರತಿಷ್ಠಿತ ಬ್ಯಾಂಕ್ ಗಳು ಕೂಡ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲಿವೆ.

ಹೊಸ ನಿಯಮಗಳ ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ ಹೊಸ ಸೌಲಭ್ಯಗಳನ್ನು ಕೂಡ ಒದಗಿಸುತ್ತಿದೆ. ಇದೀಗ ICIC ಬ್ಯಾಂಕ್ (ICICI Bank) ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ಒದಗಿಸಿದೆ. ನೀವು ಐಸಿಐಸಿಐ ಬ್ಯಾಂಕ್ ನ ಗ್ರಾಹಕರಾಗಿದ್ದರೆ ಈ ಮಾಹಿತಿಯ ಆಬಗ್ಗೆ ತಿಳಿದುಕೊಳ್ಳಿ.

ICICI Bank EMI Facilities
Image Source: DNA India

ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ
ನೀವು ಐಸಿಐಸಿಐ ಬ್ಯಾಂಕ್ ಗ್ರಾಹಕರಾಗಿದ್ದರೆ ಇದೀಗ ಬ್ಯಾಂಕ್ ನಿಮಗೆ ಹೊಸ ಸೌಲಭ್ಯವನ್ನು ಒದಗಿಸಲಿದೆ. ನೀವು UPI ಅನ್ನು ಬಳಸುತ್ತಿದ್ದರೆ ಈ ಹೊಸ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಇನ್ನುಮುಂದೆ ಬ್ಯಾಂಕ್ ಹೊಸ ಸೌಲಭ್ಯವನ್ನು ನೀಡಲಿದೆ.

ICICI Bank EMI Facilities
Image Source: Zee Business

ಯುಪಿಐ ವಹಿವಾಟಿನಲ್ಲಿ EMI ಆಯ್ಕೆ
ಬ್ಯಾಂಕ್ ತನ್ನ ಗ್ರಾಹಕರಿಗೆ ‘ಈಗ ಖರೀದಿಸಿ, ನಂತರ ಪಾವತಿಸಿ’ ಆಯ್ಕೆಯನ್ನು ನೀಡಲಿದೆ. ಈ ಸೇವೆಗೆ ಅರ್ಹರಾಗಿರುವ ಐಸಿಐಸಿಐ ನ ಗ್ರಾಹಕರು ಐಸಿಐಸಿಐ ಬ್ಯಾಂಕ್ QR ಕೋಡ್ ಅನ್ನು ಸ್ಕಾನ್ ಮಾಡುವ ಮೂಲಕ ಯುಪಿಐ ಪಾವತಿಗಾಗಿ EMI ಸೇವೆಯನ್ನು ಪಡೆಯಬಹುದು. ಸೇವೆಗೆ ಅರ್ಹರಾಗಿರುವ ಗ್ರಾಹಕರು EMI ಆಯ್ಕೆಯನ್ನು ಆರಿಸಿಕೊಳ್ಳಬಹುದು.

ಈ ಸೇವೆಯನ್ನು ಆರಿಸಿದ ಗ್ರಾಹಕರು ಅಂಗಡಿಯಲ್ಲಿ ವ್ಯಾಪಾರಿ QR ಕೋಡ್ ಅನ್ನು ಸ್ಕಾನ್ ಮಾಡುವ ಮೂಲಕ ಸರಕುಗಳನ್ನು ಖರೀದಿಸಬಹುದು. ಈ ಹಣವನ್ನು EMI ಗಳಲ್ಲಿ ಪಾವತಿಸಬಹುದು. 10,000 ಅಥವಾ ಹೆಚ್ಚಿನ ಮೌಲ್ಯದ ಖರೀದಿಯ ಮೇಲೆ ಮೂರು, ಆರು ಮತ್ತು ಒಂಬತ್ತು ತಿಂಗಳುಗಳಲ್ಲಿ EMI ಮೂಲಕ ಪಾವತಿಗಳನ್ನು ಮಾಡಲು ಇದು ಸಹಾಯವಾಗಲಿದೆ. iMobile Pay ಅಪ್ಲಿಕೇಶನ್ ಅನ್ನು ಬಳಸಿ ಈ ಸೇವೆಯನ್ನು ಪಡೆದುಕೊಳ್ಳಬಹುದು.

Join Nadunudi News WhatsApp Group

ICICI Bank EMI Facilities
Image Source: Mint

Join Nadunudi News WhatsApp Group