Railway Luggage Rules: ರೈಲ್ವೆ ಪ್ರಯಾಣಿಕರಿಗೆ ಹೊಸ ನಿಯಮ, ಜಾಸ್ತಿ ತಗೆದುಕೊಂಡು ಹೋದರೆ ದಂಡ ಕಟ್ಟಬೇಕು.
Indian Railway New Luggage Rules For Passengers: ಜನಸಾಮಾನ್ಯರು ಹೆಚ್ಚಾಗಿ ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಲು ರೈಲು ಪ್ರಯಾಣವನ್ನು ಇಷ್ಟ ಪಡುತ್ತಾರೆ.
ಇದೀಗ ಭಾರತೀಯ ರೈಲ್ವೆ (Indian Railway) ಇಲಾಖೆ ರೈಲು ಪ್ರಯಾಣದ ನಿಯಮದಲ್ಲಿ ಬಾರಿ ಬದಲಾವಣೆಯನ್ನು ತಂದಿದೆ. ರೈಲು ಪ್ರಯಾಣ ಮಾಡುವವರು ಹೆಚ್ಚಿನ ಪ್ರಮಾಣದ ಲಗೇಜ್ (Luggage) ಗಳನ್ನೂ ತಂದರೆ ದಂಡ ವಿಧಿಸುವಂತೆ ಸೂಚನೆ ನೀಡಿದೆ.
ರೈಲುಗಳಲ್ಲಿ ಹೆಚ್ಚುವರಿ ಲಗೇಜ್ ತರುವವರಿಗೆ ಹೊಸ ನಿಯಮ
ರೈಲುಗಳಲ್ಲಿ ಹೆಚ್ಚುವರಿ ಲಗೇಜ್ ನೊಂದಿಗೆ ಪ್ರಯಾಣಿಸುವವ ಪ್ರಯಾಣಿಕರು ಇನ್ನು ಮುಂದೆ ಭಾರತೀಯ ರೈಲ್ವೆ ದಂಡ ಪಾವತಿಸಲು ಸಿದ್ಧರಾಗಿರಬೇಕು.
ಹತ್ತಾರು ವರ್ಷಗಳಿಂದ ಹೆಚ್ಚುವರಿ ಲಗೇಜ್ ನೊಂದಿಗೆ ಪ್ರಯಾಣಿಸುವವರನ್ನು ಕಂಡು ಕಣದವರಂತೆ ರೈಲ್ವೆ ಇಲಾಖೆ ನಡೆಸಿಕೊಂಡಿದೆ. ಈ ಕುರಿತು ಹೊಸ ನಿಯಮವನ್ನು ಜಾರಿಗೊಳಿಸಿದೆ. ವಿಮಾನ ಪ್ರಯಾಣದಂತೆ ರೈಲು ಪ್ರಯಾಣದಲ್ಲೂ ಕೂಡ ಹೆಚ್ಚುವರಿ ಲಗೇಜ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಈ ಬಗ್ಗೆ ಟ್ವಿಟರ್ ನ ಮೂಲಕ ಸಚಿವಾಲಯ ಜನರಿಗೆ ಮಾಹಿತಿ ತಿಳಿಸಿದೆ. ‘ಪ್ರಯಾಣದ ಸಮಯದಲ್ಲಿ ನಿಮ್ಮೊಂದಿಗೆ ಹಲವಾರು ವಿಷಯಗಳಿದ್ದರೆ ಯಾನದ ಸಂತೋಷದ ಅರ್ಧದಷ್ಟು ಹೆಚ್ಚು ಲಗೇಜ್ ಇಟ್ಟುಕೊಂಡು ರೈಲಿನಲ್ಲಿ ಪ್ರಯಾಣಿಸಬೇಡಿ. ಜಾಸ್ತಿ ಇದ್ದಾರೆ ಪಾರ್ಸೆಲ್ ಆಫೀಸ್ ಗೆ ಹೋಗಿ ಲಗೇಜ್ ಬುಕ್ ಮಾಡಿ’ ಎಂದು ಹೇಳಲಾಗಿದೆ.
ನೀವು ಪ್ರಥಮ ದರ್ಜೆ ಎಸಿಯಲ್ಲಿ ಪ್ರಯಾಣಿಸುತ್ತಿದ್ದರೆ, 70 ಕೆಜಿ ವರೆಗೆ ಉಚಿತವಾಗಿ ಅನುಮತಿಸಲಾಗಿದೆ. ಎಸಿ 2 -ಟೈಯರ್ ನ ಮಿತಿ 50 ಕೆಜಿ. ಎಸಿ 3 -ಟೈರ್ ಸಲೀಪರ್, ಎಸಿ ಚೆರ್ ಕಾರ್ ಮತ್ತು ಸಲೀಪರ್ ಕ್ಲಾಸ್ ಗಳಲ್ಲಿ 40 ಕೆಜಿ ವರೆಗೆ ಉಚಿತವಾಗಿ ಅನುಮತಿಸಲಾಗಿದೆ.
ನಿವು ಎರಡನೇ ತರಗತಿಯಲ್ಲಿ ಪ್ರಯಾಣಿಸುತ್ತಿದ್ದರೆ, ಈ ಮಿತಿಯು 25 ಕೆಜಿ ವರೆಗೆ ಇರುತ್ತದೆ. ಸಾಮಾನು ಸರಂಜಾಮುಗೆ ಕನಿಷ್ಠ ಶುಲ್ಕ 30 ರೂ. 70 -80 ಕೆಜಿ ವರೆಗೆ ಹೆಚ್ಚುವರಿ ಲಗೇಜ್ ಸಾಗಿಸಲು ಪ್ರಯಾಣಿಕರು ಈಗ ತಮ್ಮ ಬ್ಯಾಗೇಜ್ ಅನ್ನು ಕಾಯ್ದಿರಿಸಬೇಕು. ಪ್ರಯಾಣದ ವೇಳೆ ಹೆಚ್ಚುವರಿ ಲಗೇಜ್ ಅನ್ನು ಸಾಗಿಸುತ್ತಿದ್ದರೆ ಆಗ 654 ರೂ. ದಂಡವನ್ನು ಪಾವತಿಸಬೇಕಾಗುತ್ತದೆ.