NPS: 200 ರೂ ಹೂಡಿಕೆ ಮಾಡಿದರೆ ಸಿಗಲಿದೆ ಪ್ರತಿ ತಿಂಗಳು 50,000 ರೂ ಪಿಂಚಣಿ, ಜಾರಿಗೆ ಬಂತು ಇನ್ನೊಂದು ಪಿಂಚಣಿ ಯೋಜನೆ.
ಬಡ ನಾಗರೀಕರಿಗಾಗಿ ಕೇಂದ್ರ ಸರ್ಕಾರ ಹೊಸ ಪಿಂಚಣಿ ಯೋಜನೆ ಯನ್ನು ಜಾರಿಗೆ ತಂದಿದೆ.
National Pension Scheme: ಸರ್ಕಾರದ ಪಿಂಚಣಿ (Pension Scheme) ಯೋಜನೆಯಲ್ಲಿನ ಹೂಡಿಕೆಯು ಹೆಚ್ಚು ಸುರಕ್ಷಿತವಾಗಿರುತ್ತದೆ. ಕೇಂದ್ರ ಸರ್ಕಾರ ದೇಶದ ಬಡ ನಾಗರೀಕರಿಗಾಗಿ ವಿವಿಧ ರೀತಿಯ ಯೋಜನೆಯನ್ನು ಬಿಡುಗಡೆ ಮಾಡುತ್ತಿದೆ.
ಇನ್ನು ಕೇಂದ್ರ ಸರ್ಕಾರ ಹಲವು ರೀತಿಯ ಪಿಂಚಣಿ ಯೋಜನೆಯನ್ನು ಕೂಡ ಜಾರಿಗೊಳಿಸುತ್ತಿದೆ. ಇನ್ನು 60 ವರ್ಷ ಮೇಲ್ಪಟ್ಟವರು ಈ ಹೊಸ ಯೋಜನೆಯಡಿಯಲ್ಲಿ ಮಾಸಿಕ ಪಿಂಚಣಿಯನ್ನು ಪಡೆಯಬಹುದು.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)
ಕೇಂದ್ರ ಸರ್ಕಾರ ಉದ್ಯೋಗಿಗಳ ನಿವೃತ್ತಿಯ ನಂತರ ಪಿಂಚಣಿಯ ಲಾಭವನ್ನು ಪಡೆಯಲು ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿನ ಹೂಡಿಕೆಯು ಹೆಚ್ಚಿನ ಲಾಭವನ್ನು ನೀಡಲಿದೆ. ಈ ಯೋಜನೆಯಡಿಯಲ್ಲಿ ನೀವು ಕಡಿಮೆ ಮೊತ್ತದ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬಹುದು. ಮಾಹಿತಿಯ ಪ್ರಕಾರ, ನೀವು 25 ವರ್ಷ ವಯಸ್ಸಿನಲ್ಲಿ ತಿಂಗಳಿಗೆ 6,000 ರೂ. ಹೂಡಿಕೆ ಮಾಡಬೇಕಾಗುತ್ತದೆ.
200 ರೂ ಹೂಡಿಕೆ ಮಾಡಿದರೆ ಸಿಗಲಿದೆ ಪ್ರತಿ ತಿಂಗಳು 50,000 ರೂ ಪಿಂಚಣಿ
ಈ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ನೀವು ಪ್ರತಿನಿತ್ಯ 200 ರೂ. ಹೂಡಿಕೆ ಮಾಡಬೇಕು. ದಿನಕ್ಕೆ 200 ರೂ. ಅಂದರೆ ಮಾಸಿಕವಾಗಿ 6,000 ರೂ. ಪಾವತಿಸಬೇಕಾಗುತ್ತದೆ. ನಂತರ 60 ವರ್ಷಗಳ ಬಳಿಕ ಒಟ್ಟು ಮೊತ್ತ 50,000 ರೂ. ಹಣವನ್ನು ಪಡೆಯಬಹುದು.ಈ ಯೋಜನೆಯ ಅಡಿಯಲ್ಲಿ NPS ಶ್ರೇಣಿ 1 ಮತ್ತು NPS ಶ್ರೇಣಿ 2 ಎಂಬ ಎರಡು ರೀತಿಯ ಖಾತೆಗಳಿವೆ. PF ಠೇವಣಿ ಹೊಂದಿರದ ಜನರು 500 ರೂ. ಠೇವಣಿ ಮಾಡುವ ಮೂಲಕ ಶ್ರೇಣಿ 1 ಖಾತೆಯನ್ನು ತೆರೆಯಬಹುದು.
ನಿಮ್ಮ ಠೇವಣಿಯ ಮೇಲೆ 10% ಆದಾಯವನ್ನು ಊಹಿಸಿದರೆ, ಅದರ ಒಟ್ಟು ಕಾರ್ಪಸ್ ಮೌಲ್ಯವು ರೂ 2,54,50,906 ಆಗುತ್ತದೆ. ನಿಮ್ಮ ಮೆಚ್ಯುರಿಟಿ ಆದಾಯದ 40% ರಿಂದ ನೀವು NPS ವರ್ಷಾಶನವನ್ನು ಖರೀದಿಸಿದರೆ ನಿಮ್ಮ ಖಾತೆಯಲ್ಲಿ 1,01,80,362 ರೂ. ಇದರ ಮೇಲೆ 10 % ಆದಾಯವನ್ನು ಊಹಿಸಿದರೆ ನಿಮ್ಮ ಖಾತೆಯಲ್ಲಿ ಒಟ್ಟು ಠೇವಣಿ 1,52,70,000 ರೂ. ಆಗುತ್ತದೆ. ನೀವು 36 ವರ್ಷಗಳನ್ನು ಪೂರ್ಣಗೊಳಿಸಿದಾಗ NPS ನಿಮಗೆ 50,000 ರೂ. ಗಳನ್ನೂ ಪಿಂಚಣಿಯಾಗಿ ನೀಡುತ್ತದೆ.