Ration Card: ಇಂತಹ 4 ಸಂದರ್ಭದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದು, ಹೊಸ ನಿಯಮ ಜಾರಿಗೆ

ಇದೀಗ ರೇಷನ್ ಕಾರ್ಡ್ ಲಾಭ ಪಡೆಯುತ್ತಿರುವವರಿಗೆ ಮಹತ್ವದ ಸೂಚನೆ ಒಂದನ್ನು ಕೇಂದ್ರ ಸರ್ಕಾರ ಹೊರಡಿಸಿದೆ.

Ration Card Updates; ಪಡಿತರ ಚೀಟಿ (Ration Card) ಹೊಂದಿರುವವರಿಗೆ ಸರ್ಕಾರದಿಂದ ಮಹತ್ವದ ಸೂಚನೆ ನೀಡಲಾಗಿದೆ. ಪಡಿತರ ಚೀಟಿ ಹೊಂದಿದ್ದು ಅದರಿಂದ ಸರ್ಕಾರದ ಪ್ರಯೋಜನಗಳನ್ನ ಪಡೆದುಕೊಳ್ಳುತ್ತಿದ್ದರೆ ಈ ನಿಯಮಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಇಂದು ಲಕ್ಷಾಂತರ ಪಡಿತರ ಚೀಟಿ ಹೊಂದಿರುವವರು ಉಚಿತ ಪಡಿತರ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.

ಕೇಂದ್ರ ಸರ್ಕಾರ ಪ್ರತಿ ರಾಜ್ಯಗಳಿಗೂ ಕೂಡ ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದೆ. ಎರಡು ವರ್ಷಗಳಿಂದ ಉಚಿತ ಅಕ್ಕಿ ನೀಡಲಾಗುತ್ತಿದ್ದು ಈ ವರ್ಷವೂ ಇದು ಮುಂದುವರೆದಿದೆ. ಇದೀಗ ರೇಷನ್ ಕಾರ್ಡ್ ಲಾಭ ಪಡೆಯುತ್ತಿರುವವರಿಗೆ ಮಹತ್ವದ ಸೂಚನೆ ಒಂದನ್ನು ಕೇಂದ್ರ ಸರ್ಕಾರ ಹೊರಡಿಸಿದೆ.

Ration Card Latest Update
Image Credit: News 18

ಸರ್ಕಾರದ ಹೊಸ 4 ಮಾನದಂಡಗಳು ಯಾವವು?

• ಪಡಿತರ ಕಾರ್ಡ್ ಹೊಂದಿರುವವರು ಸ್ವಂತ ದುಡಿಮೆಯಿಂದ ನೂರು ಚದರ್ ಮೀಟರ್ ವಿಸ್ತೀರ್ಣದ ಫ್ಲ್ಯಾಟ್ ಅಥವಾ ಮನೆ ಹೊಂದಿದ್ದರೆ ಅಂತವರ ರೇಷನ್ ಕಾರ್ಡ್ ರದ್ದುಪಡಿಸಲಾಗುತ್ತದೆ
• ನಾಲ್ಕು ಚಕ್ರದ ವಾಹನ ಟ್ಯಾಕ್ಟರ್ ಕಾರು ಹೊಂದಿದ್ದರೆ ಅಂತವರ ರೇಷನ್ ಕಾರ್ಡ್ ರದ್ದಾಗುತ್ತದೆ
• ಶಸ್ತ್ರಾಸ್ತ್ರ ಪರವಾನಿಗಿ ಹೊಂದಿರುವ ಕುಟುಂಬದವರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಹಾಗೆ ಇಲ್ಲ
• ಗ್ರಾಮೀಣ ಭಾಗದಲ್ಲಿ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂಪಾಯಿ ಹಾಗೂ ನಗರ ಭಾಗದಲ್ಲಿ 3 ಲಕ್ಷ ರೂಪಾಯಿಗಳನ್ನು ಮೀರಿದರೆ ಅಂತವರಿಗೆ ರೇಷನ್ ಕಾರ್ಡ್ ಪ್ರಯೋಜನ ಸಿಗುವುದಿಲ್ಲ.

ಸರ್ಕಾರದ ಈ ನಾಲ್ಕು ಹೊಸ ಮಾನದಂಡಗಳ ಒಳಗೆ ಬಾರದೆ ಇರುವವರು ತಮ್ಮ ಬಳಿ ಇರುವ ರೇಷನ್ ಕಾರ್ಡ್ ಅನ್ನು ತಾವಾಗಿಯೇ ತಶೀಲ್ದಾರ್ ಅಥವಾ ಡಿ ಎಸ್ ಓ ಕಚೇರಿಯಲ್ಲಿ ಸರೆಂಡರ್ ಮಾಡಬೇಕು ಎಂದು ಆಹಾರ ಇಲಾಖೆ ಮನವಿ ಮಾಡಿದೆ. ಸರ್ಕಾರ ಪರಿಶೀಲನೆ ನಡೆಸಿ ರದ್ದು ಪಡಿಸುವುದಕ್ಕಿಂತ ಮೊದಲು ತಾವಾಗಿಯೇ ಸರೆಂಡರ್ ಮಾಡಿದರೆ ಯಾವುದೇ ರೀತಿಯ ದಂಡ ಪಾವತಿ ಮಾಡಬೇಕಾಗಿಲ್ಲ. ಆದರೆ ಈ ರೀತಿ ಮಾನದಂಡಗಳ ಬಗ್ಗೆ ಅರಿವು ಇದ್ದು ಉಚಿತ ಪಡಿತರ ಪಡೆದುಕೊಳ್ಳುತ್ತಿದ್ದರೆ ಅಂತವರ ರೇಷನ್ ಕಾರ್ಡ್ ತಕ್ಷಣಕ್ಕೆ ರದ್ದಾಗುತ್ತದೆ ಹಾಗೂ ದಂಡ ಪಾವತಿಸಬೇಕಾದ ಪರಿಸ್ಥಿತಿಯು ಎದುರಾಗಬಹುದು.

Join Nadunudi News WhatsApp Group

ration card amendment
Image Credit: Original Source

ಪಡಿತರ ಚೀಟಿ ಸರೆಂಡರ್ ಮಾಡಿ!

ಸರ್ಕಾರದ ನಿಯಮಾನುಸಾರ ಪಡಿತರ ಚೀಟಿ ಹೊಂದಿರುವವರು ತಮ್ಮ ಪಡಿತರ ಚೀಟಿಯನ್ನು ಈ ನಾಲ್ಕು ಮಾನದಂಡಗಳ ಆಧಾರದ ಮೇಲೆ ಸರ್ಕಾರಕ್ಕೆ ಸರೆಂಡರ್ ಮಾಡದೆ ಇದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ತನಿಖೆ ನಡೆಸಿ ಅಂತವರ ಕಾರ್ಡ್ ರದ್ದುಪಡಿಸಲಾಗುವುದು ಜೊತೆಗೆ ಬಹಳ ಸಮಯದಿಂದ ಉಚಿತ ಪಡಿತರ ಪಡೆದುಕೊಳ್ಳುತ್ತಿದ್ದು ಮತ್ತೆ ಅದೇ ಕಾರ್ಡ್ ಬಳಸಿ ಪಡಿತರ ಪಡೆದುಕೊಳ್ಳಲು ಪ್ರಯತ್ನಿಸಿದರೆ ಅಂತಹ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಲಿದೆ ಸರ್ಕಾರ. ಆದ್ದರಿಂದ ರೇಷನ್ ಕಾರ್ಡ್ ಹೊಂದಿರುವವರು ಈ ಮಾನದಂಡಗಳನ್ನು ತಲೆಯಲ್ಲಿಟ್ಟುಕೊಂಡು ನಿಮ್ಮ ಬಳಿ ಇರುವ ರೇಷನ್ ಕಾರ್ಡ್ ಮಾನದಂಡಕ್ಕೆ ಒಳಪಡದೆ ಇದ್ದರೆ ತಕ್ಷಣವೇ ಸಂಬಂಧಪಟ್ಟ ಇಲಾಖೆಗೆ ಹಿಂತಿರುಗಿಸಿ.

Join Nadunudi News WhatsApp Group