Ads By Google

iKall K510: ನೋಡಲು ಐಫೋನ್ ರೀತಿಯಲ್ಲಿ ಕಾಣುವ ಈ ಫೋನ್ ಬೆಲೆ ಕೇವಲ 4499 ರೂ ಮಾತ್ರ, ಆಕರ್ಷಕ ಫೀಚರ್.

iKall K510 Smartphone Discount

Image Source: Youtube

Ads By Google

iKall K510 Smartphone Discount: ಸದ್ಯ ಮಾರುಕಟ್ಟೆಯಲ್ಲಿ ಹೊಸ ಹೊಸ ವಿನ್ಯಾಸದ ಸ್ಮಾರ್ಟ್ ಫೋನ್ ಗಳು ಲಭ್ಯವಾಗುತ್ತಿದೆ. ವಿವಿಧ ಸ್ಮಾರ್ ಫೋನ್ ತಯಾರಕ ಕಂಪನಿಗಳು ಹತ್ತು ಹಲವು ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುತ್ತಿದೆ.

ಇನ್ನು ಮಾರುಕಟ್ಟೆಯಲ್ಲಿ iPhone ಹೆಚ್ಚು ಟ್ರೆಂಡ್ ನಲ್ಲಿದೆ ಎನ್ನಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಐಫೋನ್ ಅನ್ನು ಖರೀದಿಸುತ್ತಿದ್ದಾರೆ. ಇನ್ನು ಐಫೋನ್ ದುಬಾರಿಯಾಗಿರುವ ಕಾರಣ ಅದೆಷ್ಟೋ ಜನರು ಐಫೋನ್ ಖರೀದಿಯ ಆಸೆಯನ್ನು ಕೈಬಿಟ್ಟಿದ್ದಾರೆ ಎನ್ನಬಹುದು.

Image Credit: Original Source

ಐಫೋನ್ ನಂತೆಯೇ ಕಾಣಲಿದೆ ಈ ಸ್ಮಾರ್ಟ್ ಫೋನ್
ಸದ್ಯ ಮಾರುಕಟ್ಟೆಯಲ್ಲಿ ಐಫೋನ್ ರೀತಿಯ ವಿನ್ಯಾಸವಿರುವ ಹೊಸ ಸ್ಮಾರ್ಟ್ ಫೋನ್ ಲಾಂಚ್ ಆಗಿದೆ. ಈ ನೂತನ ಸ್ಮಾರ್ಟ್ ಫೋನ್ ಐಫೋನ್ ನ ವಿನ್ಯಾಸವನ್ನು ಹೊಂದಿರುವುದು ಬಹಳ ವಿಶೇಷವಾಗಿದೆ. ಐಫೋನ್ ರೀತಿಯ ಲುಕ್ ನಲ್ಲಿರುವ ಈ ಸ್ಮಾರ್ಟ್ ಬೆಲೆ ಕೂಡ ಅತಿ ಕಡಿಮೆಯಾಗಿದೆ. ಇದೀಗ ನಾವು ಈ ಲೇಖನದಲ್ಲಿ ಐಫೋನ್ ರೀತಿ ಇರುವ ಸ್ಮಾರ್ಟ್ ಫೋನ್ ಬಗ್ಗೆ ಮಾಹಿತಿ ತಿಳಿಯೋಣ.

ನೋಡಲು ಐಫೋನ್ ರೀತಿಯಲ್ಲಿ ಕಾಣುವ ಈ ಫೋನ್ ಬೆಲೆ ಕೇವಲ 4499 ರೂ. ಮಾತ್ರ
ಐಫೋನ್ ರೀತಿಯ ವಿನ್ಯಾಸ ಹೊಂದಿರುವ Smartphone ನ ಹೆಸರು iKall K510 Smartphone ಆಗಿದೆ. ಈ Smartphone ನ ದರ 6,599 ರೂ. ಆಗಿದೆ. ಅಮೆಜಾನ್ ಈ ಫೋನ್‌ ನಲ್ಲಿ 32% ರಿಯಾಯಿತಿಯನ್ನು ಘೋಷಿಸಿದೆ. ಆದ್ದರಿಂದ ನೀವು ಇದೀಗ ಅದನ್ನು ಕೇವಲ 4,499 ರೂ. ಗಳಲ್ಲಿ ಖರೀದಿಸಬಹುದು. ಈ ಫೋನ್ ಅನ್ನು EMI ಮೂಲಕ ಖರೀದಿಸಲು ಸಹ ನಿಮಗೆ ಅನುಮತಿಸಲಾಗಿದೆ.

ಮಾಸಿಕ 218 ರೂ. ಗಳನ್ನೂ ಪಾವತಿಸುವ ಮೂಲಕ ಫೋನ್ ಅನ್ನು ಖರೀದಿಸಬಹುದು. Amazon Pay , ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಗಳು 1 ಆಫರ್ ನಲ್ಲಿ 202 EMI ಬಡ್ಡಿ ಉಳಿತಾಯವನ್ನು ನೀಡುತ್ತದೆ, ಆಯ್ದ ಕ್ರೆಡಿಟ್ ಕಾರ್ಡ್‌ ಗಳಲ್ಲಿ 850 ರೂ. ಡಿಸ್ಕೌಂಟ್ ಸಿಗಲಿದೆ. ಈ ಎಲ್ಲ ಆಫರ್ ನ ಮೂಲಕ ಇನ್ನು ಅಗ್ಗದ ಬೆಲೆಯಲ್ಲಿ ನೀವು ಸ್ಮಾರ್ಟ್ ಫೋನ್ ನ್ನು ಖರೀದಿಸಬಹುದು.

Image Credit: Original Source

iKall K510 Smartphone ಫೀಚರ್
iKall K510 Smartphone 5-ಇಂಚಿನ LEC ಡಿಸ್ಪ್ಲೇ ಜೊತೆಗೆ 480 x 854 ಪಿಕ್ಸೆಲ್‌ ಗಳ ಸ್ಕ್ರೀನ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು Android v13 OS, 1.3GHz, ಕ್ವಾಡ್ ಕೋರ್ ಪ್ರೊಸೆಸರ್, 2GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಮೀಸಲಾದ ಮೆಮೊರಿ ಕಾರ್ಡ್ ಸ್ಲಾಟ್ ಆಯ್ಕೆಯೂ ಇದೆ, ಅದರ ಮೂಲಕ ನೀವು 256GB ವರೆಗೆ ಸಂಗ್ರಹಣೆಯನ್ನು ವಿಸ್ತರಿಸಬಹುದು. ಇನ್ನು iKall K510 Smartphone ಟ್ರಿಪಲ್ ಕ್ಯಾಮರಾವನ್ನು ಹೊಂದಿದ್ದು, 3000mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in