Illegal Marriage: ಕಾನೂನು ಬಾಹಿರವಾಗಿ ಮದುವೆಯಾಗಿದ್ದರು ಪತ್ನಿ ಜೀವನಾಂಶ ಪಡೆಯಲು ಅರ್ಹಳೆ, ಕಾನೂನಿನ ನಿಯಮ ತಿಳಿದುಕೊಳ್ಳಿ.
ಕಾನೂನು ಬದ್ದವಾಗಿರದ ಮದುವೆಯ ನಂತರ ವಿಚ್ಛೇದನ ಪಡೆದ ಪತ್ನಿಯು ಜೀವನಾಂಶ ಪಡೆಯಲು ಅರ್ಹಳೆ ಎನ್ನುವ ಕುರಿತು ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
Illegal Marriage Sustenance: ಭಾರತೀಯ ನ್ಯಾಯಾಲಯದಲ್ಲಿ (Indian Law) ಸಾಕಷ್ಟು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲವು ನ್ಯಾಯಪರವಾದ ಆದೇಶವನ್ನು ಹೊರಡಿಸುತ್ತಲೇ ಇರುತ್ತದೆ. ಆಸ್ತಿಯ ವಿಚಾರವಾಗಿ ನಡೆದ ಸಾಕಷ್ಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋರ್ಟ್ ಅನೇಕ ರೀತಿಯ ತೀರ್ಪುಗಳನ್ನು ನೀಡಿದೆ. ಇನ್ನು ಕಾನೂನಿನಲ್ಲಿ ವಿಚ್ಛೇದನ ಪಡೆಯಲು ಅನೇಕ ನಿಯಮವನ್ನು ಜಾರಿಗೊಳಿಸಲಾಗಿದೆ.
ದಂಪತಿಗಳು ವಿಚ್ಛೇದನ ಪಡೆಯಲು ನಿರ್ಧರಿಸಿದರೆ ಕಾನೂನಿನ ನಿಯಮದ ಪ್ರಕಾರವೇ ವಿಚ್ಛೇದನವನ್ನು ಪಡೆಯಬೇಕು. ಇದೀಗ ವಿಚ್ಛೇಧನ (Divorce) ಪಡೆದ ದಂಪತಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲದಲ್ಲಿ ವಿವಿಧ ರೀತಿಯ ಪ್ರಕರಣ ದಾಖಲಾಗಿರುತ್ತದೆ. ಇನ್ನು ಕಾನೂನು ಬಾಹಿರವಾಗಿರುವ ಮದುವೆಯು ವಿಚ್ಛೇದನ ಪಡೆದ ನಂತರ ಪತ್ನಿಯು ಜೀವನಾಂಶವನ್ನು ಪಡೆಯಲು ಅರ್ಹಳೆ ಎನ್ನುವ ಕುರಿತು ನ್ಯಾಯಾಲಯ ಮಹತ್ವದ ತೀರ್ಪನ್ನು ಹೊರಡಿಸಿದೆ.
ಯಾವ ರೀತಿಯ ಮದುವೆ ಕಾನೂನು ಬಾಹಿರವಾಗಿರುತ್ತದೆ.
ಸಾಮಾನ್ಯವಾಗಿ ಪುರುಷರು ಒಂದಕ್ಕಿಂತ ಹೆಚ್ಚು ಮದುವೆ ಆಗುತ್ತಾರೆ. ಹಿಂದೂ ಧರ್ಮದ ಕಾನೂನಿನ ಪ್ರಕಾರ ಪುರುಷರು ಬಹುಪತ್ನಿಯನ್ನು ಹೊಂದಬಾರದು. ಒಂದಕ್ಕಿಂತ ಹೆಚ್ಚಿನ ಮದುವೆಯು ಹಿಂದೂ ಧರ್ಮದಲ್ಲಿ ಕಾನೂನು ಬಾಹಿರವಾಗಿದೆ. ಇನ್ನು 1956 ರಲ್ಲಿ ಭಾರತೀಯ ಕಾನೂನಿನಲ್ಲಿ ಬಹುಪತ್ನಿತ್ವವು ಕಾನೂನುಬಾಹಿರವಾಗಿದೆ.
ಮುಸ್ಲಿಮರನ್ನು ಹೊರತುಪಡಿಸಿ ಇತರ ಎಲ್ಲಾ ನಾಗರಿಕರಿಗೆ ಬಹುಪತ್ನಿತ್ವನ್ನು ಕಾನೂನು ಬಾಹಿರವೆಂದು ಪರಿಗಣಿಸಲಾಗಿದೆ. ಒಬ್ಬ ವ್ಯಕ್ತಿಯು ಈಗಾಗಲೇ ಒಂದು ಮದುವೆಯಾಗಿದ್ದು, ಇನ್ನೊಂದು ಮದುವೆಯಾದರೆ ಅದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.
ಕಾನೂನು ಬಾಹಿರವಾಗಿ ಮದುವೆಯಾಗಿದ್ದರು ಪತ್ನಿ ಜೀವನಾಂಶ ಪಡೆಯಲು ಅರ್ಹಳೆ
ಮದುವೆಯು ಕಾನೂನು ಬದ್ದವಾಗಿಲ್ಲದಿದ್ದರು ಕೂಡ ಸಿಆರ್ ಪಿಸಿಯ ಸೆಕ್ಷನ್ 125 ರ ಅಡಿಯಲ್ಲಿಪತ್ನಿಯು ಜೀವನಾಂಶವನ್ನು ಪಡೆಯಲು ಅರ್ಹಳು ಎಂದು ಮದ್ರಾಸ್ ಹೈಕೋರ್ಟ್ ಆದೇಶವನ್ನು ನೀಡಿದೆ.
ಇನ್ನು ಪತಿಗಿಂತ ಪತ್ನಿಗೆ ಹೆಚ್ಚು ಸಂಭಾವನೆ ಇದ್ದರೆ ಜೀವನಾಂಶ ನೀಡುವ ಅಗತ್ಯ ಇಲ್ಲ ಎಂದು ಕೋರ್ಟ್ ಆದೇಶ ನೀಡಿತ್ತು. ಪತ್ನಿಯೇ ಹೆಚ್ಚು ಸಂಪಾದನೆ ಮಾಡುತ್ತಿದ್ದರೆ ಅಂತಹ ಪತ್ನಿಯರಿಗೆ ಜೀವನಾಂಶ ನೀಡುವ ಅಗತ್ಯ ಇಲ್ಲ ಎಂದು ಆದೇಶ ನೀಡಲಾಗಿದೆ.