Image Storing: ಐಫೋನ್ ಇರುವ ಎಲ್ಲರಿಗೂ ಕಂಪನಿಯಿಂದ ಹೊಸ ಆದೇಶ, ರದ್ದಾಯ್ತು ಈ ಫೀಚರ್
ಐಫೋನ್ ಗಳಲ್ಲಿ ಫೋಟೋ ಸ್ಟ್ರೀಮ್ ಪಿಚರ್ ಜುಲೈ 26 ರಿಂದ ಕಾರ್ಯನಿರ್ವಹಿಸುವುದಿಲ್ಲ ,ಇಲ್ಲಿದೆ ಮಾಹಿತಿ
Photo Stream Feature Not Available From July 26: ದೇಶಿಯ ಮಾರುಕಟ್ಟೆಯಲ್ಲಿ Apple ಬ್ರಾಂಡ್ ನ ಫೋನ್ ಗಳು ಹೆಚ್ಚು ದುಬಾರಿಯಾಗಿದೆ. ಐಫೋನ್(Iphone) ಬಳಕೆದಾರರರಿಗೆ ಹೆಚ್ಚಿನ ಫೀಚರ್ ಗಳನ್ನೂ ನೀಡುತ್ತದೆ. ಇನ್ನಿತರ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಐಫೋನ್ ನಲ್ಲಿ ಹೆಚ್ಚಿನ ಫೀಚರ್ ಗಳು ಲಭ್ಯವಿರುತ್ತದೆ.
ಮಾರುಕಟ್ಟೆಯಲ್ಲಿ ಐಫೋನ್ ಗಳು ಸ್ವಲ್ಪ ಮಟ್ಟಿಗೆ ದುಬಾರಿಯಾಗಿವೆ. ಆದರೂ ಕೂಡ ಐಫೋನ್ ಮೇಲಿನ ಬೇಡಿಕೆ ಕಡಿಮೆಯಾಗಿಲ್ಲ. ಇತ್ತೀಚೆಗಂತೂ ಐಫೋನ್ ನ ವಿವಿಧ ಮಾದರಿಗಳು ಬಿಡುಗಡೆಯಾಗಿ ಹೆಚ್ಚಿನ ಮಾರಾಟ ಕಾಣುತ್ತಿದೆ. ಇದೀಗ ಐಫೋನ್ ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ನೀವು ಐಫೋನ್ ಬಳಕೆದಾರರಾಗಿದ್ದರೆ ಈ ಮಾಹಿತಿ ತಿಳಿದುಕೊಳ್ಳಿ.
ಐಫೋನ್ ಬಳಕೆದಾರರಿಗೆ ಮಹತ್ವದ ಮಾಹಿತಿ
ಐಫೋನ್ ಬಳಕೆದಾರರಿಗೆ ವಿಶೇಷವಾಗಿ ತಮ ಫೋಟೋಗಳನ್ನು ಇಮೇಜ್ ಸ್ಟೋರಿಂಗ್ ನಲ್ಲಿ ಸೇವ್ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗುತ್ತದೆ. ಐಪ್ಯಾಡ್ ಹಾಗೂ ಮ್ಯಾಕ್ ನ ಈ ಇಮೇಜ್ ಸ್ಟೋರಿಂಗ್ ಆಯ್ಕೆ ನೀಡಲಾಗುತ್ತದೆ. Apple ನ ಮೈ ಫೋಟೋ ಸ್ಟ್ರೀಮ್ ಜುಲೈ 26 ರಂದು ಸ್ಥಗಿತಗೊಳ್ಳಲಿದೆ. ಕಳೆದ 30 ದಿನಗಳಲ್ಲಿ ತೆಗೆದ ಚಿತ್ರಗಳನ್ನು ಸ್ಟೋರ್ ಮಾಡುವ Apple ನ ಫೋಟೋ ಸ್ಟ್ರೀಮ್ ಪಿಚರ್ ಜುಲೈ 26 ನಂತರ ಬಳಕೆದಾರರಿಗೆ ಲಭ್ಯವಾಗುವುದಿಲ್ಲ.
ಫೋಟೋ ಸ್ಟ್ರೀಮ್ ಪಿಚರ್ ಜುಲೈ 26 ರಿಂದ ಸ್ಥಗಿತ
ಐಫೋನ್ ಗಳಲ್ಲಿ ಫೋಟೋ ಸ್ಟ್ರೀಮ್ ಪಿಚರ್ ಜುಲೈ 26 ರಿಂದ ಕಾರ್ಯನಿರ್ವಹಿಸುವುದಿಲ್ಲ. ಸಂಸ್ಥೆಯು ಮೇ ತಿಂಗಳಿನಲ್ಲಿಯೇ ಶೆಡ್ ಡೌನ್ ಐಕ್ಲೌಡ್ ಫೋಟೋಗಳು ಹಾಗೂ ಡಿವೈಸ್ ಸ್ಟೋರೇಜ್ ಮೇಲೆ ದೊಡ್ಡ ಮಟ್ಟಿನ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಫೋಟೋಗಳನ್ನು ಸ್ಟೋರ್ ಮಾಡಲು ಬಳಕೆದಾರರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಫೋಟೋ ಸ್ಟ್ರೀಮ್ ಈಗಾಗಲೇ ಜೂನ್ 26 ರಿಂದ ಫೋಟೋಗಳನ್ನು ಅಪ್ ಲೋಡ್ ಮಾಡುವುದನ್ನು ನಿಲ್ಲಿಸಲಿದೆ.
ಮೈ ಫೋಟೋ ಸ್ಟ್ರೀಮ್ ಎಂಬುದು ಐಕ್ಲೌಡ್‌ನ ಭಾಗವಾಗಿದೆ. ಈ ಸೇವೆಯು ಬಳಕೆದಾರರಿಗೆ ತಮ್ಮ ಸಂಪರ್ಕಿತ ಆ್ಯಪಲ್ ಡಿವೈಸ್‌ಗಳಾದ್ಯಂತ ಇತ್ತೀಚಿನ 1000 ಫೋಟೋಗಳನ್ನು ಶೇರ್ ಮಾಡಲು ಅವಕಾಶ ಕಲ್ಪಿಸುತ್ತದೆ. ಈ ಹೊಸ ನಿಯಮ ಜಾರಿಯಾಗುವ ಮೊದಲು ಮೈ ಫೋಟೋ ಸ್ಟ್ರೀಮ್ ಗೆ ಅಪ್ಲೋಡ್ ಮಾಡಲಾದ ಯಾವುದೇ ಫೋಟೋಗಳು ಬಳಕೆದಾರರಿಗೆ ಉಳಿಸಲು ಐಕ್ಲೌಡ್ ನಲ್ಲಿ ಲಭ್ಯವಿರುತ್ತಿತ್ತು.
ಐಕ್ಲೌಡ್ ಲಿಂಕ್ ಹೊಂದಿರುವವರು ಇನ್ನು ತಮ್ಮ ಫೋಟೋಗಳನ್ನು ಪ್ರವೇಶಿಸಲು ಸಾಧ್ಯವಿಲ್ಲ. ಐಕ್ಲೌಡ್ ಫೋಟೋಗಳನ್ನು ಬಳಸಿಕೊಂಡು ಐಫೋನ್ ಬಳಕೆದಾರರು ಫೋಟೋಗಳನ್ನು ಶೇರ್ ಮಾಡಲು ಸಾಧ್ಯವಾಗುತ್ತದೆ.