Traffic Rules: ರಾಜ್ಯದಲ್ಲಿ ಬಂತು ಹೊಸ ಟ್ರಾಫಿಕ್ ರೂಲ್ಸ್, ಪಾಲಿಸದಿದ್ದರೆ ದಂಡದ ಜೊತೆಗೆ ಜೈಲು ಶಿಕ್ಷೆ ಖಚಿತ.
ಅಪಘಾತ ತಡೆಯಲು ಟ್ರಾಫಿಕ್ ಪೊಲೀಸ್ ಇಲಾಖೆ ಹೊಸ ನಿಯಮವನ್ನು ಜಾರಿ ಮಾಡಿದ್ದಾರೆ.
New Traffic Rules In Bangalore: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿದ್ದು ಇದನ್ನು ತಡೆಯಲು ಹೊಸ ಹೊಸ ಸಂಚಾರ ನಿಯಮಗಳು ಜಾರಿ ಆಗುತ್ತಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಿರುವುದರಿಂದ ಟ್ರಾಫಿಕ್ ಪೊಲೀಸರು ಹೊಸ ಹೊಸ ರೂಲ್ಸ್ ಅನ್ನು ಜಾರಿಗೆ ತರುತ್ತಿದ್ದಾರೆ. ಇದನ್ನು ಜನರು ಪಾಲಿಸದಿದ್ದರೆ ದಂಡದ ಜೊತೆಗೆ ಜೈಲು ಶಿಕ್ಷೆ ಆಗುವುದು ಖಚಿತವಾಗಿದೆ.
ಹೊಸ ಟ್ರಾಫಿಕ್ ನಿಯಮ ಜಾರಿ ಮಾಡಿದ ಸಾರಿಗೆ ಇಲಾಖೆ
ಇದೀಗ ಅಪಘಾತ ತಡೆಯಲು ಟ್ರಾಫಿಕ್ ಪೊಲೀಸ್ ಇಲಾಖೆ ಹೊಸ ನಿಯಮವನ್ನು ಜಾರಿ ಮಾಡಿದ್ದಾರೆ. ವೇಗ ನಿಯಂತ್ರಣಕ್ಕೆ ಪೊಲೀಸರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೊರೆ ಹೋಗಿದ್ದಾರೆ. ಎ ಐ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಆದೇಶದ ಮೇರೆಗೆ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೆಯಲ್ಲಿ ಸ್ವಯಂ ಚಾಲಿತ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿದೆ. ವಾಹನದ ನಂಬರ್ ನಿಂದ ಆರ್ ಟಿ ಒ ಸಂಪರ್ಕ ಪಡೆದು ಮೊಬೈಲಿಗೆ ದಂಡ ಪಾವತಿಸುವಂತೆ ನೋಟಿಸ್ ಬರಲಿದೆ ಎನ್ನಲಾಗಿದೆ.
ಇನ್ನು ಅಲೋಕ್ ಕುಮಾರ್ ಈ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೃತಕ ಬುದ್ದಿಮತ್ತೆ ಆಧಾರಿತ ಕ್ಯಾಮೆರಾಗಳನ್ನು ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. ಅಪಘಾತಗಳು ಮತ್ತು ಸಾವುನೋವುಗಳ ಸಂಖ್ಯೆಗಳನ್ನು ಕಡಿಮೆ ಮಾಡಲು ಈ ಉಪಕ್ರಮಗಳು ಸಾಹಯ ಮಾಡತ್ತವೆ ಎಂದು ಭಾವಿಸುತ್ತೇವೆ. ಭಾರತದ ರಸ್ತೆಯಲ್ಲಿ ಅತಿ ವೇಗವೇ ಪ್ರಮುಖ ಕೊಲೆಗಾರ ಎನ್ನುವುದಾಗಿ ಅಲೋಕ್ ಕುಮಾರ್ ಅವರು ಹೇಳಿದ್ದಾರೆ.
ಸಂಚಾರ ನಿಯಮ
ರಸ್ತೆಯಲ್ಲಿ ಸಂಚಾರ ಮಾಡುವಾಗ ಸಂಚಾರ ನಿಯಮಗಳನ್ನು ಅನುಸರಿಸಿದರೆ ಅಪಘಾತಗಳನ್ನು ತಪ್ಪಿಸಬಹುದು. ಅಲ್ಲದೆ ಸಾರಿಗೆ ನಿಯಮಗಳನ್ನು ಅನುಸರಿಸುವುದರಿಂದ ನಿಮ್ಮ ದಂಡದ ಚಲನ್ ಕಡಿತಗೊಳಿಸುವುದರಿಂದ ಉಳಿಸಲಾಗುತ್ತದೆ.
ಆದರೆ ನೀವು ಸಂಚಾರ ನಿಯಮಗಳನ್ನು ನಿರ್ಲಕ್ಷಿಸಿದರೆ ಅಥವಾ ಅನುಸರಿಸದಿದ್ದರೆ ನಿಮ್ಮ ಚಲನ್ ಅನ್ನು ಕಡಿತಗೊಳಿಸಬಹುದು ಮತ್ತು ಈಗ ಇದಕ್ಕಾಗಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅತಿ ವೇಗ, ರೆಡ್ ಲೈಟ್ ಜಂಪ್. ಹೆಲ್ಮೆಟ್ ಇಲ್ಲದೆ ಸೀಟ್ ಬೆಲ್ಟ್ ಇಲ್ಲದೆ ಚಾಲನೆ ಸೇರಿದಂತೆ ಹಲವು ಕಾರಣಗಳಿಗಾಗಿ ನಿಮಗೆ ದಂಡದ ಚಲನ್ ವಿಧಿಸಬಹುದು.