List Of Important Property Documents: ಮನೆ ನಿರ್ಮಾಣ ಮಾಡುವುದು ಅಥವಾ ಮನೆ ಖರೀದಿಸುವುದು ಪ್ರತಿಯೊಬ್ಬರ ಜೀವನದ ಒಂದು ಕನಸಾಗಿರುತ್ತದೆ. ಹಾಗೆ ಆಸ್ತಿ ಖರೀದಿ ಮಾಡುವ ಮುನ್ನ ಕೆಲವು ಅಗತ್ಯ ದಾಖಲೆಯನ್ನು ಪರಿಶೀಲನೆ ಮಾಡುವುದು ಕಡ್ಡಾಯವಾಗಿದೆ. ಕೆಲವು ಅಗತ್ಯ ದಾಖಲೆಗಳು ಇಲ್ಲವಾದರೆ ಮುಂದೆ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸ್ವಂತ ಮನೆ ನಿರ್ಮಾಣ ಮಾಡಲು ಅಥವಾ ಮನೆ ಖರೀದಿಸಲು ಇನ್ನುಮುಂದೆ ಈ ದಾಖಲೆಗಳು ಕಡ್ಡಾಯವಾಗಿದೆ. ಹಾಗಾದರೆ ಮನೆ ನಿರ್ಮಾಣ ಮಾಡುವುದು ಅಥವಾ ಮನೆ ಖರೀದಿಗೆ ಯಾವ ಯಾವ ದಾಖಲೆಗಳು ಕಡ್ಡಾಯ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನಾವೀಗ ತಿಳಿದುಕೊಳ್ಳೋಣ.
ಮನೆ ಖರೀದಿಗೆ ಬೇಕಾಗುವ ಅಗತ್ಯ ದಾಖಲೆಗಳು
ಶೀರ್ಷಿಕೆ ಪ್ರಮಾಣ ಪತ್ರ (Title Deed) ಮತ್ತು ಮೂಲ ಪತ್ರಗಳು (Parent Documents)
ಇವುಗಳು ಆಸ್ತಿಯ ಮಾಲೀಕತ್ವವನ್ನು ಸಾಬೀತುಪಡಿಸುವ ಪ್ರಮುಖ ಕಾನೂನು ದಾಖಲೆಗಳಾಗಿವೆ. ಮೂಲ ಪತ್ರ (Mother Deed) ಇದು ಆಸ್ತಿಯ ಮೂಲ ಮಾಲೀಕತ್ವದ ಇತಿಹಾಸವನ್ನು ತೋರಿಸುವ ಪ್ರಾಥಮಿಕ ದಾಖಲೆ ಆಗಿದೆ, ಶೀರ್ಷಿಕೆ ಪತ್ರ (Title Deed) ಎಂದರೆ ಮಾರಾಟ ಪತ್ರ (Sale Deed) ಆಸ್ತಿಯ ಮಾಲೀಕತ್ವದ ಸರಪಳಿಯನ್ನು ಸಾಬೀತುಪಡಿಸಲು ಇವೆರಡೂ ಅತಿ ಅಗತ್ಯವಾಗಿದೆ.
ಕ್ರಯಪತ್ರ
ಕ್ರಯಪತ್ರ (Sale Deed) ಎಂದರೆ ಮಾರಾಟಗಾರರಿಂದ ಖರೀದಿದಾರರಿಗೆ ಆಸ್ತಿಯ ಮಾಲೀಕತ್ವವನ್ನು ಕಾನೂನುಬದ್ಧವಾಗಿ ವರ್ಗಾಯಿಸುವ ಅಂತಿಮ ಮತ್ತು ಕಡ್ಡಾಯ ದಾಖಲೆ ಆಗಿದೆ
Encumbrance Certificate (EC)
Encumbrance ದಾಖಲೆ ಎಂದರೆ ಒಂದು ಆಸ್ತಿಯು ಅಡಮಾನ, ಸಾಲ, ಕಾನೂನು ವಿವಾದ ಅಥವಾ ಬೇರೆ ಯಾವುದೇ ಆರ್ಥಿಕ ಅಥವಾ ಕಾನೂನು ಹೊಣೆಗಾರಿಕೆಗಳಿಂದ ಮುಕ್ತವಾಗಿದೆ ಎಂದು ದೃಢೀಕರಿಸುವ ಅಧಿಕೃತ ದಾಖಲೆಯಾಗಿದೆ, ಇದನ್ನು ಸಬ್-ರಿಜಿಸ್ಟ್ರಾರ್ ಕಚೇರಿಯಿಂದ ನೀಡಲಾಗುತ್ತದೆ.
ಖಾತಾ ಪ್ರಮಾಣಪತ್ರ (Khata Certificate)
ಇದು ಸ್ಥಳೀಯ ಪುರಸಭೆ ಅಥವಾ ಪಂಚಾಯಿತಿ ನೀಡುವ ಒಂದು ಅಧಿಕೃತ ದಾಖಲೆಯಾಗಿದ್ದು, ಆಸ್ತಿಯ ಮಾಲೀಕರು ಯಾರು..? ಆಸ್ತಿ ಎಲ್ಲಿದೆ ಮತ್ತು ಅದರ ವಿಸ್ತೀರ್ಣ ಎಷ್ಟು..? ತೆರಿಗೆ ಗುರುತಿನ ಸಂಖ್ಯೆ (Property Tax ID) ಮತ್ತು ತೆರಿಗೆ ಹೊಣೆಗಾರಿಕೆಗಳಂತಹ ವಿವರಗಳನ್ನು ಒಳಗೊಂಡಿರುತ್ತದೆ.
Power of Attorney (PoA)
ಪವರ್ ಆಫ್ ಅಟಾರ್ನಿ ಇದು ಕಾನೂನು ದಾಖಲೆ ಆಗಿದ್ದು, ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ದೇಶದ ಹೊರಗಿದ್ದರೆ ನಿಮ್ಮ ಬ್ಯಾಂಕ್ ಖಾತೆಗಳು, ಆಸ್ತಿ, ತೆರಿಗೆಗಳು ಮತ್ತು ಇತರ ಹಣಕಾಸು ವಿಷಯಗಳನ್ನು ನಿರ್ವಹಿಸಲು ಇನ್ನೊಬ್ಬ ವ್ಯಕ್ತಿಗೆ ಅಧಿಕಾರ ನೀಡುದು.
ಆಸ್ತಿ ತೆರಿಗೆ ರಸೀದಿ
ಆಸ್ತಿ ತೆರಿಗೆ ರಶೀದಿಗಳು ಸ್ಥಳೀಯ ಅಧಿಕಾರಿಗಳಿಗೆ ಆಸ್ತಿ ತೆರಿಗೆ ಪಾವತಿಯನ್ನು ಪರಿಶೀಲಿಸುವ ನಿರ್ಣಾಯಕ ದಾಖಲೆಗಳಾಗಿವೆ. ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದ ನಿಮ್ಮ ಹಣಕಾಸಿನ ಜವಾಬ್ದಾರಿಗಳನ್ನು ನೀವು ಪೂರೈಸಿದ್ದೀರಿ ಎಂಬುದಕ್ಕೆ ಈ ರಸೀದಿಗಳು ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ.
ಬಿಲ್ಡಿಂಗ್ ಅಪ್ರೂವಲ್ ಪ್ಲಾನ್ (Building Approval Plan)
ಇದು ಕಟ್ಟಡ ನಿರ್ಮಾಣಕ್ಕೆ ಮುನ್ನ ಸ್ಥಳೀಯ ಪ್ರಾಧಿಕಾರದಿಂದ ಅನುಮೋದನೆ ಪಡೆಯಲು ಸಲ್ಲಿಸುವ ವಿವರವಾದ ನಕ್ಷೆ ಮತ್ತು ದಾಖಲೆಗಳ ಸಂಗ್ರಹ.
Occupancy Certificate (OC)
ಸ್ವಾಧೀನ ಪ್ರಮಾಣಪತ್ರ ಎಂದರೆ ಆಸ್ತಿ ಮಾಲೀಕರು ಅದನ್ನು ಕಾನೂನುಬದ್ಧವಾಗಿ ಆಕ್ರಮಿಸಿಕೊಳ್ಳಲು ಮತ್ತು ಬಳಸಲು ಅರ್ಹರು ಎಂದು ಸ್ಥಳೀಯ ಅಧಿಕಾರಿಗಳು ನೀಡುವ ಅಧಿಕೃತ ದಾಖಲೆಯಾಗಿದೆ.
Completion Certificate (CC)
ಪೂರ್ಣಗೊಳಿಸುವಿಕೆ ಪ್ರಮಾಣಪತ್ರ ಎಂದರೆ ಸ್ಥಳೀಯ ಪುರಸಭೆ ಅಥವಾ ಅಭಿವೃದ್ಧಿ ಪ್ರಾಧಿಕಾರವು ನೀಡುವ ಅಧಿಕೃತ ದಾಖಲೆಯಾಗಿದ್ದು, ಕಟ್ಟಡವು ಅನುಮೋದಿತ ಯೋಜನೆ ಮತ್ತು ನಿಯಮಗಳ ಪ್ರಕಾರ ನಿರ್ಮಿಸಲಾಗಿದೆ ಎಂದು ದೃಢೀಕರಿಸುತ್ತದೆ.
RERA ನೋಂದಣಿ
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (Real Estate Regulatory Authority Karnataka) ಎಂದರೆ ರಿಯಲ್ ಎಸ್ಟೇಟ್ ಪ್ರವರ್ತಕರು ಮತ್ತು ಏಜೆಂಟ್ ಗಳು ತಮ್ಮ ಯೋಜನೆಗಳು ಮತ್ತು ವ್ಯವಹಾರಗಳನ್ನು ಸರ್ಕಾರದೊಂದಿಗೆ ನೋಂದಾಯಿಸುವುದು, ಇದು ಮನೆ ಖರೀದಿದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆಯನ್ನು ತರಲು ಕಡ್ಡಾಯವಾಗಿದೆ.
Payment Receipts
ಪಾವತಿ ರಸೀದಿಗಳು ಎಂದರೆ ಸರಕು ಅಥವಾ ಸೇವೆಗಳಿಗಾಗಿ ಪಾವತಿ ಸ್ವೀಕರಿಸಲಾಗಿದೆ ಎಂದು ದೃಢೀಕರಿಸುವ ಅಧಿಕೃತ ದಾಖಲೆ ಆಗಿದ್ದು, ಇವುಗಳಲ್ಲಿ ಪಾವತಿಯ ದಿನಾಂಕ, ಮೊತ್ತ, ಪಾವತಿಸಿದ ವಿಧಾನಗಳ ವಿವರಗಳು ಇರುತ್ತವೆ.
No Objection Certificate (NOC)
ನಿರಾಕ್ಷೇಪಣಾ ಪ್ರಮಾಣಪತ್ರ ಎಂದರೆ ಒಂದು ಸಂಸ್ಥೆ, ವ್ಯಕ್ತಿ ಅಥವಾ ಸರ್ಕಾರಿ ಪ್ರಾಧಿಕಾರವು ಇನ್ನೊಬ್ಬರ ಪ್ರಸ್ತಾಪಿತ ಕಾರ್ಯ ಅಥವಾ ವಹಿವಾಟಿಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ದೃಢೀಕರಿಸುವ ಕಾನೂನು ದಾಖಲೆಯಾಗಿದೆ.
ವಯಕ್ತಿಕ ದಾಖಲೆಗಳು
- ಪಾನ್ ಕಾರ್ಡ್
- ಆಧಾರ್ ಕಾರ್ಡ್
- ಪಾಸ್ಪೋರ್ಟ್
- ಸಂಬಳ ಚಿತ್ರ
- ಬ್ಯಾಂಕ್ ಪಾಸ್ ಬುಕ್
Disclaimer: This information is provided for awareness purposes only. For personalised legal advice, consult a qualified professional and refer to official government notifications.

