Best Tips For Increase Credit Score: ನಿಮ್ಮ ಆರ್ಥಿಕ ಜೀವನದಲ್ಲಿ Credit Score ತುಂಬಾ ಮುಖ್ಯ. ಸಿಬಿಲ್ ವರದಿ ನಿಮ್ಮ ಸಾಲಗಳು ಮತ್ತು ಪಾವತಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗಿದ್ದರೆ ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಲು ಕಷ್ಟವಾಗುತ್ತೆ. ಹಾಗೆ 750+ ಸಿಬಿಲ್ ಸ್ಕೋರ್ ಇಲ್ಲದಿದ್ದರೆ ಬ್ಯಾಂಕುಗಳು ಅತೀ ಹೆಚ್ಚು ಬಡ್ಡಿಯನ್ನು ಸಾಲದ ಮೇಲೆ ವಿಧಿಸುತ್ತದೆ. ಆದರೆ ಚಿಂತೆ ಬೇಡ, ಕೆಲವು ಸರಳ ಕ್ರಮಗಳಿಂದ ನೀವು ಅದನ್ನು ಸುಧಾರಿಸಬಹುದು. ಹಾಗಾದರೆ ಕಡಿಮೆ ಸಿಬಿಲ್ ಸ್ಕೊರ್ ಹೊಂದಿರುವವರು ಸರಳ ವಿಧಾನಗಳ ಮೂಲಕ ಸಿಬಿಲ್ ಸ್ಕೊರ್ ಹೆಚ್ಚಿಸಿಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
CBIL SCORE ಎಂದರೇನು?
CIBIL ಸ್ಕೋರ್ ಅನ್ನುವುದು ವ್ಯಕ್ತಿಯ ಕ್ರೆಡಿಟ್ ಅರ್ಹತೆಯನ್ನು ಪ್ರತಿನಿಧಿಸುವ 3 ಅಂಕಿಯ ಸಂಖ್ಯೆಯಾಗಿದೆ. ಇದು ಸಾಲದಾತರಿಗೆ ನೀವು ಸಾಲ ಮರುಪಾವತಿ ಮಾಡುವಲ್ಲಿ ಎಷ್ಟು ಸಕ್ರಿಯರಾಗಿದ್ದೀರಿ ಮತ್ತು ನಿಮ್ಮ ಮರುಪಾವತಿ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವ್ಯಕ್ತಿಯ ಕ್ರೆಡಿಟ್ ಇತಿಹಾಸವನ್ನು ಆಧರಿಸಿ CIBIL ಸ್ಕೋರ್ ಅನ್ನು ಲೆಕ್ಕಹಾಕಲಾಗುತ್ತದೆ. ಸಿಬಿಲ್ ಸ್ಕೋರ್ 300 ರಿಂದ 900 ಪಾಯಿಂಟ್‌ಗಳ ನಡುವೆ ಇರುತ್ತದೆ,
750+ – ಉತ್ತಮ (ಕಡಿಮೆ ಬಡ್ಡಿ ಸಾಲ)
700 ರಿಂದ 749 – ಸಾಧಾರಣ
699 ಕ್ಕಿಂತ ಕಡಿಮೆ – ಸಾಲ ಸಿಗುವುದು ಕಷ್ಟ
https://www.cibil.com/ ಅಥವಾ Umang ಆಪ್ ನಲ್ಲಿ ಉಚಿತ ಸಿಬಿಲ್ ರಿಪೋರ್ಟ್ ಪ್ರತಿಯನ್ನು ತಿಂಗಳಿಗೆ ಒಮ್ಮೆ ಪಡೆದುಕೊಳ್ಳಬಹುದು.
CIBIL Score ಹೆಚ್ಚಿಸಿಕೊಳ್ಳಲು ಅಗತ್ಯ ಟಿಪ್ಸ್
1. ಸಮಯಕ್ಕೆ ಸರಿಯಾಗಿ ಎಲ್ಲ ಪಾವತಿಗಳನ್ನ ಮಾಡಿಕೊಳ್ಳಿ
ಸಿಬಿಲ್ ಸ್ಕೋರ್ ನಲ್ಲಿ ಸಾಲದ EMI, ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನ ಸಮಯಕ್ಕೆ ಸರಿಯಾಗಿ ಪಾವತಿ ಮಾಡಬೇಕು. ಈ ಪಾವತಿಗಳನ್ನು ತಡಮಾಡಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತ ಹೋಗುತ್ತದೆ. ಆಟೋ-ಪೇಮೆಂಟ್ ಸೆಟ್ ಮಾಡಿ ಅಥವಾ ರಿಮೈಂಡರ್ ಇಟ್ಟುಕೊಳ್ಳಿ. ಈ ವಿಧಾನಗಳನ್ನು ಸರಿಯಾಗಿ ಅನುಸರಿಸಿದರೆ ಕಡಿಮೆಯಾದ ಸಿಬಿಲ್ ಸ್ಕೊರ್ ಸುಲಭವಾಗಿ ಹೆಚ್ಚಳ ಮಾಡಿಕೊಳ್ಳಬಹುದು.
2. ಕ್ರೆಡಿಟ್ ಬಳಕೆಯನ್ನು 30% ಕ್ಕಿಂತ ಕಡಿಮೆ ಇರಿಸಿ
ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ ಲಿಮಿಟ್ ನ 30% ಗಿಂತ ಹೆಚ್ಚು ಬಳಸಬೇಡಿ, 1 ಲಕ್ಷ ಕ್ರೆಡಿಟ್ ಕಾರ್ಡ್ ಲಿಮಿಟ್ ಇದ್ದರೆ 30,000 ಕ್ಕಿಂತ ಹೆಚ್ಚು ಬಾಕಿ ಬಿಡಬೇಡಿ ಮತ್ತು ಹೆಚ್ಚು ಬಾಕಿ ಇದ್ದರೆ ತಕ್ಷಣ ತೀರಿಸಿ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಲು ಸಹಾಯ ಮಾಡುತ್ತದೆ.
3. ಹಳೆಯ ಖಾತೆಗಳನ್ನು ಮುಚ್ಚಬೇಡಿ
ನಿಮ್ಮ ಹಳೆಯ ಖಾತೆಯನ್ನು ಮುಚ್ಚಿದರೆ ವ್ಯವಹಾರದ ಇತಿಹಾಸ ಉದ್ದ ಕಡಿಮೆಯಾಗಿ ಸ್ಕೋರ್ ಕಡಿಮೆ ಆಗುತ್ತದೆ. ಹಾಗೆ ಹೋಂ ಲೋನ್ ಮತ್ತು ಪರ್ಸನಲ್ ಲೋನ್ ಕ್ರೆಡಿಟ್ ಗಳ ಮಿಶ್ರಣ ಕ್ರೆಡಿಟ್ ಸ್ಕೋರ್ ಹೆಚ್ಚಾಗಲು ಸಹಾಯ ಮಾಡುತ್ತದೆ.
4. ಕ್ರೆಡಿಟ್ ರಿಪೋರ್ಟ್ ಅನ್ನು ಮಿತವಾಗಿ ಪರಿಶೀಲಿಸಿ
ವರ್ಷಕ್ಕೆ ಕನಿಷ್ಠ 4 ಬಾರಿ ಮಾತ್ರ CIBIL ರಿಪೋರ್ಟ್ ಪಡೆದು ಪರಿಶೀಲಿಸಿ. ತಪ್ಪುಗಳಿದ್ದರೆ ತಕ್ಷಣ ಸರಿಪಡಿಸಿಕೊಳ್ಳಿ. ತಪ್ಪುಗಳನ್ನು ಸರಿಪಡಿಸಿಕೊಂಡರೆ ಸಿಬಿಲ್ ಸ್ಕೊರ್ ಬಹಳ ಸುಲಭವಾಗಿ ಹೆಚ್ಚಲಾಗಿದೆ.
5. ಹೊಸ ಸಾಲದ ಅರ್ಜಿಯನ್ನು ಮಿತಿಗೊಳಿಸಿ
ಕೆಲವು ಸಾಲದ ಅರ್ಜಿಗಳು Hard Enquiry ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ಅಗತ್ಯ ಇದ್ದರೆ ಮಾತ್ರ ಸಾಲಕ್ಕೆ ಅರ್ಜಿ ಹಾಕಿ.
6. ಗ್ಯಾರಂಟರ್ ಆಗಬೇಡಿ
ಲೋನ್ ಗ್ಯಾರಂಟರ್ ಆದರೆ ಡಿಫಾಲ್ಟ್ ನಿಮ್ಮ ಸ್ಕೋರ್ ಗೆ ಪರಿಣಾಮ ಬೀರುತ್ತದೆ. ಸಾಧ್ಯವಾದಷ್ಟು ತಪ್ಪಿಸಿಕೊಳ್ಳಿ. ಬೇರೆಯವರ ಸಾಲಕ್ಕೆ ನೀವು ಜಾಮೀನು ಹಾಕಿ ಅವರು ಆ ಸರಿಯಾದ ಸಮಯಕ್ಕೆ ತೀರಿಸದೆ ಇದ್ದರೆ ನೀವು ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ.
ವಿಶೇಷ ಸೂಚನೆ: ನಾಡುನುಡಿ ಮಾಧ್ಯಮದಲ್ಲಿ ಯಾವುದೇ ಸುಳ್ಳು ಸುದ್ದಿ ಪ್ರಕಟಿಸಲಾಗುವುದಿಲ್ಲ. ಇದು ನಿಖರವಾದ ಸುದ್ದಿಯಾಗಿದೆ ಮತ್ತು ಹೆಚ್ಚಿನ ಮಾಹಿತಿಗಾಗಿ ಇಂದೇ ಬ್ಯಾಂಕ್ ಅಥವಾ ಬ್ಯಾಂಕ್ ಸಿಬ್ಬಂದಿಯನ್ನು ಬೇಟಿಮಾಡಿ.

