ITR 2023: ಈಗ ಟ್ಯಾಕ್ಸ್ ಕಟ್ಟಿದರು ಮನೆಗೆ ಬರಲಿದೆ ನೋಟೀಸ್, ಹೊಸ ನಿಯಮ ಕಂಡು ಕಂಗಾಲಾದ ತೆರಿಗೆದಾರರು.
ಈ ರೀತಿಯಾಗಿ ತೆರಿಗೆ ಪಾವತಿ ಮಾಡಿದರೆ ಮನೆಗೆ ಬರಲಿದೆ ಇನ್ಕಮ್ ಟ್ಯಾಕ್ಸ್ ನೋಟೀಸ್.
Income Tax Department Notice: 2022 – 23 ನೇ ಸಾಲಿನ ಆದಾಯ ತೆರಿಗೆ ರಿಟರ್ನ್(Income Tax Return) ನೆಡೆಯುತ್ತಿದೆ. ಆದಾಯ ತೆರಿಗೆಗೆ ಸಂಬಂಧಿಸಿದಂತೆ ಸರ್ಕಾರ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ತಿಂಗಳ 31 ರವರೆಗೆ ಐಟಿ ರಿಟರ್ನ್ ಗೆ ಸಮಯಾವಕಾಶವನ್ನು ಕಲ್ಪಿಸಲಾಗಿದೆ. ಜುಲೈ 31 ರ ನಂತರ ಐಟಿ ರಿಟರ್ನ್ ಸಲ್ಲಿಕೆಗೆ ದಂಡ ಪಾವತಿಸಬೇಕಾಗುತ್ತದೆ.
ನಕಲಿ ಪುರಾವೆಯ ಮೂಲಕ ಆದಾಯ ತೆರಿಗೆ ಪಾವತಿಸುವರಿಗೆ ಇಲಾಖೆಯ ನೋಟೀಸ್
ಆದಾಯ ತೆರಿಗೆ ಪಾವತಿಸುದು ಬಹಳ ಕಷ್ಟವಾದ ಪ್ರಕ್ರಿಯೆಯಾಗಿದೆ. ಪ್ರಸ್ತುತ ಆನ್ಲೈನ್ ಮೂಲಕ ITR ಅನ್ನು ಪಾವತಿಸಬಹುದಾದರೂ ಕೂಡ ಇದಕ್ಕೆ ತಜ್ಞರ ಸಹಾಯ ಬಹಳ ಅವಶ್ಯಕವಾಗಿದೆ. ಅನೇಕ ಮಂದಿ ಅಧಿಕ ತೆರಿಗೆ ವಿನಾಯಿತಿ ಪಡೆಯಲು ತಜ್ಞರ ಸಹಾಯದ ಮೂಲಕ ತಪ್ಪು ಹಾದಿ ಹಿಡಿಯುತ್ತಿದ್ದಾರೆ.
ಬೋಗಸ್ ಬಾಡಿಗೆ ರಶೀದಿಯಿಂದ ಆದಾಯ ತೆರಿಗೆ ಪಾವತಿ
ತೆರಿಗೆ ಪಾವತಿಸುವವರು ಐಟಿ ರಿಟರ್ನ್ ಅನ್ನು ಫೈಲ್ ಮಾಡುವಾಗ ಕೆಲವೊಂದು ಗಿಮಿಕ್ ಗಳನ್ನೂ ಮಾಡುತ್ತಾರೆ. ಕೆಲವು ಮಂದಿ ತಮ್ಮ ಹತ್ತಿರದ ಸಂಬಂಧಿಕರ ಬಳಿ ಬೋಗಸ್ ಬಾಡಿಗೆ ರಶೀದಿಯನ್ನು ಪಡೆದು ತೆರಿಗೆ ಪಾವತಿಸುತ್ತಾರೆ. ನಕಲಿ ಪುರಾವೆಯನ್ನು ಪಡೆದು ತೆರಿಗೆ ಪಾವತಿಸುದು ಇಲಾಖೆಯ ಕಣ್ಣಿಗೆ ಬಿದ್ದಿದೆ.
ನಕಲಿ ತೆರಿಗೆ ಪಾವತಿದಾರರ ಮೇಲೆ ಇಲಾಖೆಯ ಕಣ್ಣು
ಈ ಹಿಂದೆ ತಪ್ಪು ಹಾದಿ ಹಿಡಿದು ಹೆಚ್ಚಿನ ತೆರಿಗೆ ವಿನಾಯಿತಿಯನ್ನು ಪಡೆಯುವುದು ಯಾರಿಗೂ ತಿಳಿಯುತ್ತಿರಲಿಲ್ಲ ಆದರೆ ಈಗ ಅದು ಸಾಧ್ಯವಿಲ್ಲ. ನಿಮ್ಮ ಐಟಿ ರಿಟರ್ನ್ ಸಲ್ಲಿಕೆಯನ್ನು ಸರಿಯಾಗಿ ಪರಿಶೀಲನೆ ಮಾಡಲು ಕಂದಾಯ ಇಲಾಖೆಯಲ್ಲಿ ಇದಕ್ಕಾಗಿಯೇ ಸಾಫ್ಟ್ವೇರ್ಗಳು ಇವೆ.
ಈ ರೀತಿ ನಕಲಿ ಪುರಾವೆ ಇಟ್ಟುಕೊಂಡು ಆದಾಯ ತೆರಿಗೆ ಪಾವತಿಸುವರಿಗೆ ಕಂದಾಯ ಇಲಾಖೆ ನೋಟೀಸ್ ಕಳಿಸುತ್ತದೆ. ಐಟಿ ರಿಟರ್ನ್ ಸಲ್ಲಿಕೆಗೆ ಸರಿಯಾದ ಪುರಾವೆ ನೀಡಬೇಕೆಂದು ಇಲಾಖೆ ಆದೇಶ ಹೊರಡಿಸಿದೆ.
ಈ ಕೆಳಗಿನ ಪ್ರಕರಣಗಳಿಗೆ ನೋಟೀಸ್ ನೀಡಿ ದಾಖಲೆಗಳನ್ನು ಕೇಳಲಾಗುತ್ತದೆ
*ಸೆಕ್ಷನ್ 10 (13A) ಅಡಿಯಲ್ಲಿ ವೇತನ ಪಡೆಯುವರಿಗೆ ಮನೆ ಬಾಡಿಗೆ ಭತ್ಯೆಯಿಂದ ವಿನಾಯಿತಿ
*ಸೆಕ್ಷನ್ 10 (14) ರ ಅಡಿಯಲ್ಲಿ ಅಧಿಕೃತ ಕರ್ತವ್ಯಗಳನ್ನೂ ನಿರ್ವಹಿಸಲು ಸಹಾಯಕರನ್ನು ನೇಮಕ ಮಾಡಿಕೊಳ್ಳುವ ಭತ್ಯೆ
*ಸೆಕ್ಷನ್ 24 (b) ಅಡಿಯಲ್ಲಿ ಗೃಹಸಾಲದ ಬಡ್ಡಿಗೆ ಕಡಿತ ಪಡೆಯುವವರಿಗೆ ನೋಟೀಸ್ ನೀಡಲಾಗುತ್ತದೆ.
ತೆರಿಗೆ ಪಾವತಿದಾರರಿಗೆ ಅಗತ್ಯ ಮಾಹಿತಿ
50 ಲಕ್ಷಕ್ಕಿಂತ ಅಧಿಕ ವೇತನ ಪಡೆಯುವ ವ್ಯಕ್ತಿ ಒಂದು ವರ್ಷದೊಳಗೆ ಮರು ಮೌಲ್ಯಮಾಪನ ಮಾಡಬಹುದು. ಇನ್ನು 50 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ವ್ಯಕ್ತಿ ಎಂಟು ವರ್ಷದೊಳಗೆ ಐಟಿ ರಿಟರ್ನ್ ಅನ್ನು ಮರುಮೌಲ್ಯ ಮಾಪನ ಮಾಡಬಹುದು. ಇನ್ನು ಎಲ್ಲಾ ದಾಖಲೆಗಳನ್ನು ಕಂಪ್ಯೂಟರೀಕಣರ ಮಾಡುವುದರಿಂದ ಕಂದಾಯ ಇಲಾಖೆಗೆ ವಂಚಕರನ್ನು ಪತ್ತೆ ಹಚ್ಚಲು ಸಹಾಯವಾಗುತ್ತದೆ.