Income Tax: ಈ ಐದು ತಪ್ಪುಗಳನ್ನ ಮಾಡಿದರೆ ನಿಮಗೆ ಬರಲಿದೆ Income Tax ನೋಟೀಸ್, ಕೇಂದ್ರದ ನಿಯಮಗಳು.
ಹಣದ ವ್ಯವಹಾರ ಮಾಡುವ ಸಮಯದಲ್ಲಿ ಈ ತಪ್ಪುಗಳನ್ನ ಮಾಡಿದರೆ ಬರಲಿದೆ income tax ನೋಟೀಸ್.
Income Tax Notice Reason: ಹೊಸ ಹಣಕಾಸು ವರ್ಷದ ಆರಂಭದಿಂದ ಅನೇಕ ನಿಯಮಗಳು ಬದಲಾಗಿವೆ. ಇನ್ನು ಆದಾಯ ತೆರಿಗೆ (Income Tax) ಸಲ್ಲಿಕೆಯಲ್ಲಿ ಕೂಡ ಸಾಕಷ್ಟು ನಿಯಮಗಳು ಬದಲಾಗಿವೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ ವಿವಿಧ ರೀತಿಯ ನಿಯಮಗಳು ಜಾರಿಗೆ ಬರುತ್ತಿವೆ.
ಇನ್ನು ಕೆಲವರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಗಳು ಬರುತ್ತವೆ.ಯಾವ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ನೋಟಿಸ್ (Income Tax Notice) ನೀಡುತ್ತದೆ ಎಂದು ಕೆಲವರಿಗೆ ತಿಳಿದಿರುವುದಿಲ್ಲ. ಆದಾಯ ಇಲಾಖೆ ನೋಟಿಸ್ ಕಳುಹಿಸಲು ಐದು ಮುಖ್ಯ ಕಾರಣಗಳಿವೆ.
ಆದಾಯ ಇಲಾಖೆಯಿಂದ ನೋಟಿಸ್ ಬರಲು ಕಾರಣ
ಆದಾಯ ತೆರಿಗೆ ಪಾವತಿದಾರರು ಆದಾಯ ತೆರಿಗೆ ರಿಟರ್ನ್ ಅನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕು. ಸರಿಯಾದ ಸಮಯದಲ್ಲಿ ಐಟಿಆರ್ ಭರ್ತಿ ಮಾಡಿದರೆ ಆದಾಯ ಇಲಾಖೆ ತೆರಿಗೆ ಪಾವತಿದಾರರಿಗೆ ವಿನಾಯಿತಿ ನೀಡುತ್ತದೆ. ತೆರಿಗೆ ಪಾವತಿದಾರರು ತಮ್ಮ ಹೂಡಿಕೆಯ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಆದಾಯ ಇಲಾಖೆಗೆ ತಪ್ಪು ಮಾಹಿತಿ ನೀಡಿದರೆ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗುತ್ತದೆ.
*ಐಟಿಆರ್ ಸಲ್ಲಿಕೆ ನಿಗದಿತ ಸಮಯದೊಳಗೆ ಪೂರ್ಣಗೊಂಡಿಲ್ಲವಾದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುತ್ತದೆ.
*ಟಿಡಿಎಸ್ ಠೇವಣಿ ಮತ್ತು ಐಟಿಆರ್ ನಡುವೆ ವ್ಯತಾಸವಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುತ್ತದೆ.
*ಒಂದು ಆರ್ಥಿಕ ವರ್ಷದಲ್ಲಿ ಗಳಿಸಿದ ಹಣ ಮತ್ತು ಹೂಡಿಕೆಗಳಲ್ಲಿ ಗಳಿಸಿದ ಹಣದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು. ಮೂಲಗಳಿಂದ ಪಡೆಯುತ್ತಿರುವ ಆದಾಯದ ಕುರಿತು ಮಾಹಿತಿ ನೀಡಿಲ್ಲವಾದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುತ್ತದೆ.
*ಐಟಿಆರ್ ಫಾರ್ಮ್ ಭರ್ತಿ ಮಾಡುವಾಗ ತಪ್ಪುಗಳನ್ನು ಮಾಡಿದರೆ ಅಥವಾ ಕೆಲವು ಪ್ರಮುಖ ವಿಷಯಗಳನ್ನು ಭರ್ತಿ ಮಾಡಲು ಮರೆತರೆ ಆದಾಯ ಇಲಾಖೆ ಸೂಚನೆ ನೀಡುತ್ತದೆ.
*ಸಾಮಾನ್ಯ ವಹಿವಾಟುಗಳಿಗಿಂತ ಭಿನ್ನವಾಗಿ ದೊಡ್ಡ ವಾಹಿವಾಟನ್ನು ಮಾಡಿದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುತ್ತದೆ.