Ads By Google

Tax Penalty: ಪ್ರತಿ ವರ್ಷ ಟ್ಯಾಕ್ಸ್ ಕಟ್ಟುವವರಿಗೆ ಎಚ್ಚರ, ಈ ತಪ್ಪು ಮಾಡಿದರೆ 25 ಲಕ್ಷ ದಂಡ ಮತ್ತು 7 ವರ್ಷ ಜೈಲು.

income tax penalty update

Image Credit: Original Source

Ads By Google

Income Tax Penalty Rules In India: ಸದ್ಯ ದೇಶದಲ್ಲಿ ತೆರಿಗೆಗೆ (Tax) ಸಂಬಂಧಿಸಿದಂತೆ ಅನೇಕ ನಿಯಮಾವಳಿಗಳನ್ನು ರೂಪಿಸಲಾಗಿದೆ. ಹೆಚ್ಚಿನ ಆದಾಯವನ್ನು ಹೊಂದಿರುವವರಿಗೆ ತೆರಿಗೆ ಅನ್ವಯವಾಗಲಿದೆ. ತೆರಿಗೆ ಇಲಾಖೆ ಆಗಾಗ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಾ ಇರುತ್ತದೆ. ತೆರಿಗೆ ಪಾವತಿ ಮಾಡುವ ಪ್ರತಿಯೊಬ್ಬರೂ ಕೂಡ ತೆರಿಗೆ ನಿಯಮವನ್ನು ತಿಳಿಯುವುದು ಅಗತ್ಯವಾಗಿದೆ.

ಇನ್ನು ತೆರಿಗೆ ಪಾವತಿಯಲ್ಲಿ ಯಾವುದೇ ರೀತಿಯ ತೊಂದರೆ ಆದರೂ ಕೂಡ ತೆರಿಗೆ ಇಲಾಖೆ ಹೆಚ್ಚಿನ ದಂಡವನ್ನು ವಿಧಿಸುತ್ತದೆ ಎನ್ನುವುದು ಎಲ್ಲರಿಗು ತಿಳಿದೇ ಇದೆ. ಇನ್ನು ನಿಮಗೆ ಗೊತ್ತೇ..? ತೆರಿಗೆ ಇಲಾಖೆಯು ಈ ತೆರಿಗೆ ನಿಯಮ ಉಲ್ಲಂಘನೆಗೆ 25 ಲಕ್ಷ  ದಂಡವನ್ನು ವಿಧಿಸಿರುವ ಬಗ್ಗೆ. ಹೌದು ತೆರಿಗೆ ಇಲಾಖೆ ತೆರಿಗೆ ಪಾವತಿದಾದರೂ ಈ ರೀತಿಯ ವಂಚನೆಯನ್ನು ಮಾಡಿದರೆ 25 ಲಕ್ಷ  ದಂಡವನ್ನು ವಿಧಿಸಲಿದೆ.

Image Credit: Housing

ಪ್ರತಿ ವರ್ಷ ಟ್ಯಾಕ್ಸ್ ಕಟ್ಟುವವರಿಗೆ ಎಚ್ಚರ
ದೇಶದಲ್ಲಿನ ಕಪ್ಪು ಹಣದ ತಡೆಗಾಗಿ ಸರ್ಕಾರ ತೆರಿಗೆ ನಿಯಮವನ್ನು ವಿಧಿಸುತ್ತದೆ. ಆದರೂ ಕೂಡ ಅನೇಕ ರೀತಿಯಲ್ಲಿ ತೆರಿಗೆ ವಂಚನೆಯ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಕೇಂದ್ರ ಸರ್ಕಾರ ತೆರಿಗೆ ವಂಚನೆಯ ತಡೆಗಾಗಿ ವಿವಿಧ ಕ್ರಮ ಕೈಗೊಳ್ಳುತ್ತದೆ. ತೆರಿಗೆ ಇಲಾಖೆ ಆಗಾಗ ಪರಿಶೀಲನೆ ನಡೆಸುತ್ತದೆ. ಕಡಿಮೆ ಆದಾಯವನ್ನು ತೋರಿಸುವ ಮೂಲಕ ತೆರಿಗೆ ವಂಚನೆ ಮಾಡಲಾಗುತ್ತದೆ. ಹೀಗಾಗಿ ತೆರಿಗೆ ಇಲಾಖೆ ITR ಅನ್ನು ಕೂಲಂಕುಷವಾಗಿ ಪರಿಶೀಲಿಸಿ ಅಂತವರ ವಿರುದ್ಧ ಹೆಚ್ಚಿನ ಕ್ರಮ ಕೈಗೊಂಡು ದಂಡವನ್ನು ವಿಧಿಸುತ್ತದೆ.

ITR ಸಲ್ಲಿಕೆಯ ಯಾವುದೇ ತಪ್ಪು ಮಾಡುವಂತಿಲ್ಲ
ಆದಾಯ ತೆರಿಗೆ ಇಲಾಖೆಯ ಪ್ರಕಾರ, ಸಂಬಳ ಪಡೆಯುವ ಉದ್ಯೋಗಿಯು CA ಅಥವಾ ತೆರಿಗೆ ಸಲಹೆಗಾರರ ತಪ್ಪು ಸಲಹೆಯ ಮೇರೆಗೆ ರಿಟರ್ನ್‌ ನಲ್ಲಿ ತಪ್ಪು ಕ್ಲೈಮ್ ಮಾಡಿದರೆ ಅದನ್ನು ತೆರಿಗೆ ವಂಚನೆ ಎಂದು ಪರಿಗಣಿಸಲಾಗುತ್ತದೆ. ಈ ಪ್ರಕರಣದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಮಾತ್ರವಲ್ಲದೆ ಸಿಎ ಅಥವಾ ತೆರಿಗೆ ಸಲಹೆಗಾರ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುತ್ತದೆ. ಹಾಗೆಯೆ ಇಲಾಖೆಯು ತನ್ನ ಮಟ್ಟದಲ್ಲಿ ತೆರಿಗೆ ವಂಚನೆಯ ಸಂಪೂರ್ಣ ತನಿಖೆ ನಡೆಸುತ್ತದೆ. ಇದನ್ನು ಪರಿಶೀಲಿಸಲು ಇಲಾಖೆಯು ದೊಡ್ಡ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿದೆ, ಇದನ್ನು ITR ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ.

Image Credit: Discountwalas

ಈ ತಪ್ಪು ಮಾಡಿದರೆ 25 ಲಕ್ಷ ದಂಡ ಮತ್ತು 7 ವರ್ಷ ಜೈಲು
ಸರ್ಕಾರಿ ಇಲಾಖೆಗಳು ಅಥವಾ ಸಾರ್ವಜನಿಕ ಉದ್ಯಮಗಳ ನೌಕರರು ಸುಳ್ಳು ಹಕ್ಕುಗಳ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟ ವಿಜಿಲೆನ್ಸ್ ಇಲಾಖೆಗೆ ನೀಡಲಾಗುತ್ತದೆ. ನಿಯಮಾನುಸಾರ ಕ್ರಮ ಕೈಗೊಂಡು ಇಲಾಖೆಗೆ ಮಾಹಿತಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ, ಸೆಕ್ಷನ್ 270 ಎ ಅಡಿಯಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಈ ನಿಬಂಧನೆಯನ್ನು ಇತ್ತೀಚೆಗೆ IT ಕಾಯಿದೆಗೆ ಸೇರಿಸಲಾಗಿದೆ.

ಅಕ್ರಮಗಳು ಸಾಬೀತಾದರೆ ಆದಾಯದ ಮೇಲಿನ ತೆರಿಗೆಯ 50% ದಂಡವನ್ನು ವಿಧಿಸಲಾಗುತ್ತದೆ. ಆದಾಗ್ಯೂ,ತಪ್ಪು ದಾಖಲೆಗಳನ್ನು ಸಲ್ಲಿಸುವ ಮೂಲಕ ತಪ್ಪು ಆದಾಯವನ್ನು ಘೋಷಿಸಿದರೆ ಈ ದಂಡವು 200% ಕ್ಕೆ ಹೆಚ್ಚಾಗುತ್ತದೆ. ಇದರಲ್ಲಿ ಸೆಕ್ಷನ್ 276 ಸಿ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಂತಹ ಪ್ರಕರಣಗಳಲ್ಲಿ ಆರು ತಿಂಗಳಿಂದ 7 ವರ್ಷಗಳವರೆಗೆ ಶಿಕ್ಷೆಯ ಜೊತೆಗೆ 25 ಲಕ್ಷ ದಂಡವನ್ನು ವಿಧಿಸಲಾಗುತ್ತದೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in