Income Notice: ಪ್ರತಿ ತಿಂಗಳು ಸಂಬಳ ಪಡೆಯುವವರಿಗೆ ಕೇಂದ್ರದಿಂದ ಇನ್ನೊಂದು ಘೋಷಣೆ, ತೆರಿಗೆ ನೋಟೀಸ್ ಜಾರಿ.
ಇಂತಹ ಜನರಿಗೆ ಆದಾಯ ತೆರಿಗೆ ನೋಟೀಸ್ ಕಳುಹಿಸಿದ ಕೇಂದ್ರ ಸರ್ಕಾರ.
Income Tax Notice Latest Update: ಆದಾಯ ತೆರಿಗೆ ಇಲಾಖೆ ITR ಸಲ್ಲಿಕೆಯನ್ನು ಕಡ್ಡಾಯಗೊಳಿಸಿದೆ. ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿತ್ತು. ನಿಗದಿತ ಸಮಯದೊಳಗೆ ಐಟಿ ರಿಟರ್ನ್ ಸಲ್ಲಿಕೆ ಆಗದಿದ್ದರೆ ತೆರಿಗೆ ಪಾವತಿದಾರರು ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ. ದಂಡ ಪಾವತಿಸುವ ಭಯದಿಂದಾಗಿ July ನಲ್ಲಿ ಕೋಟ್ಯಾಂತರ ಸಂಖ್ಯೆಯಲ್ಲಿ ITR ಸಲ್ಲಿಕೆಯಾಗಿದೆ.
ಇನ್ನು ತೆರಿಗೆದಾರರು ಸಲ್ಲಿಸಿದ ಎಲ್ಲಾ ರಿಟರ್ನ್ ಮಾಹಿತಿಯನ್ನು ಆದಾಯ ಇಲಾಖೆ ಪರಿಶೀಲಿಸುತ್ತದೆ. ಇನ್ನು ತೆರಿಗೆದಾರರಿಗೆ ಕೆಲವೊಮ್ಮೆ ಆದಾಯ ಇಲಾಖೆ ತೆರಿಗೆ ನೋಟಿಸ್ (Tax Notice) ಅನ್ನು ಕಳುಹಿಸುತ್ತದೆ. ಸದ್ಯ ಆದಾಯ ಇಲಾಖೆ 22 ಸಾವಿರ ಆದಾಯ ತೆರಿಗೆದಾರರಿಗೆ ನೋಟಿಸ್ ಜಾರಿ ಮಾಡಿದೆ ಎನ್ನುವ ಬಗ್ಗೆ ವರದಿಯಾಗಿದೆ. ನೀವು ಈ ತಪ್ಪುಗಳನ್ನು ಮಾಡಿದ್ದಾರೆ ನಿಮ್ಮ ಮನೆಯ ಬಾಗಿಲಿಗೂ ತೆರಿಗೆ ನೋಟಿಸ್ ಬಂದು ತಲುಪಲಿದೆ.
Income Tax Notice
ತೆರಿಗೆ ಪಾವತಿಯಲ್ಲಿ ಯಾವುದೇ ರೀತಿಯ ತಪ್ಪು ಕಂಡು ಬಂದಲ್ಲಿ ನೋಟಿಸ್ ನೀಡಲಾಗುತ್ತದೆ. ಈಗಾಗಲೇ ಆದಾಯ ರಿಟರ್ನ್ ಸಲ್ಲಿಸಿದ್ದರು ಕೂಡ ಕೆಲವರಿಗೆ ನೋಟಿಸ್ ಕಳುಹಿಸಲಾಗುತ್ತದೆ. ಕೆಲವು ಸಮಯದ ಹಿಂದೆ, ಆದಾಯ ತೆರಿಗೆ ಇಲಾಖೆಯು ಕೆಲವು ಸಂಬಳದಾರರಿಗೆ ತಮ್ಮ ಆದಾಯದ ಪುರಾವೆ ಮತ್ತು ಅವರು ತಮ್ಮ ರಿಟರ್ನ್ಸ್ ನಲ್ಲಿ ಕ್ಲೈಮ್ ಮಾಡಿದ ಕಡಿತಗಳನ್ನು ಕೇಳಿ ನೋಟಿಸ್ ಕಳುಹಿಸಿದೆ.
ಯಾವುದೇ ಮೂಲದಿಂದ ಬಂದಿರುವ ಆದಾಯದ ಬಗ್ಗೆ ನೀವು ಮಾಹಿತಿ ನೀಡದಿದ್ದರೆ ತೆರಿಗೆ ಇಲಾಖೆ ನೋಟಿಸ್ ನೀಡುತ್ತದೆ. ನಿಮಗೆ ಆದಾಯ ಇಲಾಖೆ ನೋಟಿಸ್ ಕಳುಹಿಸದರೆ ಅದನ್ನು ನಿರ್ಲಕ್ಷಿಸಬಾರದು. ನೀವು ತಪ್ಪು ಮಾಹಿತಿ ನೀಡಿದ್ದರೆ ಅಥವಾ ಯಾವುದೇ ಆದಾಯದ ಮಾಹಿತಿಯನ್ನು ನೀಡದೆ ಇದ್ದರೆ ಮಾತ್ರ ಇಲಾಖೆ ನಿಮಗೆ ನೋಟಿಸ್ ಕಳುಹಿಸುತ್ತದೆ. ಆದಾಯ ಇಲಾಖೆಯು ನೀಡುವ ನೋಟಿಸ್ ನಲ್ಲಿ ಸಮಯ ಮಿತಿಯನ್ನು ನೀಡಿರುತ್ತದೆ. ನಿಗದಿತ ಸಮಯದೊಳಗೆ ನೀವು ನೋಟೀಸ್ ಗೆ ಉತ್ತರ ನೀಡಬೇಕಾಗುತ್ತದೆ.
ಇಂತಹ ಜನರಿಗೆ ಇಲಾಖೆಯಿಂದ ನೋಟೀಸ್ ಜಾರಿ
*ಆದಾಯ ತೆರಿಗೆ ಇಲಾಖೆಯು 12 ಸಾವಿರ ಸಂಬಳದಾರರಿಗೆ ಮಾಹಿತಿ ನೋಟಿಸ್ ಕಳುಹಿಸಿದೆ.
*ಆದಾಯ ತೆರಿಗೆ ಕಡಿತದ ಹಕ್ಕು ಮತ್ತು ಇಲಾಖೆಯ ಅಂಕಿಅಂಶಗಳ ನಡುವಿನ ವ್ಯತ್ಯಾಸವು 50 ಸಾವಿರ ರೂ. ಗಿಂತ ಹೆಚ್ಚಿರುವ ಸಂಬಳದ ಆದಾಯ ತೆರಿಗೆದಾರರಿಗೆ ಮಾಹಿತಿ ನೋಟಿಸ್ ಕಳುಹಿಸಲಾಗಿದೆ.
* ಆದಾಯ ವಿವರಕ್ಕೂ ಆದಾಯ ತೆರಿಗೆ ಇಲಾಖೆಯ ಅಂಕಿ-ಅಂಶಗಳಿಗೂ 50 ಲಕ್ಷಕ್ಕೂ ಹೆಚ್ಚು ವ್ಯತ್ಯಾಸವಿರುವ ಕಾರಣ 8 ಸಾವಿರ HUF ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿದೆ.
*ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಘೋಷಿಸಿದ ಆದಾಯಕ್ಕೂ ಇಲಾಖೆಯಿಂದ ಮೌಲ್ಯಮಾಪನ ಮಾಡಿದ ಆದಾಯಕ್ಕೂ 5 ಕೋಟಿ ರೂಪಾಯಿಗೂ ಹೆಚ್ಚು ವ್ಯತ್ಯಾಸವಿರುವ ಕಾರಣ ತೆರಿಗೆ ಇಲಾಖೆಯು 900 ಅಧಿಕ ನಿವ್ವಳ ಮೌಲ್ಯದ ವ್ಯಕ್ತಿಗಳಿಗೂ ನೋಟಿಸ್ ನೀಡಿದೆ.
*1,200 ಟ್ರಸ್ಟ್ ಮತ್ತು ಪಾಲುದಾರಿಕೆ ಸಂಸ್ಥೆಗಳ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ತೋರಿಸಿರುವ ಆದಾಯ ಮತ್ತು ಇಲಾಖೆಯ ದತ್ತಾಂಶಗಳ ನಡುವೆ 10 ಕೋಟಿ ರೂ.ಗಿಂತ ಹೆಚ್ಚಿನ ವ್ಯತ್ಯಾಸವಿರುವ ಕಾರಣ ಮಾಹಿತಿ ನೋಟಿಸ್ ನೀಡಲಾಗಿದೆ.
ಟ್ಯಾಕ್ಸ್ ನೋಟೀಸ್ ಕಳುಹಿಸಲು ಕಾರಣವೇನು..?
ಆದಾಯ ತೆರಿಗೆ ರಿಟರ್ನ್ ನಲ್ಲಿ ಅವರೆಲ್ಲರೂ ಕ್ಲೈಮ್ ಮಾಡಿದ ತೆರಿಗೆ ಕಡಿತವು ಫಾರ್ಮ್ 16 ಅಥವಾ ವಾರ್ಷಿಕ ಮಾಹಿತಿ ಹೇಳಿಕೆ ಅಥವಾ ಆದಾಯ ತೆರಿಗೆ ಇಲಾಖೆಯ ಡೇಟಾದೊಂದಿಗೆ ಹೊಂದಿಕೆಯಾಗುತ್ತಿಲ್ಲ. ಆದಾಯ ತೆರಿಗೆ ಪಾವತಿದಾರರು ಈ ಮಾಹಿತಿ ನೋಟಿಸ್ ಗೆ ಪ್ರತಿಕ್ರಿಯಿಸದಿದ್ದರೆ ಅಥವಾ ಯಾವುದೇ ವಿವರಣೆಯನ್ನು ನೀಡಲು ಸಾಧ್ಯವಾಗದಿದ್ದರೆ, ಆದಾಯ ತೆರಿಗೆ ಇಲಾಖೆ ಅವರಿಗೆ ಬೇಡಿಕೆ ನೋಟಿಸ್ ಕಳುಹಿಸುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.