Loan Tax: ಬಾಡಿಗೆ ಮನೆ ಇರುವವರಿಗೆ ಮತ್ತು ಹೋಂ ಲೋನ್ ಮಾಡಿದವರಿಗೆ ನೋಟೀಸ್ ಜಾರಿ, ತೆರಿಗೆ ಇಲಾಖೆ ಆದೇಶ.
ಬಾಡಿಗೆ ಮನೆ ಇರುವವರಿಗೆ ಮತ್ತು ಹೋಂ ಲೋನ್ ಮಾಡಿದವರಿಗೆ ತೆರಿಗೆ ನೋಟೀಸ್ ಜಾರಿಮಾಡಲು ಕೇಂದ್ರ ಸರ್ಕಾರದ ಆದೇಶ.
Income Tax New Update: ಆದಾಯ ತೆರಿಗೆಗೆ (Income Tax) ಸಂಬಂಧಪಟ್ಟಂತೆ ಹೊಸ ಹೊಸ ಅಪ್ಡೇಟ್ ಗಳು ಹೊರ ಬೀಳುತ್ತಿದೆ. ಆದಾಯ ತೆರಿಗೆ ರಿಟರ್ನ್ ಮಾಡಲು ಜುಲೈ 31 ಕೊನೆಯ ದಿನಾಂಕ ವಾಗಿತ್ತು. ಆಗಸ್ಟ್ ನಿಂದ ಆದಾಯ ತೆರಿಗೆಗೆ ದಂಡ ವಿಧಿಸಲಾಗುತ್ತದೆ.
ಆದಾಯ ತೆರಿಗೆ
ಕೃತಕ ಬುದ್ಧಿಮತ್ತೆಯ ಹೆಚ್ಚಿನ ಬಳಕೆಯಿಂದ ಇದೀಗ ಹೌಸ್ ರೆಂಟ್ ಹಾಗು ಹೌಸಿಂಗ್ ಲೋನ್ ಬಡ್ಡಿದರದ ತೆರಿಗೆ ಪಾವತಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಲೈಮ್ ಮಾಡಿರುವ ಅನುಮಾನಾಸ್ಪದ ವಿನಾಯಿತಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ.
ಚಾರ್ಟೆಡ್ ಅಕ್ಕೌಂಟೆಂಟ್ಸ್ ತಿಳಿಸಿರುವ ಪ್ರಕಾರ ಹೆಚ್ಚಿನ ತೆರಿಗೆ ಪಾವತಿದಾರರು ತಾವು ಸಂಬಂಧಿಕರಿಗೆ ಸೇರಿರುವ ಬಾಡಿಗೆ ಮನೆಗಳಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ತೆರಿಗೆ ಪಾವತಿದಾರರು ಬಾಡಿಗೆಯನ್ನು ಪಾವತಿಸುತ್ತಿರುವುದಾಗಿ ತರಿಸಿದ್ದು ತಮ್ಮ ರಿಟರ್ನ್ ಗಳಲ್ಲಿ ಈ ಬಾಡಿಗೆ ಪಾವತಿಯನ್ನು ಸ್ವೀಕರಿಸುವವರನ್ನು ನಮೂದಿಸಿಲ್ಲ ಎಂದು ತಿಳಿಸಿದ್ದಾರೆ.
ಆದಾಯ ತೆರಿಗೆ ಹೊಸ ಮಾಹಿತಿ
ಇದೆ ರೀತಿ ಕೆಲವು ಪಾವತಿದಾರರು ಬೋಗಸ್ ಹೌಸಿಂಗ್ ಲೋನ್ ಬಡ್ಡಿ ವಿನಾಯಿತಿಗಳನ್ನು ಕ್ಲೈಮ್ ಮಾಡಿದ್ದು, ಇಂತಹ ಕ್ಲೈಮ್ ಗಳ ಕುರಿತು ಐಟಿ ವಿಭಾಗ ವಿವರಗಳನ್ನು ಪಡೆದುಕೊಳ್ಳುತ್ತಿದೆ ಎನ್ನುವುದಾಗಿ ತಿಳಿದುಬಂದಿದೆ. ಚಾರ್ಟರ್ಡ್ ಅಕ್ಕೌಂಟೆಂಟ್ಸ್ ಕೆಲವೊಬ್ಬರ ಸಂಬಳ ಪಡೆಯುವ ತೆರಿಗೆದಾರರು ಹೆಚ್ಚಿನ ಜೀವನ ಖರ್ಚುವೆಚ್ಚ ಶಿಕ್ಷಣ ಹಾಗು ಕಡಿಮೆ ಕಡಿತದ ಕಾರಣದಿಂದ ತೆರಿಗೆಯನ್ನು ಉಳಿಯಲು ಸಂಶಯಾಸ್ಪದ ಕಡಿತಗಳನ್ನು ತೋರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ ಕಮ್ ಟ್ಯಾಕ್ಸ್ ಮೂಲಗಳ ಪ್ರಕಾರ ಐಟಿ ರಿಟರ್ನ್ ಗಳನ್ನೂ ವಿಶ್ಲೇಷಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದಾರೆ ಎಂದು ಇಲಾಖೆ ತಿಳಿಸಿದೆ. ಆದಾಯವು ಹೆಚ್ಚಿನ ಸಂಖ್ಯೆಯ ವ್ಯತ್ಯಾಸಗಳನ್ನು ಹೊಂದಿದೆ ಅಂತೆಯೇ ಮನೆ ಬಾಡಿಗೆ ಭತ್ಯೆ ಮತ್ತು ಗೃಹ ಸಾಲ ಮರುಪಾವತಿಗಳಲ್ಲಿ ಹೆಚ್ಚಿನ ವ್ಯತ್ಯಾಸಗಳು ಕಂಡು ಬಂದಿವೆ ಎಂದು ಇಲಾಖೆ ತಿಳಿಸಿದೆ.
ತೆರಿಗೆದಾರರು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ ಎಂದು ಇಲಾಖೆ ಹೇಳಿದೆ. ಈಗಾಗಲೇ ಮಾಡಿರುವ ಕ್ಲೈಮ್ ಗಳು ಹಾಗು ನಿಜವಾದ ದಾಖಲೆಗಳನ್ನು ಪಾವತಿದಾರರ ಪ್ರೊಫೈಲ್ ಗಳನ್ನೂ ಪ್ರವೇಶಿಸುತ್ತದೆ ಎಂದು ಹೇಳಲಾಗಿದೆ.