Tax Notice Rules: ಈ 5 ಬಿಸಿನೆಸ್ ಮಾಡುವವರಿಗೆ ಕೇಂದ್ರದಿಂದ ಎಚ್ಚರಿಕೆ, ನಿಮ್ಮ ಮನೆಗೆ ಬರಲಿದೆ ತೆರಿಗೆ ನೋಟೀಸ್

ಈ 5 ವಹಿವಾಟುಗಳನ್ನು ಮಾಡಿದರೆ ಮನೆಗೆ ಬರಲಿದೆ ತೆರಿಗೆ ನೋಟೀಸ್.

Income Tax Notice For This 5 Business: ದೇಶದಲ್ಲಿ ತೆರಿಗೆ ನಿಯಮಗಳು ಎಷ್ಟು ಕಠಿಣವಾಗಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದಿದೆ. ಆದಾಯ ಇಲಾಖೆಯು ಜನರು ಮಾಡುವಂತಹ ಎಲ್ಲ ರೀತಿಯ ವಹಿವಾಟಿನ ಮೇಲೆ ಕಣ್ಣಿಟ್ಟಿರುತ್ತದೆ. ಆದಾಯ ಇಲಾಖೆ ನಿಗದಿಪಡಿಸಿರುವ ಮಿತಿಗಿಂತ ಹೆಚ್ಚು ಹಣದ ವಹಿವಾಟು ನಡೆದರೆ ಅಂತವಹ ವಹಿವಾಟನ್ನು ತೆರಿಗೆಗೆ ಒಳಪಡಿಸಲಾಗುತ್ತದೆ.

ಇನ್ನು ದೊಡ್ಡ ರೀತಿಯ ನಗದು ವಹಿವಾಟುಗಳಿಗೆ ಆದಾಯ ಇಲಾಖೆ ನೋಟಿಸ್ ನೀಡುತ್ತದೆ. ಯಾವುದೇ ರೀತಿಯ ಡಿಜಿಟಲ್ ವಹಿವಾಟು ಅಥವಾ ನಗದು ವಹಿವಾಟು ಮಾಡಿದರು ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಬ್ಯಾಂಕ್ ನಲ್ಲಿನ ಹೂಡಿಕೆ, ಆಸ್ತಿ ವಹಿವಾಟು ಸೇರಿದಂತೆ ಯಾವುದೇ ರೀತಿಯಿಂದ ನಗದು ವಹಿವಾಟು ಮಿತಿಗಿಂತ ಹೆಚ್ಚು ನಡೆದರೆ ಆದಾಯ ಇಲಾಖೆ ನೋಟಿಸ್ ಅನ್ನು ನೀಡುತ್ತದೆ. ಇನ್ನು ಜನರು ಇಂತಹ 5 ವಹಿವಾಟುಗಳನ್ನು ಮಾಡಿದರೆ ತೆರಿಗೆ ನೋಟಿಸ್ ಮನೆಗೆ ಬರುವುದಂತೂ ಖಂಡಿತ.

Income Tax Notice
Image Credit: hdfcsec

ಈ 5 ವಹಿವಾಟುಗಳನ್ನು ಮಾಡಿದರೆ ಮನೆಗೆ ಬರಲಿದೆ ತೆರಿಗೆ ನೋಟೀಸ್
•ಇನ್ನು 1 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಕ್ರೆಡಿಟ್ ಕಾರ್ಡ್ ಬಿಲ್ ಆಗಿ ಠೇವಣಿ ಮಾಡಿದರೆ ಹಾಗೂ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿಸಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ.

•ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಒಂದಕ್ಕಿಂತ ಹೆಚ್ಚು ಬಾರಿ ಠೇವಣಿ ಮಾಡಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ. ಇನ್ನು ಚಾಲ್ತಿ ಕತೆಯಲ್ಲಿ ಗರಿಷ್ಠ ಮಿತಿ 50 ಲಕ್ಷ ರೂ. ಆಗಿದೆ.

•ನೀವು 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ನಗದು ರೂಪದಲ್ಲಿ ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ ಆಸ್ತಿ ರಿಜಿಸ್ಟ್ರಾರ್ ಪರವಾಗಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಹೋಗುತ್ತದೆ.

Join Nadunudi News WhatsApp Group

Income Tax Latest Update
Image Credit: Tomorrowmakers

•ಷೇರುಗಳು, ಮ್ಯೂಚುವಲ್ ಫಂಡ್‌ ಗಳು, ಡಿಬೆಂಚರ್‌ ಗಳು ಮತ್ತು ಬಾಂಡ್‌ ಗಳಲ್ಲಿ ದೊಡ್ಡ ನಗದು ವಹಿವಾಟುಗಳನ್ನು ನಡೆಸುವಂತಿಲ್ಲ. ಆರ್ಥಿಕ ವರ್ಷದಲ್ಲಿ ಗರಿಷ್ಟ 10 ಲಕ್ಷದ ವರೆಗೆ ಮಾತ್ರ ಠೇವಣಿ ಮಾಡಬಹುದಾಗಿದೆ.

•ಒಂದು ವರ್ಷದಲ್ಲಿ ನೀವು ಎಫ್ ಡಿಯಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಒಂದಕ್ಕಿಂತ ಹೆಚ್ಚು ಬಾರಿ ಠೇವಣಿ ಮಾಡಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ.

Join Nadunudi News WhatsApp Group