Tax Notice: ಆದಾಯ ತೆರಿಗೆಯಲ್ಲಿ ಈ 5 ಆದಾಯ ತೋರಿಸದೆ ಇದ್ದರೆ ಮನೆಗೆ ಬರಲಿದೆ ನೋಟೀಸ್, ಕೇಂದ್ರದ ಎಚ್ಚರಿಕೆ.
ಈ 5 ರೀತಿಯ ಆದಾಯವನ್ನು ಆದಾಯ ತೆರಿಗೆಯಲ್ಲಿ ತೋರಿಸದಿದ್ದರೆ ಆದಾಯ ಇಲಾಖೆ ಮನೆಗೆ ನೋಟೀಸ್ ಕಳುಹಿಸುತ್ತದೆ.
Tax Notice 2023: ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ (ITR) ಸಲ್ಲಿಕೆಯನ್ನು ಕಡ್ಡಾಯಗೊಳಿಸಿದೆ. ಐಟಿ ರಿಟರ್ನ್ ಸಲಿಕೆಯಲ್ಲಿ ಕೂಡ ಆದಾಯ ಇಲಾಖೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ. ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ.
ಇನ್ನು ತೆರಿಗೆದಾರರು ನಿಗದಿತ ಸಮಯದೊಳಗೆ ತೆರಿಗೆ ಪಾವತಿಸಬೇಕೆನ್ನುವ ಬಗ್ಗೆ ಈಗಾಗಲೇ ಕೇಂದ್ರದಿಂದ ಸೂಚನೆ ಬಂದಿದೆ. ತೆರೆದಾರರು ತೆರಿಗೆ ಪಾವತಿಸುವ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಇನ್ನು ತೆರಿಗೆದಾರರಿಗೆ ಕೆಲವೊಮ್ಮೆ ಆದಾಯ ಇಲಾಖೆ ತೆರಿಗೆ ನೋಟಿಸ್ (Tax Notice) ಅನ್ನು ಕಳುಹಿಸುತ್ತದೆ. ತೆರಿಗೆ ಪಾವತಿಯಲ್ಲಿ ಯಾವುದೇ ರೀತಿಯ ತಪ್ಪು ಕಂಡು ಬಂದಲ್ಲಿ ನೋಟಿಸ್ ನೀಡಲಾಗುತ್ತದೆ.
ಆದಾಯ ತೆರಿಗೆಯಲ್ಲಿ ಈ 5 ಆದಾಯ ತೋರಿಸದೆ ಇದ್ದರೆ ಮನೆಗೆ ಬರಲಿದೆ ನೋಟೀಸ್
*ಸಾಮಾನ್ಯವಾಗಿ ಹೂಡಿಕೆಯ ಲಾಭದ ಮೊತ್ತಕ್ಕೆ ಐಟಿಆರ್ ಅನ್ನು ಸಲ್ಲಿಸಬೇಕಾಗುತ್ತದೆ. ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆದರೆ ಅದರ ಲಾಭವು ಪೋಷಕರಿಗೆ ತಲುಪುತ್ತದೆ. ಮಗುವಿನ ಹೆಸರಿನಲ್ಲಿ ಬರುವ ಬಡ್ಡಿಯ ಲಾಭವನ್ನು ನೀವು ನಿಮ್ಮ ಆದಾಯಕ್ಕೆ ಸೇರಿಸಿಕೊಂಡು ಐಟಿಆರ್ ಸಲ್ಲಿಸುವಾಗ ಮಾಹಿತಿ ನೀಡಬೇಕು. ಅಪ್ರಾಪ್ತರ ಆದಾಯವನ್ನು ಸೇರಿಸುವ ಮೂಲಕ 1500 ರೂ. ಕಡಿತವನ್ನು ಕ್ಲೈಮ್ ಮಾಡಬಹುದು.
*ಆದಾಯ ರಿಟರ್ನ್ ಸಲ್ಲಿಸುವ ಆದಾಯ ರಿಟರ್ನ್ ಪಡೆಯುವ ಬಗ್ಗೆ ಮಾಹಿತಿ ಸಲ್ಲಿಸಬೇಕು. ಪಿಪಿಎಫ್ ನ ಮೂಲಕ ಗಳಿಸಿದ ಬಡ್ಡಿಯು ತೆರಿಗೆ ಮುಕ್ತವಾಗಿರುತ್ತದೆ. ಐಟಿಆರ್ ಸಲ್ಲಿಕೆಯಲ್ಲಿ ಇದರ ಮಾಹಿತಿಯನ್ನು ನೀಡಬೇಕಾಗುತ್ತದೆ.
*ಇನ್ನು ತೆರಿಗೆದಾರರು ತಮ ಉಳಿತಾಯ ಬ್ಯಾಂಕ್ ಖಾತೆಯಿಂದ ಗಳಿಸಿದ ಬಡ್ಡಿಯ ಹಣದ ಬಗ್ಗೆ ಕೂಡ ಮಾಹಿತಿ ನೀಡಬೇಕು. ಈ ಬಗ್ಗೆ ಮಾಹಿತಿ ನೀಡಿದ ನಂತರ ಸೆಕ್ಷನ್ 80TTA ಅಡಿಯಲ್ಲಿ 10,000 ರೂ. ವರೆಗೆ ಕಡಿತವಾಗಿ ಕ್ಲೈಮ್ ಮಾಡಿಕೊಳ್ಳಲಾಗುತ್ತದೆ.
*ನೀವು ವಿದೇಶದಲ್ಲಿ ಹೂಡಿಕೆ ಮಾಡಿದ್ದರೆ, ಮನೆ ಅಥವಾ ಆಸ್ತಿ ಇನ್ನಾವುದೇ ರೂಪದಲ್ಲಿ ಲಾಭ ಗಳಿಸಿದ್ದರೆ ಐಟಿಆರ್ ಸಲ್ಲಿಕೆಯ ಸಮಯದಲ್ಲಿ ಮಾಹಿತಿ ನೀಡಬೇಕು.
*ಬಡ್ಡಿಯಿಂದ ಬಂದ ಒಟ್ಟು ಆದಾಯಕ್ಕೆ ಸಂಚಿತ ಬಡ್ಡಿ ಎನ್ನಲಾಗುತ್ತದೆ. ಈ ಸಂಚಿತ ಠೇವಣಿ ಅಥವಾ ಬಾಂಡ್‌ಗಳಿಂದ ಬಡ್ಡಿ, ಇದನ್ನು ಮುಕ್ತಾಯದ ಮೇಲೆ ಮಾತ್ರ ಪಾವತಿಸಲಾಗುತ್ತದೆ. ಇಂತಹ ಆದಾಯದ ಮೇಲೆ ಟಿಡಿಎಸ್ ತೆಗೆದುಕೊಳ್ಳಲಾಗುತ್ತದೆ. ಈ ಕಾರಣಕ್ಕೆ ಐಟಿಆರ್ ಸಲ್ಲಿಕೆಯ ಸಮಯದಲ್ಲಿ ಸಂಚಿತ ಬಡ್ಡಿಯ ಬಗ್ಗೆ ವಿವಿರವನ್ನು ನೀಡಬೇಕಾಗುತ್ತದೆ.