Income Tax Rule: ಇಂತಹ ಜನರಿಗೆ ಕೇವಲ 10% ತೆರಿಗೆ, ಗುಡ್ ನ್ಯೂಸ್ ಕೊಟ್ಟ ಆದಾಯ ತೆರಿಗೆ ಇಲಾಖೆ.
ತೆರಿಗೆ ವಿನಾಯಿತಿ ಅಡಿಯಲ್ಲಿ ಇಂತಹ ಜನರು ಕೇವಲ 10% ಮಾತ್ರ ತೆರಿಗೆ ಕಟ್ಟಬಹುದಾಗಿದೆ.
Income Tax New Rules 2023: ಹೊಸ ಹಣಕಾಸು ವರ್ಷದ (New Financial Year) ಆರಂಭವಾದ ಬೆನ್ನಲ್ಲೇ ಅನೇಕ ನಿಯಮಗಳಲ್ಲಿ ಬಾರಿ ಬದಲಾವಣೆ ಆಗಿದೆ. ಇನ್ನು ಇತ್ತೀಚೆಗಂತೂ ತೆರಿಗೆ ಸಂಭಂದಿತ ಅನೇಕ ಅಪ್ಡೇಟ್ ಗಳು ಹೊರಬರುತ್ತಲೇ ಇದೆ.
ತೆರಿಗೆ ಪಾವತಿಯಲ್ಲಿ ಸಾಕಷ್ಟು ರೀತಿಯ ನಿಯಮಗಳು ಬದಲಾಗಿವೆ. ಇದೀಗ ಆದಾಯ ತೆರಿಗೆ ಸಂಭಂದಿಸಿದಂತೆ ನಿರ್ಮಲ ಸೀತಾರಾಮನ್ (Nirmala Sitaraman) ಮಹತ್ವದ ಘೋಷಣೆಯನ್ನು ಹೊರಡಿಸಿದ್ದಾರೆ. ಹೊಸ ತೆರಿಗೆ ಪದ್ಧತಿಯಲ್ಲಿನ ಹೊಸ ನಿಯಮಗಳ ಬಗ್ಗೆ ತಿಳಿಯೋಣ.
ಆದಾಯ ತೆರಿಗೆಯಲ್ಲಿ ಬದಲಾವಣೆ ತಂಡ ನಿರ್ಮಲ ಸೀತಾರಾಮನ್
ಇನ್ನು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕಾಗಿದೆ. ಜುಲೈ 31 ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜುಲೈ 31 ರ ವಳಗೆ ಆದಾಯ್ ರಿಟರ್ನ್ ಅನ್ನು ಸಲ್ಲಿಸುವುದು ಅನಿವಾರ್ಯವಾಗಿದೆ. ಇದೀಗ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಹೊಸ ತೆರಿಗೆ ಪದ್ದತಿಯಲ್ಲಿ ಹೊಸ ನಿಯಮವನ್ನು ಹೊರಡಿಸಿದ್ದಾರೆ.
ಹೊಸ ತೆರಿಗೆ ಪದ್ದತಿಯಲ್ಲಿ ಬದಲಾವಣೆ
ಪ್ರಸ್ತುತ ಹಳೆ ತೆರಿಗೆ ಪದ್ಧತಿ ಹಾಗು ಹೊಸ ತೆರಿಗೆ ಪದ್ದತಿಯಲ್ಲಿ ತೆರಿಗೆಗಳನ್ನು ವಿಧಿಸಲಾಗುತ್ತದೆ. ಎರಡು ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಸಲ್ಲಿಸುವಾಗ, ಎರಡು ತೆರಿಗೆಗಳಿಗೆ ವಿಭಿನ್ನ ತೆರಿಗೆ ಸ್ಲ್ಯಾಬ್ ಗಳನ್ನೂ ನೀಡಲಾಗುತ್ತದೆ. ಅದರ ಪ್ರಕಾರ ತೆರಿಗೆಯನ್ನು ಸಲ್ಲಿಸಬೇಕು. ಹೊಸ ತೆರಿಗೆ ಪದ್ದತಿಯಲ್ಲಿ ಬದಲಾವಣೆಯನ್ನು ಘೋಷಿಸುವಾಗ ಮೋದಿ ಸರ್ಕಾರವು 3 ಲಕ್ಷದ ವರೆಗೆ ಶೂನ್ಯ ತೆರಿಗೆಯನ್ನು ಇರಿಸಿದೆ.
ಆದಾಯ ತೆರಿಗೆ ಪಾವತಿ
ಸಾಮಾನ್ಯವಾಗಿ ಜನರು ವಾರ್ಷಿಕವಾಗಿ 3-6 ಲಕ್ಷ ಆದಾಯದ ಮೇಲೆ 5 % ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹಾಗೆಯೆ ಯಾರ ಆದಾಯವು 6-9 ಲಕ್ಷ ಆಗಿದ್ದರೆ, ಅವರು 10 % ತೆರಿಗೆಯನ್ನು ಪಾವತಿಸಬೇಕು. ಯಾರ ಆದಾಯವು 9-12 ಲಕ್ಷ ಆಗಿದ್ದರೆ, ಅವರು 15 % ತೆರಿಗೆಯನ್ನು ಪಾವತಿಸಬೇಕು.
ಆದಾಯವು 12-15 ಲಕ್ಷ ಆಗಿದ್ದರೆ, ಅವರು 20% ತೆರಿಗೆಯನ್ನು ಪಾವತಿಸಬೇಕು. ಇನ್ನು 15 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಹೊಂದಿರುವವರು 30 % ತೆರಿಗೆಯನ್ನು ಸಲ್ಲಿಸಬೇಕಾಗುತ್ತದೆ.