ITR Forms: ಪ್ರತಿ ವರ್ಷ ಆದಾಯ ತೆರಿಗೆ ಕಟ್ಟುವವರಿಗೆ ಹೊಸ ರೂಲ್ಸ್, ಮಾರ್ಗಸೂಚಿ ಬದಲಾವಣೆ ಮಾಡಿದ ಕೇಂದ್ರ.

ದಾಯ ಇಲಾಖೆಯು ITR ಸಲ್ಲಿಕೆ ಮಾಡುವವರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Income Tax Return Forms: ಸದ್ಯ ದೇಶದಲ್ಲಿ ಆದಾಯ ಇಲಾಖೆಯು ತೆರಿಗೆ ನಿಯಮವನ್ನು ಬಿಗಿಗೊಳಿಸುತ್ತಿದೆ. ಕಾರಣ ಈ ವರ್ಷದ 2024 -25 ITR ಫೈಲಿಂಗ್ ದಿನಾಂಕ ಹತ್ತಿರವಾಗುತ್ತಿದೆ. ತೆರಿಗೆ ಪಾವತಿದಾರರು ನಿಗದಿತಾ ಸಮಯದೊಳಗೆ ITR ಸಲ್ಲಿಕೆ ಕಡ್ಡಾಯವಾಗಿದೆ.ಸದ್ಯ ITR ಸಲ್ಲಿಕೆಗೆ ಆದಾಯ ಇಲಾಖೆಯು ಸೂಚನೆಯನ್ನು ನೀಡಿದೆ. ಇದೀಗ ಆದಾಯ ಇಲಾಖೆಯು ITR ಸಲ್ಲಿಕೆ ಮಾಡುವವರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Income Tax Return Forms
Image Credit: Indiafilings

ಪ್ರತಿ ವರ್ಷ ಆದಾಯ ತೆರಿಗೆ ಕಟ್ಟುವವರಿಗೆ ಹೊಸ ರೂಲ್ಸ್
ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್ ಫಾರ್ಮ್ 2, 3 ಮತ್ತು 5 ಅನ್ನು 2024-25 ರ ಮೌಲ್ಯಮಾಪನ ವರ್ಷಕ್ಕೆ ತೆರಿಗೆ ರಿಟರ್ನ್ ಸಲ್ಲಿಸಲು ಸೂಚಿಸಿದೆ. 2024-25 ರ ಮೌಲ್ಯಮಾಪನ ವರ್ಷದಲ್ಲಿ ರಿಟರ್ನ್ಸ್ ಸಲ್ಲಿಸಲು ಜನವರಿ 31, 2024 ರಂದು ITR-2, ITR-3 ಮತ್ತು ITR-5 ಫಾರ್ಮ್‌ ಗಳನ್ನು ಸೂಚಿಸಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಹೇಳಿಕೆಯಲ್ಲಿ ತಿಳಿಸಿದೆ.

ITR-1 ಮತ್ತು ITR-6 ನಮೂನೆಗಳನ್ನು ಈಗಾಗಲೇ ಸೂಚಿಸಲಾಗಿದೆ. ಇನ್ನು 50 ಲಕ್ಷ ರೂ. ವರೆಗಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಐಟಿಆರ್-1 ಫಾರ್ಮ್ ಅನ್ನು ಡಿಸೆಂಬರ್, 2023 ರಲ್ಲಿ ತಿಳಿಸಲಾಗಿದೆ, ಆದರೆ ರಿಟರ್ನ್ಸ್ ಸಲ್ಲಿಸುವ ಕಂಪನಿಗಳಿಗೆ ಐಟಿಆರ್ -6 ಫಾರ್ಮ್ ಅನ್ನು ಜನವರಿ, 2024 ರಲ್ಲಿ ಸೂಚಿಸಲಾಗಿದೆ.

Income Tax Return Latest Updates
Image Credit: a2ztaxcorp

ಮಾರ್ಗಸೂಚಿ ಬದಲಾವಣೆ ಮಾಡಿದ ಕೇಂದ್ರ
ಎಲ್ಲಾ ITR ಫಾರ್ಮ್‌ ಗಳು ಏಪ್ರಿಲ್ 1, 2024 ರಿಂದ ಜಾರಿಗೆ ಬರಲಿದೆ. ತೆರಿಗೆದಾರರ ಅನುಕೂಲಕ್ಕಾಗಿ ಮತ್ತು ರಿಟರ್ನ್ಸ್ ಸಲ್ಲಿಸಲು ಸುಲಭವಾಗುವಂತೆ ಐಟಿಆರ್ ಫಾರ್ಮ್‌ ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸಿಬಿಡಿಟಿ ಹೇಳಿದೆ. ಹೇಳಿಕೆಯ ಪ್ರಕಾರ, ITR ನ ಎಲ್ಲಾ ಫಾರ್ಮ್ 1 ರಿಂದ 6 ರವರೆಗೆ ಸೂಚಿಸಲಾಗಿದೆ ಮತ್ತು ರಿಟರ್ನ್ಸ್ ಸಲ್ಲಿಸಲು ಏಪ್ರಿಲ್ 1, 2024 ರಿಂದ ಜಾರಿಗೆ ಬರಲಿದೆ.

Join Nadunudi News WhatsApp Group

Join Nadunudi News WhatsApp Group