IRT Update: ಬಂತು ಹೊಸ ಆದಾಯ ತೆರಿಗೆ ನಿಯಮ, ಪ್ರತಿ ತಿಂಗಳ ಹಣಕಾಸು ವ್ಯವಹಾರದ ಮೇಲೆ ಇಷ್ಟು ತೆರಿಗೆ ಕಡ್ಡಾಯ.

ಪ್ರತಿ ತಿಂಗಳ ಹಣಕಾಸು ವ್ಯವಹಾರದ ಮೇಲೆ ಇಷ್ಟು ತೆರಿಗೆ ಕಡ್ಡಾಯ.

Income Tax Return: ಆದಾಯ ತೆರಿಗೆಯು ನಿಮ್ಮ ಗಳಿಕೆಯ ಆಧಾರದ ಮೇಲೆ ನೀವು ಸರ್ಕಾರಕ್ಕೆ ಪಾವತಿಸುವ ಮೊತ್ತವಾಗಿದೆ. ಭಾರತದಲ್ಲಿ 2.5 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಎಲ್ಲಾ ನಾಗರಿಕರು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ತೆರಿಗೆದಾರರಿಗೆ ಸ್ವಲ್ಪ ಪರಿಹಾರವನ್ನು ಒದಗಿಸಲು ಸರ್ಕಾರವು 2023 ರಲ್ಲಿ ಹೊಸ ಆದಾಯ ತೆರಿಗೆ ಯನ್ನು ಘೋಷಣೆಮಾಡಿದೆ.

ಇದರಲ್ಲಿ ವಾರ್ಷಿಕ ಆದಾಯವು 7 ಲಕ್ಷಕ್ಕಿಂತ ಕಡಿಮೆಯಿದ್ದರೆ ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 87A ಅಡಿಯಲ್ಲಿ ಸಂಪೂರ್ಣ ತೆರಿಗೆ ರಿಯಾಯಿತಿಯನ್ನು ನೀಡಿದೆ. ಆದಾಯ ತೆರಿಗೆ ಇಲಾಖೆ, ತೆರಿಗೆಗೆ ಸಂಬಂಧಿಸಿದಂತೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುತ್ತದೆ.

Income Tax Return
Image Credit: India Filings

ಪತಿಯಿಂದ ಪಡೆದ ಹಣವನ್ನು ಪತ್ನಿ ಹೂಡಿಕೆ ಮಾಡಿದರೆ ತೆರಿಗೆ ವಿಧಿಸಲಾಗುತ್ತದೆ
ನೀವು ಪ್ರತಿ ತಿಂಗಳು ಮನೆಯ ಖರ್ಚಿಗಾಗಿ ಹಣವನ್ನು ನೀಡಿದರೆ ಅಥವಾ ಹಬ್ಬದ ಸಂದರ್ಭದಲ್ಲಿ ಹಣವನ್ನು ಉಡುಗೊರೆಯಾಗಿ ನೀಡಿದರೆ, ನಿಮ್ಮ ಹೆಂಡತಿ ಆದಾಯ ತೆರಿಗೆಗೆ ಜವಾಬ್ದಾರಳಾಗಿರುದಿಲ್ಲ. ಈ ಎರಡೂ ರೀತಿಯ ಮೊತ್ತವನ್ನು ಗಂಡನ ಆದಾಯವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಪತ್ನಿ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಹೆಂಡತಿ ಪದೇ ಪದೇ ಈ ಹಣವನ್ನು ಹೂಡಿಕೆ ಮಾಡಿ ಮತ್ತು ಅದರಿಂದ ಆದಾಯವನ್ನು ಪಡೆದರೆ, ಅದರ ಮೇಲೆ ಅವಳು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಉಡುಗೊರೆಯಾಗಿ ನೀಡಿದ ಹಣಕ್ಕೆ ತೆರಿಗೆ ವಿನಾಯಿತಿ ಲಭ್ಯವಿಲ್ಲ
ಆದಾಯ ತೆರಿಗೆ ಕಾಯಿದೆಯಡಿ, ನೀವು ನಿಮ್ಮ ಹೆಂಡತಿಗೆ ಆದಾಯವನ್ನು ಹೊರತುಪಡಿಸಿ ಹಣವನ್ನು ಉಡುಗೊರೆಯಾಗಿ ನೀಡಿದರೆ, ಅದು ನಿಮ್ಮ ಆದಾಯವೆಂದು ಪರಿಗಣಿಸಲಾಗುತ್ತದೆ. ಇದರ ಮೇಲಿನ ತೆರಿಗೆ ಹೊಣೆ ನಿಮ್ಮದಾಗಿರುತ್ತದೆ. ವಾಸ್ತವವಾಗಿ, ಸಂಗಾತಿಗಳು ಸಂಬಂಧಿಕರ ವರ್ಗಕ್ಕೆ ಒಳಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಉಡುಗೊರೆ ವಹಿವಾಟುಗಳಿಗೆ ಯಾವುದೇ ತೆರಿಗೆ ಇರುವುದಿಲ್ಲ.

income tax rules
Image Credit: Herofincorp

ಇದಕ್ಕೆ ITR ಸಲ್ಲಿಸುವ ಅಗತ್ಯ ಇಲ್ಲ
SIP ಮೂಲಕ ಮ್ಯೂಚುವಲ್ ಫಂಡ್ ನಲ್ಲಿ ಪ್ರತಿ ತಿಂಗಳು ತನ್ನ ಪತಿಯಿಂದ ಪಡೆದ ಮೊತ್ತದಿಂದ ಸ್ವಲ್ಪ ಹಣವನ್ನು ಪತ್ನಿ ಹೂಡಿಕೆ ಮಾಡುತ್ತಿದ್ದರೆ, ಅವರು ಈ ಹಣದ ಮೇಲೆ ITR ಅನ್ನು ಸಲ್ಲಿಸುವ ಅಗತ್ಯವಿಲ್ಲ. ಇದಲ್ಲದೆ ಅವರು ಇದಕ್ಕೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಈ ಹಣದ ಹೂಡಿಕೆಯಿಂದ ಬರುವ ಆದಾಯವನ್ನು ಪತಿಯ ತೆರಿಗೆಯ ಆದಾಯಕ್ಕೆ ಸೇರಿಸಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group