Income Tax: ಆದಾಯ ತೆರಿಗೆ ಕಟ್ಟುವವರಿಗೆ ಕೇಂದ್ರದಿಂದ ಇನ್ನೊಂದು ಗುಡ್ ನ್ಯೂಸ್, ಇಷ್ಟು ಹಣಕ್ಕೆ ಯಾವುದೇ ತೆರಿಗೆ ಇಲ್ಲ.
ಆದಾಯ ತೆರಿಗೆಯಲ್ಲಿ ವಿನಾಯಿತಿ ಜಾರಿಗೆ ತಂದ ಕೇಂದ್ರ ಸರ್ಕಾರ.
Income Tax New Rule: ಈ ಬಾರಿಯ ಬಜೆಟ್ ಮಂಡನೆಯಲ್ಲಿ ಮೋದಿ ಸರ್ಕಾರವು ಹೊಸ ತೆರಿಗೆ ಪದ್ದತಿಯನ್ನು ಜಾರಿಗೆ ತಂದಿದೆ. ತೆರಿಗೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ತೆರಿಗೆ ಪದ್ದತಿಯಲ್ಲಿ ಅನೇಕ ಜನರ ಆಸಕ್ತಿ ಹೆಚ್ಚಾಗಿದೆ.
ಹೊಸ ಆದಾಯ ತೆರಿಗೆ ಪದ್ಧತಿ
ಶುಕ್ರವಾರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮತ್ತೊಮ್ಮೆ ಹೊಸ ತೆರಿಗೆ ಪದ್ದತಿಯನ್ನು ಜಾರಿಗೆ ತಂದಿದ್ದಾರೆ. ಹೊಸ ತೆರಿಗೆ ಪದ್ದತಿಯು ಮಧ್ಯಮ ವರ್ಗದ ಜನರಿಗೆ ಗರಿಷ್ಠ ಪರಿಹಾರ ಮತ್ತು ಪ್ರಯೋಜನಗಳನ್ನು ನೀಡಿದೆ ಎಂದು ಹಣಕಾಸು ಸಚಿವರು ಹೇಳಿದರು. ಈ ವರ್ಗದ ಜನರು ವಾರ್ಷಿಕ 7.27 ಲಕ್ಷ ರೂಪಾಯಿಗಳ ಮೇಲೆ ತೆರಿಗೆ ವಿನಾಯಿತಿ ಪಡೆಯುತ್ತಿದ್ದಾರೆ ಎಂದಿದ್ದಾರೆ.
ಇಷ್ಟು ಹಣಕ್ಕೆ ತೆರಿಗೆ ಕಟ್ಟುವ ಅಗತ್ಯವಿಲ್ಲ
7 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಆದಾಯ ಹೊಂದಿರುವವರಿಗೂ ತೆರಿಗೆ ವಿನಾಯಿತಿ ಸಿಗಲಿದೆ. ಕೇಂದ್ರದ ಮೋದಿ ಸರ್ಕಾರವು ದೇಶದ ಪ್ರತಿಯೊಂದು ವರ್ಗವನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಮಾಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ 7 ಲಕ್ಷದ ವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಿದೆ. ಹೊಸ ತೆರಿಗೆ ಪದ್ದತಿಯಲ್ಲಿ ಈ ವಿನಾಯಿತಿ ಲಭ್ಯವಿದೆ.
ಸರ್ಕಾರದ ಈ ನಿರ್ಧಾರದ ನಂತರ ದೇಶದ ಅನೇಕ ಜನರು ಅದನ್ನು ನಂಬಲಿಲ್ಲ. ಒಬ್ಬ ವ್ಯಕ್ತಿಯ ಆದಾಯ 7 ಲಕ್ಷಕ್ಕಿಂತ ಹೆಚ್ಚಿದ್ದರೆ ತೆರಿಗೆ ಕಟ್ಟಬೇಕೇ ಎಂಬ ಪ್ರಶ್ನೆ ಕೆಲವು ಜನರಲ್ಲಿ ಮೂಡಿತ್ತು. 7 ಲಕ್ಷಕ್ಕಿಂತ ಹೆಚ್ಚು ಆದಾಯವಿದ್ದರೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಉದಾಹರಣೆಗೆ ವಾರ್ಷಿಕವಾಗಿ 7 .27 ಲಕ್ಷ ಗಳಿಸುವ ವ್ಯಕ್ತಿ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.