Income Tax: ಆದಾಯ ತೆರಿಗೆ ಕಟ್ಟುವವರಿಗೆ ಎಚ್ಚರಿಕೆ, ಈ ತಪ್ಪು ಮಾಡಿದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ.
ತೆರಿಗೆ ಉಳಿಸುವ ಸಲುವಾಗಿ ಆದಾಯವನ್ನು ತೋರಿಸದೆ ಇದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಸರ್ಕಾರ.
Income Tax Rules And Punishments: ಇತ್ತೀಚಿಗಂತೂ ಆದಾಯ ತೆರಿಗೆ ನಿಯಮದಲ್ಲಿ ಹೊಸ ಹೊಸ ಬದಲಾವಣೆ ಆಗುತ್ತಿವೆ. ಪ್ರತಿ ತಿಂಗಳ ಆರಂಭದಲ್ಲಿ ಅನೇಕ ಬದಲಾವಣೆಗಳು ಆಗುವುದು ಸಾಮಾನ್ಯವಾಗಿದೆ. ಆದಾಯ ತೆರಿಗೆ ಪಾವತಿ ಮಾಡುವವರು ಹೊಸ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಬೇಕು. ಇದೀಗ ಆದಾಯ ಮುಚ್ಚಿಡುವುದರಿಂದ ಆಗುವ ಪರಿಣಾಮದ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ.
ಆದಾಯ ತೆರಿಗೆ ರಿಟರ್ನ್
ಇನ್ನು ಆದಾಯ ತೆರಿಗೆ ವಿಚಾರದಲ್ಲಿ ತಪ್ಪು ಮಾಡಿದರೆ ದಂಡದ ಜೊತೆ ಜೈಲು ಶಿಕ್ಷೆ ಸಹ ಆಗಲಿದೆ. ತೆರಿಗೆ ಉಳಿಸುವ ಸಲುವಾಗಿ ಆದಾಯವನ್ನು ತೋರಿಸದೆ ಇರುವುದು ಅಥವಾ ತಪ್ಪಾಗಿ ಡಿಡಕ್ಷನ್ ಕ್ಲೈಮ್ ಮಾಡುವುದು ಇತ್ಯಾದಿ ವಂಚನೆ ಎಸಗಿದರೆ ದೊಡ್ಡ ಮೊತ್ತದ ದಂಡ, ಜೈಲು ಶಿಕ್ಷೆ ಇತ್ಯಾದಿ ಕ್ರಮ ಎದುರಿಸಬೇಕಾಗುತ್ತದೆ.
ಐಟಿ ರಿಟರ್ನ್ ಫೈಲ್ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದ್ದರೆ ಜುಲೈ 31 ಕ್ಕೆ ಡೆಡ್ ಲೈನ್ ಇದೆ. ಐ ಟಿ ಆರ್ ನಲ್ಲಿ ನಾವು ನಮ್ಮೆಲ್ಲಾ ಆದಾಯವನ್ನು ಸರಿಯಾಗಿ ತೋರಿಸಬೇಕು ಎಂಬ ನಿಯಮವಿದೆ. ಐಟಿ ರಿಟರ್ನ್ ಸಲ್ಲಿಸುವ ಉದ್ದೇಶವೇ ಅದು. ನಮ್ಮ ಆದಾಯದ ಮೂಲಗಳು ಹಾಗು ಆ ವರ್ಷದ ಪ್ರಮುಖ ಆದಾಯಗಳನ್ನು ತೋರಿಸಬೇಕು. ದೊಡ್ಡ ಆದಾಯವನ್ನು ನೀವು ಮುಚ್ಚಿಡಬಾರದು. ಹೀಗೆ ಮಾಡಿದರೆ ತೊಂದರೆಗೆ ಒಳಗಾಗಬಹುದು.
ಆದಾಯವನ್ನು ಮುಚ್ಚಿಟ್ಟರೆ ಸರ್ಕಾರದಿಂದ ಸಿಗಲಿದೆ ಕಠಿಣ ಶಿಕ್ಷೆ
ಆದಾಯ ತೋರಿಸಿದರೆ ತೆರಿಗೆ ಬೀಳಬಹುದು ಎಂಬ ಕಾರಣಕ್ಕೆ ಹಲವಾರು ತಮ್ಮ ಆದಾಯವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಾರೆ. ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸತ್ತದೆ. ಆದಾಯ ಮುಚ್ಚಿಡುವುದಾಗಲಿ ಅಥವಾ ತಪ್ಪಾಗಿ ಡಿಡಕ್ಷನ್ ಕ್ಲೈಮ್ ಮಾಡುವುದಾಗಲಿ ಕಂಡು ಬಂದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.