Tax Fine: ಇಂತಹ ಜನರು ಕಡ್ಡಾಯವಾಗಿ ಕಟ್ಟಬೇಕು ಆದಾಯ ತೆರಿಗೆ, ಇಲ್ಲವಾದರೆ 200% ದಂಡ.
ಆದಾಯ ತೆರಿಗೆ ಪಾವತಿ ಮಾಡುವವರಿಗೆ ಹೊಸ ತೆರಿಗೆ ನಿಯಮ ಜಾರಿಗೆ ತರಲಾಗಿದೆ.
Income Tax Update: ಹಣಕಾಸು ಸಚಿವಾಲಯ ದೇಶದಲ್ಲಿ ಸಾಕಷ್ಟು ರೀತಿಯ Tax ನಿಯಮವನ್ನು ಜಾರಿಗೊಳಿಸಿದೆ. ತೆರಿಗೆ ಪಾವತಿದಾರರು ಇಲಾಖೆಯ ನಿಯಮಾನುಸಾರ ತೆರಿಗೆ ಪಾವತಿ ಮಾಡಬೇಕಿದೆ. ಇನ್ನು 2022 -23 ರ ITR ಸಲ್ಲಿಕೆಯ ಕೊನೆಯ ದಿನಾಂಕ ಮುಗಿದಿದ್ದು ಇನ್ನು ಕೂಡ ITR ಬಾಕಿ ಇದ್ದವರಿಗೆ ಇಲಾಖೆ ಹೆಚ್ಚಿನ ದಂಡವನ್ನು ವಿದಿಸುತ್ತಿದೆ.
ಇನ್ನು Income Tax Department ಈಗಾಗಲೇ ಆಧಾಯ ತೆರಿಗೆ ಪಾವತಿಯಲ್ಲಿ ತಪ್ಪು ಮಾಡಿದವರಿಗೆ ನೋಟಿಸ್ ಕೂಡ ನೀಡಿದೆ. ಇನ್ನು ಇತ್ತೀಚೆಗಷ್ಟೇ Finance Minister Nirmala Sitharaman ಅವರು ತೆರಿಗೆ ಪಾವತಿದಾರರಿಗೆ ಹೊಸ ಹೊಸ ನಿಯಮವನ್ನು ಪರಿಚಯಿಸಿದ್ದಾರೆ.
ತೆರಿಗೆ ಪಾವತಿದಾರರ ಗಮನಕ್ಕೆ
ಇನ್ನು ತೆರಿಗೆ ಪಾವತಿದಾರರು ತೆರಿಗೆ ಪಾವತಿಯ ಸಮಯದಲ್ಲಿ ತಮ್ಮ ಎಲ್ಲ ಮೂಲದ ಆದಾಯದ ವಿವರವನ್ನು ನೀಡಾಬೇಕಾಗುತ್ತದೆ. ಯಾವುದೇ ಮಾಹಿತಿಯ್ನನು ನೀಡದೆ ಇದ್ದರು ಆದಾಯ ಇಲಾಖೆ ಅದನ್ನು ಕಂಡುಹಿಡುತ್ತದೆ. ತೆರಿಗೆ ಪಾವತಿಯ ಸಮಯದಲ್ಲಿ ತಪ್ಪು ಮಾಹಿತಿ ನೀಡಿದರೆ ಅಂತವರ ವಿರುದ್ಧ ಆದಾಯ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ. ಸದ್ಯ ಇಂತಹ ತೆರಿಗೆ ಪಾವತಿಯಲ್ಲಿ ತಪ್ಪಾದರೆ ಆದಾಯ ಇಲಾಖೆ ನೋಟೀಸ್ ಕಳುಹಿಸಿ ಹೆಚ್ಚಿನ ದಂಡವನ್ನು ವಿದಿಸಿದೆ.
ಮನೆ ಬಾಡಿಗೆ ತೆರಿಗೆ ನಿಯಮ
ಆದಾಯ ತೆರಿಗೆ ಇಲಾಖೆಯಿಂದ ಐಟಿ ಕಾಯಿದೆಯ ಸೆಕ್ಷನ್ 10 (13ಎ) ಅಡಿಯಲ್ಲಿ ಸಂಬಳದ ವರ್ಗದ ಜನರು ಮನೆ ಬಾಡಿಗೆಗೆ ತೆರಿಗೆ ಪ್ರಯೋಜನವನ್ನು ಪಡೆಯುತ್ತಾರೆ. ಈ ಕಾನೂನಿನ ಪ್ರಕಾರ, ಮನೆಯ ಬಾಡಿಗೆ ವರ್ಷಕ್ಕೆ 1 ಲಕ್ಷ ರೂ. ಗಿಂತ ಹೆಚ್ಚಿದ್ದರೆ, ನೀವು ಮಾಲೀಕರ ಪ್ಯಾನ್ ಕಾರ್ಡ್ ಅನ್ನು ಒದಗಿಸಬೇಕು.
ಬಾಡಿಗೆ 1 ಲಕ್ಷಕ್ಕಿಂತ ಕಡಿಮೆಯಿದ್ದರೆ ಪ್ಯಾನ್ ಮಾಹಿತಿ ನೀಡುವ ಅಗತ್ಯ ಇರುವುದಿಲ್ಲ. ಹೀಗಾಗಿ ಕೆಲವರು 1 ಲಕ್ಷಕ್ಕಿಂತ ಕಡಿಮೆ ಬಾಡಿಗೆಯನ್ನು ತೋರಿಸಿ ನಕಲಿ ಮನೆ ಬಾಡಿಗೆ ರಶೀದಿಯನ್ನು ತಯಾರಿಸುತ್ತಾರೆ. ಇಂತಹ ವಂಚನೆಯನ್ನು ತಪ್ಪಿಸಲು ಆದಾಯ ಇಲಾಖೆ ಕಂಪ್ಯೂಟರ್ ಡೇಟಾ ಪರಿಶೀಲನೆಯನ್ನು ನಡೆಸುತ್ತದೆ. ಈ ವೇಳೆ ಸಿಕ್ಕಿಬಿದ್ದವರಿಗೆ ಇಲಾಖೆ ಹೆಚ್ಚಿನ ದಂಡವನ್ನು ವಿಧಿಸುತ್ತದೆ.
ಇಂತಹ ತಪ್ಪು ಮಾಡಿದರೆ ಕಟ್ಟಬೇಕು ಹೆಚ್ಚಿನ ದಂಡ
ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಉದ್ಯೋಗಿ ಸಂಸ್ಥೆಗೆ ನಕಲಿ ಮರುಪಾವತಿ ಬಿಲ್ಗಳನ್ನು ಸಲ್ಲಿಸಿದರೆ, ಅದು ಆದಾಯವನ್ನು ಮರೆಮಾಚುತ್ತದೆ. ಈ ಸಂದರ್ಭದಲ್ಲಿ ಮೌಲ್ಯಮಾಪನ ಅಧಿಕಾರಿ (ಆದಾಯ ತೆರಿಗೆ ಅಧಿಕಾರಿ) ತನಿಖೆಯನ್ನು ಪ್ರಾರಂಭಿಸಬಹುದು. ಇದರ ನಂತರ ತೆರಿಗೆದಾರರು ಬಿಲ್ಗಳ ಅಸಲಿ ಪುರಾವೆಗಳನ್ನು ಒದಗಿಸಬೇಕು.
ಬಿಲ್ಗಳು ನಕಲಿ ಎಂದು ಕಂಡುಬಂದರೆ ದಂಡ ವಿಧಿಸಲಾಗುತ್ತದೆ. ಆದಾಯವು ಕಡಿಮೆ ವರದಿಯಾಗಿದ್ದರೆ, ಅದು ಸೆಕ್ಷನ್ 270A (1) ಅಡಿಯಲ್ಲಿ 50 ಪ್ರತಿಶತದ ವರೆಗೆ ಇರಬಹುದು. ಒಬ್ಬ ವ್ಯಕ್ತಿ ಗೊತ್ತಿದ್ದೂ ನಕಲಿ ಬಿಲ್ ಗಳನ್ನು ಸಲ್ಲಿಸಿ ತನ್ನ ಆದಾಯದ ಬಗ್ಗೆ ತಪ್ಪು ಮಾಹಿತಿ ನೀಡಿದರೆ 200 ರೂ. ವರೆಗೆ ದಂಡ ತೆರಬೇಕಾಗುತ್ತದೆ.