FD Withdrawal : FD ಹೂಡಿಕೆ ಮಾಡುವವರಿಗೆ RBI ನಿಂದ ಹೊಸ ಆದೇಶ, ನಿಯಮ ಬದಲಿಸಿದ RBI.
FD ಖಾತೆ ಇದ್ದವರಿಗೆ RBI ನ ಹೊಸ ನಿಯಮ.
Increase In FD withdrawals: ಜನರು ತಮ್ಮ ಉಳಿತಾಯದ ಹಣವನ್ನು FD ಯಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಜನರಿಗೆ FD ಆಯ್ಕೆಯನ್ನು ನೀಡುತ್ತದೆ. FD ಯಲ್ಲಿನ ಹೂಡಿಕೆಯು ಅಪಾಯಮುಕ್ತವಾಗಿದ್ದು, ಜನರು ಹೆಚ್ಚಿನ ಲಾಭವನ್ನು ಗಳಿಸಬಹುದು.
ಸದ್ಯ ಬ್ಯಾಂಕ್ ನಲ್ಲಿ FD ಇಟ್ಟವರಿಗೆ RBI ಹೊಸ ನಿಯಮವನ್ನು ಪರಿಚಯಿಸಿದೆ. RBI ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು ಬ್ಯಾಂಕ್ ನಲ್ಲಿ FD ಖಾತೆ ಹೊಂದಿರುವವರು ಈ ನಿಯಮವನ್ನು ತಿಳಿಯುವುದು ಅಗತ್ಯ. ಸದ್ಯ FD ಖಾತೆ ಇದ್ದವರಿಗೆ RBI ಹೊರಡಿಸಿರುವ ಹೊಸ ನಿಯಮ ಯಾವುದು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
FD ಹೂಡಿಕೆ ಮಾಡುವವರಿಗೆ RBI ನಿಂದ ಹೊಸ ಆದೇಶ
ಸದ್ಯ 1 ಕೋಟಿಗಿಂತ ಹೆಚ್ಚಿನ ಮೊತ್ತದ ಎಫ್ ಡಿಗಳನ್ನು ಅಕಾಲಿಕವಾಗಿ ಹಿಂಪಡೆಯಲು ವ್ಯವಸ್ಥೆ ಮಾಡಲು RBI ಆದೇಶ ನೀಡಿದೆ. RBI ಗುರುವಾರ ಬ್ಯಾಂಕ್ ಗಳಿಗೆ ಸೂಚನೆಗಳನ್ನು ನೀಡಿದ್ದು, 1 ಕೋಟಿ ರೂ. ವರೆಗಿನ ಎಲ್ಲಾ ಎಫ್ ಡಿ ಗಳಲ್ಲಿ ಅಕಾಲಿಕ ಹಿಂಪಡೆಯುವ ಸೌಲಭ್ಯವನ್ನು ಒದಗಿಸಬೇಕು ಎಂದು ಆದೇಶಿಸಿದೆ. ಪ್ರಸ್ತುತ ಈ ಮಿತಿ 15 ಲಕ್ಷ ರೂ. ಆಗಿತ್ತು. ಸದ್ಯ RBI ಈ ಮಿತಿಯನ್ನು ಹೆಚ್ಚಿಸಿದೆ.
FD ಹಣ ಹಿಂಪಡೆಯುವ ಮಿತಿ ಹೆಚ್ಚಿಸಿದ RBI
ಹಿಂತೆಗೆದುಕೊಳ್ಳಲಾಗದ ಎಫ್ ಡಿ ಯನ್ನು 15 ಲಕ್ಷದಿಂದ 1 ಕೋಟಿಗೆ ಹೆಚ್ಚಿಸಲು RBI ನಿರ್ಧರಿಸಿದೆ. ಪ್ರೀ ಮೆಚ್ಯೂರಿಟಿ ಹಿಂಪಡೆಯುವಿಕೆಯ ಮಿತಿಯನ್ನು ಹೆಚ್ಚಿಸುವ ಸೂಚನೆಗಳ ಜೊತೆಗೆ, RBI ಬ್ಯಾಂಕ್ ಗಳಿಗೆ ಅನುಗುಣವಾಗಿ ಬಡ್ಡಿದರಗಳನ್ನು ಸಹ ಬದಲಾಯಿಸಬಹುದು ಎಂದು ತಿಳಿಸಿದೆ. ಈ ಸೂಚನೆಗಳು ಎಲ್ಲಾ ವಾಣಿಜ್ಯ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಇಂದಿನಿಂದಲೇ ಜಾರಿಗೆ ಬಂದಿವೆ. ಇದಲ್ಲದೆ, RBI ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ (RRB) ಬೃಹತ್ ಠೇವಣಿ ಮಿತಿಯನ್ನು RBI 15 ಲಕ್ಷದಿಂದ 1 ಕೋಟಿ ರೂ. ಗೆ ಹೆಚ್ಚಿಸಿದೆ.