Bank Loans: ಈ ಬ್ಯಾಂಕ್ ಗಳಲ್ಲಿ ಸಾಲ ಇದ್ದವರಿಗೆ ಹೊಸ ಸೂಚನೆ
ಈ ಮೂರು ಬ್ಯಾಂಕ್ ಗಳಲ್ಲಿ ಸಾಲ ಪಡೆದವರು ಇನ್ನುಮುಂದೆ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ.
Bank MCLR Rate: ಪ್ರಸ್ತುತ ದೇಶದಲ್ಲಿ ಅನೇಕ ನಿಯಮಗಳು ಬದಲಾಗುತ್ತಿದೆ. ಇನ್ನು ಹೊಸ ಹಣಕಾಸು ವರ್ಷ ಆರಂಭದಿಂದ ಹಣಕಾಸಿನ ನಿಯಮ ಅಂದರೆ ಬ್ಯಾಂಕ್ ನ ನಿಯಮದಲ್ಲಿ ಬಾರಿ ಬದಲಾವಣೆ ತರಲಾಗುತ್ತಿದೆ. ಆರ್ ಬಿಐ (RBI) ಬ್ಯಾಂಕ್ ಲಾಕರ್(Bank Locker) ಒಪ್ಪಂದದಿಂದ ಹಿಡಿದು ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡುವ ಹಣದ ಮಿತಿಯವರೆಗೂ ನಿಯಮವನ್ನು ಬದಲಿಸಿದೆ.
ಇನ್ನು ಇತ್ತೀಚಿಗೆ ಆರ್ ಬಿಐ ನಿಯಮ ಉಲ್ಲಂಘಿಸುತ್ತಿರುವ ಕೆಲವು ಬ್ಯಾಂಕ್ ಗಳ ಪರವಾನಗಿಯನ್ನು ಕೂಡ ರದ್ದುಪಡಿಸಿದೆ. ಅದರಲ್ಲಿ ಕರ್ನಾಟಕದ ಎರಡು ಸಹಕಾರಿ ಬ್ಯಾಂಕ್ ಗಳು ಸೇರಿಕೊಂಡಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಗಳು ಆರ್ ಬಿಐ ಎಲ್ಲಾ ನಿಯಮವನ್ನು ಪಾಲಿಸಬೇಕಿದೆ. ನಿಯಮ ಉಲ್ಲಂಘನೆ ಮಾಡುವ ಬ್ಯಾಂಕ್ ಗಳ ವಿರುದ್ಧ ಆರ್ ಬಿಐ ಕಠಿಣ ಕ್ರಮ ಕೈಗೊಳ್ಳಲಿದೆ.
ಬ್ಯಾಂಕ್ ಗಳ ಬಡ್ಡಿದರ ಹೆಚ್ಚಳ
ಇತ್ತೀಚಿಗೆ ಆರ್ ಬಿಐ ತನ್ನ ರೆಪೋ ದರವನ್ನು ಹೆಚ್ಚಿಸಿತ್ತು. ಆರ್ ಬಿಐ ರೆಪೋ ದರದ ಹೆಚ್ಚಳವು ಇನ್ನಿತರ ಬ್ಯಾಂಕ್ ಗಳ ಬಡ್ಡಿದರದ ಹೆಚ್ಚಳದ ಮೇಲೆ ಪರಿಣಾಮ ಬಿಳುತ್ತದೆ. ಈಗಾಗಲೇ ಅನೇಕ ಸರಕಾರಿ ಬ್ಯಾಂಕ್ ಗಳು ಸೇರಿದಂತೆ ಖಾಸಗಿ ಬ್ಯಾಂಕ್ ಗಳು ಕೂಡ ಬಡ್ಡಿದರವನ್ನು ಹೆಚ್ಚಿಸಿದೆ.
ಬ್ಯಾಂಕ್ ನ ಬಡ್ಡಿದರದ ಹೆಚ್ಚಳವು ಸಾಲ ಪಡೆದವರಿಗೆ ನಕಾರಾತ್ಮಕ ಪರಿಣಾಮವನ್ನು ಬೀರಲಿದೆ. ಇತ್ತೀಚಿಗೆ ಈ ಬ್ಯಾಂಕ್ ಗಳು ತನ್ನ ಎಂಸಿಎಲ್ ಆರ್ ದರವನ್ನು ಹೆಚ್ಚಿಸಿದೆ. ಈಎಂಸಿಎಲ್ ಆರ್ ದರದ ಹೆಚ್ಚಳವು EMI ಪಾವತಿಯ ಹೊರೆಯನ್ನು ಹೆಚ್ಚಿಸಿದೆ. ನೀವು ಈ ಮೂರು ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದರೆ ಇನ್ನುಮುಂದೆ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ.
ಈ ಬ್ಯಾಂಕುಗಳ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ಸ್ (MCLR) ದರ ಹೆಚ್ಚಳ
*ICICI ಬ್ಯಾಂಕ್ MCLR ರೇಟ್ (ICICI Bank)
ಐಸಿಐಸಿಐ ಬ್ಯಾಂಕ್ ತನ್ನ ಎಂಸಿಎಲ್ ಆರ್ ದರವನ್ನು 5 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದೆ. ಒಂದು ತಿಂಗಳ ಎಂಸಿಎಲ್ ಆರ್ ದರವನ್ನು ಶೇ. 8.35 ರಿಂದ ಶೇ. 8.40 ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೆ ಕ್ರಮವಾಗಿ 3 ಮತ್ತು ಆರು ತಿಂಗಳ ಅವಧಿಗೆ ಶೇ. 8.41 ಮತ್ತು ಶೇ. 8.80 ಹೆಚ್ಚಿಸಲಾಗಿದೆ.
*ಪಂಜಾಬ್ ನ್ಯಾಷನಲ್ ಬ್ಯಾಂಕ್ MCLR ರೇಟ್ (Punjab National Bank)
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಎಂಸಿಎಲ್ ಆರ್ ದರವನ್ನು ಉಳಿಸಿಕೊಂಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ರಾತ್ರಿಯ ಎಂಸಿಎಲ್ ಆರ್ ದರ ಶೇ. 8.10 ರಷ್ಟಿದೆ. ಹಾಗೆಯೆ ಕ್ರಮವಾಗಿ 1, 3 ಮತ್ತು ಆರು ತಿಂಗಳ ಅವಧಿಗೆ ಶೇ. 8.20 , 8.30 ಮತ್ತು ಶೇ. 8.50 ರಷ್ಟಿದೆ.
*ಬ್ಯಾಂಕ್ ಆಫ್ ಇಂಡಿಯಾ (Bank Of India)
ಬ್ಯಾಂಕ್ ಆಫ್ ಇಂಡಿಯಾಕ್ ತನ್ನ ಎಂಸಿಎಲ್ ಆರ್ ದರವನ್ನು ಜಾರಿಗೊಳಿಸಿದೆ. ಬ್ಯಾಂಕ್ ಆಫ್ ಇಂಡಿಯಾ ರಾತ್ರಿಯ ಎಂಸಿಎಲ್ ಆರ್ ದರ ಶೇ. 7.95 ರಷ್ಟಿದೆ. ಹಾಗೆಯೆ ಕ್ರಮವಾಗಿ 1, 3 ಮತ್ತು ಆರು ತಿಂಗಳ ಅವಧಿಗೆ ಶೇ. 8.15, 8.30 ಮತ್ತು ಶೇ. 8.50 ರಷ್ಟಿದೆ.