RBI Repo Rate Hikes Will Impact Your Loan EMI: ಆರ್ ಬಿ ಐ ರೆಪೋ ದರದಲ್ಲಿ ಹೆಚ್ಚಳ, ಸಾಲದ ಇಎಂಐ ಪಾವತಿಸಲು ಗ್ರಾಹಕರ ಪರದಾಟ!

RBI Repo Rate Hikes Will Impact Your Loan EMI:ಭಾರತೀಯ ರಿಸರ್ವ್ ಬ್ಯಾಂಕ್(Reserve Bank) ಶಾಕಿಂಗ್ ನ್ಯೂಸ್ ಒಂದನ್ನು ಕೊಟ್ಟಿದೆ. ಆರ್ ಬಿ ಐ ತನ್ನ ರೆಪೋ ದರದಲ್ಲಿ ಹೆಚ್ಚಳ ಮಾಡಿದೆ. 0.35% ರೆಪೋ ದರದಲ್ಲಿ ಹೆಚ್ಚಳವಾಗಿದ್ದು, 6.25 ರೆಪೋ ದರ ಹೆಚ್ಚಳ ಆದಂತಾಗಿದೆ. ಆರ್ ಬಿ ಐ ಈಗ ನಾಲ್ಕನೇ ಬಾರಿ ರೆಪೋ ದರವನ್ನು ಏರಿಸಿದೆ.

ಆರ್ ಬಿ ಐ ರೆಪೋ ದರ ಏರಿಸಿದ ಹಿನ್ನೆಲೆಯಲ್ಲಿ ಸಾಲಗಾರರ ಇಎಂಐ ಹೆಚ್ಚು ತುಂಬಬೇಕಾಗುತ್ತದೆ ಅಂದರೆ ಬಡ್ಡಿ ದರದಲ್ಲಿಯೂ ಕೂಡ ಹೆಚ್ಚಳ ಆಗಲಿದೆ. ಇದು ಗ್ರಾಹಕರಿಗೆ ಹೊರೆ ಆಗಲಿದೆ. ಗ್ರಾಹಕರು ಸಾಲದ ಇಎಮ್ಐ ಬಡ್ಡಿ ದರ ಹೆಚ್ಚಳದಿಂದ ತತ್ತರಿಸುವಂತಾಗಿದೆ.

Increase in RBI repo rate consumer rush to pay loan EMI
Image Source: India Today

ರೆಪೋ ದರ ಹೆಚ್ಚಳ ಆದಂತೆ ರೆಪೋ ದರದ ಮೇಲೆ ಆಧಾರಿತವಾಗಿರುವ ಇಎಂಐ ಸಾಲಗಳ ಬಡ್ಡಿದರ ಶೇಕಡ 23 ರಷ್ಟು ಏರಿಕೆ ಆಗುತ್ತದೆ. ಉದಾಹರಣೆಗೆ ನೀವು ಕಳೆದ ಮಾರ್ಚ್ ನಲ್ಲಿ 20 ವರ್ಷಗಳ ಅವಧಿಗೆ 30 ಲಕ್ಷ ಸಾಲ ತೆಗೆದು ಕೊಂಡಿದ್ದೀರಿ ಎಂದುಕೊಳ್ಳಿ. ಕಳೆದ ವರ್ಷ ಇದ್ದ 7% ಬಡ್ಡಿ, 2023ರ ಹೊತ್ತಿಗೆ 9.25% ಆಗಲಿದೆ. ಅಂದರೆ ನೀವು ತಿಂಗಳಿಗೆ 23,258 ರೂಪಾಯಿ ಇ ಎಂ ಐ ಭರಿಸುತ್ತಿದ್ದರೆ, ಇನ್ನು ಮುಂದೆ 27,387 ರೂಪಾಯಿ ಈ ಎಂ ಐ ಪಾವತಿಸಬೇಕಾಗುತ್ತದೆ.

ಸಾಲದ ಅವಧಿ 30ವರ್ಷ ಹಾಗಿದ್ದರೆ ಅಲ್ಲಿಗೆ ನೀವು ಬರಿಸುವ ಈ ಎಂ ಐ 23%ರಷ್ಟು ಹೆಚ್ಚಳ ಆಗಿರುತ್ತದೆ.ಇನ್ನು ಆರ್ ಬಿ ಐ ಹಣದುಬ್ಬರದ ಪ್ರಮಾಣ ಏರಿಕೆಯಾಗಲಿರುವ ವಿಷಯವನ್ನು ತಿಳಿಸಿದ್ದು ಮುಂದಿನ ಹನ್ನೆರಡು ತಿಂಗಳಲ್ಲಿ ಶೇಕಡ ನಾಲ್ಕರಷ್ಟು ಆಗಬಹುದು ಎಂದಿದೆ. ಹಣದುಬ್ಬರವನ್ನು ನಿಯಂತ್ರಿಸಲು ಆರ್ ಬಿ ಐ ರೆಪೋ ಹೆಚ್ಚಳದ ನಿರ್ಧಾರ ತೆಗೆದುಕೊಂಡಿದೆ ಆದರೆ ಇದರಿಂದ ಗ್ರಾಹಕರ ಸಾಲದ ದರ ಕೂಡ ಹೆಚ್ಚಾಗಿದ್ದು ಗ್ರಾಹಕರು ತಲೆ ಕೆಡಿಸಿಕೊಳ್ಳುವಂತಾಗಿದೆ.

Increase in RBI repo rate consumer rush to pay loan EMI
Image Source: India Today

ಆರ್ ಬಿ ಐ ಹಣಕಾಸು ನೀತಿ ಸಮಿತಿಯ ಈ ನಿರ್ಧಾರವನ್ನು ಆರ್ ಬಿ ಐ ಗವರ್ನರ್ ಶಕ್ತಿ ಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಬಡ್ಡಿದರ 0.50 % ಹೆಚ್ಚಳವಾಗಿತ್ತು ಹಾಗಾಗಿ ಈ ಬಾರಿ 0.25 ರಿಂದ 0.30% ಹೆಚ್ಚಳ ಆಗುವ ನಿರೀಕ್ಷೆ ಇತ್ತು.

Join Nadunudi News WhatsApp Group

ಈಗ ಒಟ್ಟಾರೆ ರೆಪೋ ದರ ಶೇಕಡ 5.90 ಇದೆ. 0.30% ಏರಿಕೆ ಮಾಡಿದರೆ ರೆಪೋ ದರ 6.20% ಆಗಲಿದೆ. ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಈಗಾಗಲೇ ಮೂರು ಬಾರಿ ರೆಪೋ ದರವನ್ನು ಏರಿಸಲಾಗಿದೆ.

Increase in RBI repo rate consumer rush to pay loan EMI
Image Source: India Today

ರೆಪೋ ದರ ಎಂದರೆ ಏನು?
ಬ್ಯಾಂಕ್ ಗಳು ಆರ್‌ಬಿಐನಿಂದ ಪಡೆಯುವ ಹಣಕ್ಕೆ ಕೊಡುವ ಬಡ್ಡಿ ದರವನ್ನು ರೇಪೋ ದರ ಎಂದು ಕರೆಯಲಾಗುತ್ತದೆ. ಬ್ಯಾಂಕುಗಳು ಸಾಲ ವಹಿವಾಟು ಮಾಡಲು ಈ ಹಣವನ್ನು ಬಳಸುತ್ತಾರೆ.

ಇನ್ನು ಆರ್‌ಬಿಐ ರೆಪೋ ದರ ಹೆಚ್ಚಳ ಮಾಡಿದ್ದರಿಂದ ಹಣಕಾಸಿನ ಅಭಿವೃದ್ಧಿಯಲ್ಲಿ ಯಾವುದೇ ರೀತಿಯ ತೊಂದರೆಯೂ ಆಗಿರಲಿಲ್ಲ ಹಾಗಾಗಿ ನಾಲ್ಕನೇ ಬಾರಿ ರೆಪೋ ದರ ಏರಿಕೆಯನ್ನು ನಿರೀಕ್ಷೆ ಮಾಡಲಾಗಿತ್ತು. ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಜೆಡಿಪಿ ಮೌಲ್ಯ 75.02 ಲಕ್ಷ ಕೋಟಿ ರೂಪಾಯಿ ಇತ್ತು. ಅದೇ ಕಳೆದ ವರ್ಷ ಇದೇ ಸಮಯಕ್ಕೆ 68. 36 ಲಕ್ಷ ಕೋಟಿ ರೂ. ಇತ್ತು ಎಂದು ವರದಿಯಾಗಿದೆ.

Increase in RBI repo rate, consumer rush to pay loan EMI
Image Source: India Today

 

Join Nadunudi News WhatsApp Group