Free Mobile: ಆಗಸ್ಟ್ ನಲ್ಲಿ ಜನಿಸಿದವರಿಗೆ ಸಿಗಲಿದೆ ಉಚಿತ ಸ್ಮಾರ್ಟ್ ಫೋನ್, ಸ್ವಾತಂತ್ರ್ಯ ದಿನದ ಆಫರ್ ಘೋಷಣೆ.
ಸ್ವಾತಂತ್ರ್ಯ ದಿನದ ಸಲುವಾಗಿ ಟಚ್ ಮೊಬೈಲ್ ಕಂಪನಿ ಆಗಸ್ಟ್ ನಲ್ಲಿ ಜನಿಸಿದವರಿಗೆ ಉಚಿತ ಸ್ಮಾರ್ಟ್ ಫೋನ್ ನೀಡಲು ನಿರ್ಧರಿಸಿದೆ.
Independence Day Free Mobile Offer: ಆಗಸ್ಟ್ 15 ರಂದು ದೇಶದಾದ್ಯಂತ 77 ನೇ ಸ್ವಾತಂತ್ರ್ಯೋತ್ಸವವನ್ನು (Independence Day) ಆಚರಿಸಲಾಗಿದೆ. ಸ್ವಾತಂತ್ರ್ಯೋತ್ಸವ ಸಲುವಾಗಿ ಜನರಿಗಾಗಿ ವಿವಿಧ ಕಂಪನಿಗಳು ಆಕರ್ಷಕ ಕೊಡುಗೆಯನ್ನು ನೀಡಿದ್ದವು. ದೇಶದ ಜನಪ್ರಿಯ ಇ- ಕಾಮರ್ಸ್ ಪ್ಲಾಟ್ ಫಾರ್ಮ್ ಗಳು ಇಂಡಿಪೆಂಡೆನ್ಸ್ ಡೇ ಸೇಲ್ ನಲ್ಲಿ ಭರ್ಜರಿ ಆಫರ್ ಕೂಡ ನೀಡಿದ್ದವರು.
ಜನರು ಎಲ್ಲ ರೀತಿಯ ಆಫರ್ ಅನ್ನು ಬಳಸಿಕೊಂಡು ಅತಿ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಿದ್ದರು. ಇದೀಗ ಇಂಡಿಪೆಂಡೆನ್ಸ್ ಡೇ ವಿಶೇಷ ಆಫರ್ ಬಗ್ಗೆ ಮಾಹಿತಿ ಲಭಿಸಿದೆ. ನೀವು ಈ ಆಫರ್ ಗೆ ಅರ್ಹರಾಗಿದ್ದೀರಾ ಎಂದು ತಿಳಿದು ಆಫರ್ ನ ಲಾಭ ಪಡೆದುಕೊಳ್ಳಿ.
ಇಂಡಿಪೆಂಡೆನ್ಸ್ ಡೇ ವಿಶೇಷ ಆಫರ್
ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯಾ ಮೇಲೆ ಡಿಸ್ಕೌಂಟ್ ಆಫರ್ ನೀಡುವುದು ಸಾಮಾನ್ಯ ವಿಷಯ. ಆದರೆ ಇದೀಗ ಇಲ್ಲೊಂದು ಕಂಪನಿ ಇಂಡಿಪೆಂಡೆನ್ಸ್ ಡೇ ಗೆ ವಿಶೇಷವಾಗಿ ಸ್ಮಾರ್ಟ್ ಫೋನ್ ಅನ್ನೇ ಉಚಿತವಾಗಿ ನೀಡಲಿದೆ. ಪ್ರತಿಷ್ಠಿತ ಮೊಬೈಲ್ ತಯಾರಕ ಕಂಪನಿಯಾಗಿರುವ ಟಚ್ ಮೊಬೈಲ್ಸ್ (Touch Mobiles) ಇದೀಗ ಭರ್ಜರಿ ಇಂಡಿಪೆಂಡೆನ್ಸ್ ಡೇ ಆಫರ್ ಘೋಷಿಸಿದೆ. ಈ ತಿಂಗಳಿನಲ್ಲಿ ಜನಸಿದವರಿಗೆ ಉಚಿತ ಫೋನ್ ನೀಡುವುದಾಗಿ ಅಧಿಕೃತ ಘೋಷಣೆ ಹೊರಡಿಸಿದೆ.
ಆಗಸ್ಟ್ ನಲ್ಲಿ ಜನಿಸಿದವರಿಗೆ ಸಿಗಲಿದೆ ಉಚಿತ ಸ್ಮಾರ್ಟ್ ಫೋನ್
ಸ್ವಾತಂತ್ರ್ಯ ದಿನದ ಸಲುವಾಗಿ ಟಚ್ ಮೊಬೈಲ್ಸ್ ಉಚಿತ ಫೋನ್ ಕೊಡುಗೆ ನೀಡಲು ನಿರ್ಧರಿಸಿದೆ. ಆಗಸ್ಟ್ ನಲ್ಲಿ ಜನಿಸಿದವರು ಈ ಉಚಿತ ಮೊಬೈಲ್ ಅನ್ನು ಪಡೆಯಬಹದು. ಆದರೆ 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಹೀಗಾಗಿ 1947 ರ ಆಗಸ್ಟ್ ನಲ್ಲಿ ಜನಿಸಿದವರು ಉಚಿತ ಫೋನ್ ನೀಡುವುದಾಗಿ ಟಚ್ ಮೊಬೈಲ್ ಕಂಪನಿ ಘೋಷಿಸಿದೆ.
1947 ರ ಆಗಸ್ಟ್ ನಲ್ಲಿ ಜನಿಸಿದವರಿಗೆ ಭರ್ಜರಿ ಆಫರ್
1947 ರ ಆಗಸ್ಟ್ ನಲ್ಲಿ ಜನಿಸಿದವರು ಉಚಿತ ಫೋನ್ ಕರೆಯನ್ನು ಪಡೆಯುತ್ತಿದ್ದು, ಎಲ್ಲಾ ಜನಪ್ರಿಯ ಬ್ರ್ಯಾಂಡ್ ಫೋನ್ ಗಳಲ್ಲಿ ಶೇ. 50 ರಷ್ಟು ರಿಯಾಯಿತಿಯನ್ನು ಪಡೆಯಲಿದ್ದಾರೆ. ಆಗಸ್ಟ್ 15 ರಂದು ಟಚ್ ಮೊಬೈಲ್ ಶೋ ರೂಮ್ ಗೆ ಭೇಟಿ ನೀಡಿ ಆಧಾರ್ ಕಾರ್ಡ್ ಅನ್ನು ತೋರಿಸಿ ಹೊಸ ಸ್ಮಾರ್ಟ್ ಫೋನ್ ಅನ್ನು ಯಾವುದೇ ಶುಲ್ಕವಿಲ್ಲದೆ ಪಡೆಯಬಹುದಾಗಿದೆ.
ಕಂಪನಿಯು ಈ ಆಫರ್ ಅವರನ್ನು ಸೀಮಿತ ಅವಧಿಗೆ ಮೀಸಲಿಟ್ಟಿದೆ. ಆಗಸ್ಟ್ 1947 ರಲ್ಲಿ ಜನಿಸಿದವರು ಬೇಗನೆ 77 ನೇ ಸ್ವಾತಂತ್ರ್ಯೋತ್ಸವದ ಕೊಡುಗೆಯನ್ನು ಬಳಸಿಕೊಳ್ಳಬಹುದು. ನಿಜವಾಗಿ ಹೇಳಬೇಕು ಅಂದರೆ ಯುವ ಜನತೆಗೆ ಈ ಆಫರ್ ಲಭ್ಯವಿಲ್ಲ ಎಂದು ಹೇಳಿದರೆ ತಪ್ಪಗಳ. 76 ವರ್ಷ ದಾಟಿದ ಜನರು ಈ ಯೋಜನೆಯ ಲಾಭ ಅರ್ಹರಾಗಿರುತ್ತಾರೆ.