India and New Zealand: ಸೆಮಿ ಫೈನಲ್ ನಲ್ಲಿ ಈ ತಂಡವೇ ವಿನ್ ಆಗಲಿದೆ, ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ.
ಸೆಮಿ ಫೈನಲ್ ನಲ್ಲಿ ಯಾವ ತಂಡ ಗೆಲ್ಲಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಸಮಿತ್ ಬಜಾಜ್ ಅವರು ಭವಿಷ್ಯ ನುಡಿದಿದ್ದಾರೆ.
World Cup 2023 Semifinal India And New Zealand: ಭಾರತದಲ್ಲಿ ನಡೆಯುತ್ತಿರುವ World Cup 2023 ರ ಬಗ್ಗೆ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಪಂದ್ಯಗಳು ಮುಗಿದಿದ್ದು, 2023 ರ ವರ್ಲ್ಡ್ ಕಪ್ ಯಾವ ತಂದ ತನ್ನ ಮುಡಿಗೇರಿಸಿಕೊಳ್ಳುತ್ತದೆ ಎನ್ನುವುದೇ ಎಲ್ಲರ ಕುತೂಹಲವಾಗಿದೆ. ಸದ್ಯ ಇಡೀ ದೇಶದ ಜನರು Team India ಗೆಲುವಿಗಾಗಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
2023 ರ ವರ್ಲ್ಡ್ ಕಪ್ ಪಂದ್ಯದಲ್ಲಿ ಈವರೆಗೂ ಯಾವುದೇ ಪಂದ್ಯದಲ್ಲೂ ಸೋಲದೆ ಭಾರತ ತಂದ ಮುನ್ನುಗ್ಗುತ್ತಿದೆ, ಹೀಗಾಗಿ ಭಾರತೀಯರಿಗೆ ಈ ಬಾರಿ ಇಂಡಿಯಾ ಕಪ್ ಹೊಡೆಯುವುದರ ಬಗ್ಗೆ ನಿರೀಕ್ಷೆ ಹೆಚ್ಚಿದೆ. World cup ನಲ್ಲಿ ಟೀಮ್ ಇಂಡಿಯಾ ಅತ್ಯತ್ತಮ ಪ್ರದರ್ಶನ ನೀಡಿ ಇದೀಗ Semifinal ನಟ್ಟ ಮುಖಮಾಡಿದೆ.
November 15 ರಂದು ಮುಂಬೈ ನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ನ ತಂಡವನ್ನು ಭಾರತ ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತದ ಗೆಲುವಿಗಾಗಿ ಇಡೀ ದೇಶವೇ ಕಾಯುತ್ತಿದೆ. ಇನ್ನು ಮುಂದೆ ನಡೆಯಲಿರುವ ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ ಪಂದ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಸಮಿತ್ ಬಜಾಜ್ ಭವಿಷ್ಯ ನುಡಿದಿದ್ದಾರೆ. ಯಾವ ತಂಡ ಗೆಲ್ಲುತ್ತದೆ ಎನ್ನುವ ಬಗ್ಗೆ ಹೇಳಿಕೆ ನೀಡಿದ್ದಾರೆ.
ಸೆಮಿ ಫೈನಲ್ ನಲ್ಲಿ ಈ ತಂಡವೇ ವಿನ್ ಆಗಲಿದೆ
ಸೆಮಿ ಫೈನಲ್ ನಲ್ಲಿ ಯಾವ ತಂಡ ಮೊದಲು ಬ್ಯಾಟ್ ಮಾಡಲಿದೆ ಮತ್ತು ಯಾವ ತಂಡ ಗೆಲ್ಲಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಸಮಿತ್ ಬಜಾಜ್ ಅವರು ಭವಿಷ್ಯ ನುಡಿದಿದ್ದಾರೆ. “ಟೀಂ ಇಂಡಿಯಾ ಸೆಮಿಫೈನಲ್ ಅನ್ನು ಮುಂಬೈನಲ್ಲಿ ಮತ್ತು ಫೈನಲ್ ಅನ್ನು ಅಹಮದಾಬಾದ್ ನಲ್ಲಿ ಆಡಲಿದೆ. ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾ ಗೆಲ್ಲಲಿದೆ ಎಂದರು. ಭಾರತ ಮೊದಲು ಬೌಲಿಂಗ್ ಮಾಡಿ ನಂತರ ಚೇಸ್ ಮಾಡುವ ಸಾಧ್ಯತೆ ಹೆಚ್ಚು.
ನ್ಯೂಜಿಲೆಂಡ್ ನೀಡಿದ ಗುರಿಯನ್ನು ಟೀಂ ಇಂಡಿಯಾ 47 ರಿಂದ 48ನೇ ಓವರ್ ನಲ್ಲಿ ತಲುಪಬಹುದು. ಭಾರತ ತಂಡಕ್ಕೆ ನ್ಯೂಜಿಲೆಂಡ್ 250 ರಿಂದ 270 ರನ್ ಟಾರ್ಗೆಟ್ ನೀಡಬಲ್ಲದು ಎಂದು ಭವಿಷ್ಯ ನುಡಿದಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಪ್ರಮುಖ ಪಾತ್ರ ವಹಿಸಲಿದ್ದಾರೆ. ಕ್ಯಾಪ್ಟನ್ ಜಾತಕ ಬಹಳ ಮುಖ್ಯ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಂಡದ ಪ್ರದರ್ಶನದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅವರು ಫೈನಲ್ ನಲ್ಲಿ ಟೀಂ ಇಂಡಿಯಾ ಗೆಲುವಿಗೆ ನೆರವಾಗಲಿದ್ದಾರೆ.
ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡಲಿದ್ದಾರೆ. ನ್ಯೂಜಿಲೆಂಡ್ ತಂಡಕ್ಕೆ ಸಂಬಂಧಿಸಿದಂತೆ, ಸ್ಯಾಂಟ್ನರ್ ಮತ್ತು ಕಾನ್ವೆಯಂತಹ ಕೆಲವು ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಾರೆ. ರಚಿನ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ. ಟೀಮ್ ಇಂಡಿಯಾಗೆ ಈ ಪಂದ್ಯದಲ್ಲಿ ಅಷ್ಟು ಸುಲಭವಾಗಿ ಗೆಲುವು ಸಿಗುವುದಿಲ್ಲ. ಭಾರತ ಪಂದ್ಯದಲ್ಲಿ ಎಲ್ಲ ಸವಾಲನ್ನು ಎದುರಿಸಬೇಕಿದೆ” ಎಂದು ಸಮಿತ್ ಬಜಾಜ್ ಅವರು ಭವಿಷ್ಯ ನುಡಿದಿದ್ದಾರೆ. ಇನ್ನು ಸಮಿತ್ ಜ್ಯೋತಿ ಅವರು ಹೇಳಿದಂತೆ ಟೀಮ್ ಇಂಡಿಯಾ ಗೆಲ್ಲುತ್ತದಾ ಎನ್ನುವುದನ್ನು ಕಾದು ನೋಡಬೇಕಿದೆ.