India e-passport Features and application process: ಭಾರತದ ಪಾಸ್‌ಪೋರ್ಟ್ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಾಗಿದೆ. 2025 ರಲ್ಲಿ ಚಿಪ್ ಆಧಾರಿತ ಇ-ಪಾಸ್‌ಪೋರ್ಟ್ ದೇಶಾಧ್ಯಂತ ವಿತರಣೆ ಮಾಡಲಾಗುತ್ತಿದೆ. ಇದು ಪ್ರಯಾಣವನ್ನು ಹೆಚ್ಚು ಸುರಕ್ಷಿತ ಮತ್ತು ಸುಲಭಗೊಳಿಸುತ್ತದೆ. ಹಳೆಯ ಪಾಸ್‌ಪೋರ್ಟ್ ಗಳು ಸಹ ಚಾಲ್ತಿಯಲ್ಲಿ ಇರುತ್ತದೆ, ರಿನ್ಯೂ ಮಾಡುವಾಗ ಇ-ಪಾಸ್ ಪೋರ್ಟ್ ನೀಡಲಾಗುತ್ತದೆ. ಇದೀಗ ನಾವು ಈ-ಪಾಸ್‌ಪೋರ್ಟ್ ಎಂದರೇನು..? ಅದರ ವಿಶೇಷತೆ ಏನು..? ಕಾರ್ಯ ವಿಧಾನ ಮತ್ತು ಹಾಗೆ ಅರ್ಜಿ ಸಲ್ಲಿಸುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
ಏನಿದು e-passport?
E-Passport ಎಂದರೆ ಒಂದು ಸ್ಮಾರ್ಟ್ ಪಾಸ್‌ಪೋರ್ಟ್ ಆಗಿದ್ದು, ನಿಮ್ಮ ವೈಯಕ್ತಿಕ ಮತ್ತು ಬಯೋಮೆಟ್ರಿಕ್ ಮಾಹಿತಿಯಾದ ಫಿಂಗರ್ ಪ್ರಿಂಟ್ ಗಳು ಮತ್ತು ಮುಖದ ಚಿತ್ರವನ್ನು ಒಳಗೊಂಡಿರುವ ಎಲೆಕ್ಟ್ರಾನಿಕ್ ಚಿಪ್ ಹೊಂದಿರುತ್ತದೆ. ಇದು ಒಬ್ಬ ವ್ಯಕ್ತಿಯ ವಿದೇಶ ಪ್ರಯಾಣ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕೆ ಸಹಾಯ ಮಾಡುತ್ತದೆ.
ಭಾರತದಲ್ಲಿ ಇ-ಪಾಸ್‌ಪೋರ್ಟ್
ಭಾರತ ಸರ್ಕಾರವು ಈಗಾಗಲೇ ಇ-ಪಾಸ್‌ಪೋರ್ಟ್‌ಗಳನ್ನು ನೀಡುವುದನ್ನು ಪ್ರಾರಂಭಿಸಿದೆ. ಇವುಗಳನ್ನು ವಿತರಿಸುವಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಪ್ರಮುಖ ಪಾತ್ರ ವಹಿಸಿದೆ. ಇದು ದೇಶದಲ್ಲಿ ಡಿಜಿಟಲ್ ಪ್ರಯಾಣದ ಕಡೆಗಿನ ದೊಡ್ಡ ಹೆಜ್ಜೆಯಾಗಿದೆ.
ಇ-ಪಾಸ್‌ಪೋರ್ಟ್ ನ ವೈಶಿಷ್ಟ್ಯಗಳು
ಪಾಸ್‌ಪೋರ್ಟ್ ನ ಹಿಂಭಾಗದಲ್ಲಿರುವ ಚಿಪ್ ನಲ್ಲಿ ಹೆಸರು, ಹುಟ್ಟಿದ ದಿನಾಂಕ, ಫೋಟೋ ಮತ್ತು ಬೆರಳಚ್ಚುಗಳಂತಹ ಬಯೋಮೆಟ್ರಿಕ್ ಡೇಟಾವನ್ನು ಅಳವಡಿಸಲಾಗಿರುತ್ತದೆ. ಹೊರಗಿನಿಂದ ನೋಡಿದರೆ ಸಾಮಾನ್ಯ ಪಾಸ್‌ಪೋರ್ಟ್ ನಂತೆಯೇ ಇರುತ್ತದೆ. ಆದರೆ ಮುಂಭಾಗದ ಕವರ್ ಕೆಳಭಾಗದಲ್ಲಿ ಚಿನ್ನದ ಬಣ್ಣದ ಇ-ಪಾಸ್‌ಪೋರ್ಟ್ ಚಿಹ್ನೆ ಇರುತ್ತದೆ. ಚಿಪ್ ನಲ್ಲಿನ Encrypted ಡೇಟಾ ನಕಲು ಮಾಡುವುದನ್ನು ಅಥವಾ ಬದಲಾಯಿಸುವುದನ್ನು ತಡೆಯುತ್ತದೆ ಮತ್ತು ಇದರಿಂದ ಗುರುತಿನ ಕಳ್ಳತನ ಅಸಾಧ್ಯವಾಗುತ್ತದೆ.
ಇ-ಪಾಸ್‌ಪೋರ್ಟ್ ಕಾರ್ಯ
ವಿಮಾನ ನಿಲ್ದಾಣದಲ್ಲಿ e-passport scanner ಮೂಲಕ ಸ್ಕ್ಯಾನ್ ಮಾಡಲಾಗುತ್ತದೆ. ಚಿಪ್ ನಲ್ಲಿರುವ ಡೇಟಾವು ಪಾಸ್‌ಪೋರ್ಟ್ ಪುಟದಲ್ಲಿರುವ ಮಾಹಿತಿಯೊಂದಿಗೆ ಹೊಂದಾಣಿಕೆಯಾಗಿದೆಯೇ ಎಂದು ಪರಿಶೀಲಿಸಲಾಗುತ್ತದೆ. ಈ ಡಿಜಿಟಲ್ ಪರಿಶೀಲನೆಯು ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ ಮತ್ತು ಹೆಚ್ಚು ಸುರಕ್ಷಿತಗೊಳಿಸುತ್ತದೆ.
e-passport ಪ್ರಯೋಜನ
* ಇ-ಪಾಸ್‌ಪೋರ್ಟ್ ನಿಮ್ಮ ಡೇಟಾ ವನ್ನು ಸುರಕ್ಷತೆ ಮಾಡಿ ವಂಚನೆಯನ್ನು ತಡೆಯುತ್ತದೆ.
* ವಿಮಾನ ನಿಲ್ದಾಣಗಳಲ್ಲಿ ಇಮಿಗ್ರೇಷನ್ ಚೆಕ್ ತ್ವರಿತವಾಗಿ ನಡೆಯುತ್ತದೆ.
* ಆಟೋಮೇಟೆಡ್ ಇ-ಗೇಟ್ ಮೂಲಕ ಸೆಕೆಂಡುಗಳಲ್ಲಿ ಸ್ಕ್ಯಾನ್ ಆಗುವುದರಿಂದ ಸುಲಭ ಪ್ರವೇಶ ಸಿಗುತ್ತದೆ. ಇದರಿಂದ ಜಾಗತಿಕ ಪ್ರಯಾಣ ಸುಲಭ ಮತ್ತು ವೇಗವಾಗುತ್ತದೆ.
* ಡಿಜಿಟಲ್ ಸಿಗ್ನೇಚರ್ ಗಳಿಂದ ವೈಯಕ್ತಿಕ ಮಾಹಿತಿಯ ರಕ್ಷಣೆ
* ವಸತಿ ವಿಳಾಸದಂತಹ ಕೆಲವು ವಿವರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಅಧಿಕೃತ ಅಧಿಕಾರಿಗಳಿಗೆ ಮಾತ್ರ ಲಭ್ಯವಿರುತ್ತದೆ.
ಈ ರೀತಿಯಾಗಿ e-passport ಅರ್ಜಿ ಸಲ್ಲಿಸಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. https://www.passportindia.gov.in/psp ವೆಬ್ ಸೈಟ್ ಗೆ ಭೇಟಿ ನೀಡಿ ನೋಂದಣಿ ಮಾಡಿಕೊಂಡು, ಲಾಗಿನ್ ಮಾಡಬೇಕು. ಫ್ರೆಶ್ ಅಥವಾ ರಿ-ಇಶ್ಯೂ ಆಯ್ಕೆ ಮಾಡಿ ಫಾರ್ಮ್ ಭರ್ತಿ ಮಾಡಿ. ಆನ್ಲೈನ್ ಪಾವತಿ ಮಾಡಿ Appointment Book ಮಾಡಿಕೊಳ್ಳಿ. ನಂತರ ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ವೆರಿಫಿಕೇಷನ್ ಮಾಡಿಸಿಕೊಳ್ಳಿ.
2025 ರಲ್ಲಿ ಈಗಾಗಲೇ ಲಕ್ಷಾಂತರ ಇ-ಪಾಸ್‌ಪೋರ್ಟ್ ಗಳನ್ನ ವಿತರಣೆ ಮಾಡಲಾಗಿದೆ. ಹಳೆಯ ಪಾಸ್ ಪೋರ್ಟ್ ಹೊಂದಿರುವವರು ಮುಕ್ತಾಯದವರೆಗೆ ಬಳಸಬಹುದು. ರಿನ್ಯೂ ಮಾಡುವಾಗ ಇ-ಪಾಸ್‌ಪೋರ್ಟ್ ಲಭ್ಯವಾಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

