e-passport Benegits: ಪಾಸ್ಪೋರ್ಟ್ ಇದು ಒಂದು ದೇಶದ ಸರ್ಕಾರ ಆ ದೇಶದ ನಾಗರೀಕನಿಗೆ ನೀಡಿದ ಒಂದು ಅಧಿಕೃತ ದಾಖಲೆ ಆಗಿದೆ. ಇದರಿಂದ ಅವರು ತಮ್ಮ ದೇಶದಿಂದ ವಿದೇಶಕ್ಕೆ ಪ್ರಯಾಣವನ್ನ ಬೆಳೆಸಬಹುದಾಗಿದೆ. ವಿದೇಶದಲ್ಲಿ ಸುರಕ್ಷಿತ ಪ್ರಯಾಣ ಮತ್ತು ರಕ್ಷಣೆಯನ್ನು ಒದಗಿಸಲು ಈ ದಾಖಲೆ ಅಗತ್ಯ. ಇದೀಗ ಭಾರತೀಯ ಸರ್ಕಾರ ಪಾಸ್ಪೋರ್ಟ್ ಅನ್ನು ಇನ್ನಷ್ಟು ಸ್ಮಾರ್ಟ್ ಗೊಳಿಸಿದೆ. ಭಾರತ ಸರ್ಕಾರ ಈಗ ಇಲೆಕ್ಟ್ರಾನಿಕ್ ಪಾಸ್ಪೋರ್ಟ್ ಜಾರಿಗೆ ತಂದಿದ್ದು ಇದು ನಿಮ್ಮ ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ವಂಚನೆಯಿಂದ ನಿಮಗೆ ರಕ್ಷಣೆಯನ್ನು ನೀಡುತ್ತದೆ. ಈ ಬಗ್ಗೆ ನಾವೀಗ ಮಾಹಿತಿಯನ್ನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಇ ಪಾಸ್ಪೋರ್ಟ್ ಎಂದರೆ ಏನು?
ಇ ಪಾಸ್ಪೋರ್ಟ್ ಅಥವಾ ಇಲೆಕ್ಟ್ರಾನಿಕ್ ಪಾಸ್ಪೋರ್ಟ್ ಎಂದರೆ, ಬೆರಳಚ್ಚುಗಳು ಮತ್ತು ಡಿಜಿಟಲ್ ಛಾಯಾಚಿತ್ರದಂತಹ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸಿದ ಎಂಬೆಡೆಡ್ ಮೈಕ್ರೋ ಚಿಪ್ ಹೊಂದಿರುವ ಒಂದು ಪಾಸ್ಪೋರ್ಟ್. ಇ ಪಾಸ್ಪೋರ್ಟ್ ನಲ್ಲಿ ಒಂದು ಸಣ್ಣ ಇಲೆಕ್ಟ್ರಾನಿಕ್ ಚಿಪ್ ಅನ್ನು ಅಳವಡಿಸಲಾಗಿರುತ್ತದೆ, ಈ ಚಿಪ್ ನಲ್ಲಿ ನಿಮ್ಮ ಫೋಟೋ, ಪಿಂಗರ್ ಪ್ರಿಂಟ್ ಹಾಗೆ ಇತರ ಬಯೋಮೆಟ್ರಿಕ್ ಮಾಹಿತಿ ಸಂಗ್ರಹವಾಗಿರುತ್ತದೆ. ಪಾಸ್ಪೋರ್ಟ್ ನ ಮುಂಭಾಗದಲ್ಲಿ ಚಿನ್ನದ ಬಣ್ಣದ ಒಂದು ಚಿಹ್ನೆ ಕಾಣುತ್ತದೆ, ಇದು ಅಂತರಾಷ್ಟ್ರೀಯ ನಿಯಮಗಳಿಗೆ (ICAO) ಹೊಂದಿಕೊಂಡಿರುತ್ತದೆ. ಈ ಪಾಸ್ಪೋರ್ಟ್ ನಿಂದ ವಿಮಾನ ನಿಲ್ದಾಣಗಳ ಸ್ವಯಂಚಾಲಿತ ಗೇಟ್ ನಲ್ಲಿ ತ್ವರಿತವಾಗಿ ಪರೀಕ್ಷೆ ಮಾಡಬಹುದಾಗಿದೆ. ಚನೈ ನಲ್ಲಿ ಮಾರ್ಚ್ 25 ರಿಂದ 20,000 ಕ್ಕೂ ಅಧಿಕ ಇ ಪಾಸ್ಪೋರ್ಟ್ ಗಳನ್ನ ವಿತರಣೆ ಮಾಡಲಾಗಿದೆ.
ಪಾಸ್ಪೋರ್ಟ್ ಸೇವಾ 2.0 ಯೋಜನೆ
ಹೊಸ ಹೊಸ ತಂತ್ರಜ್ಞಾನವನ್ನ ಬಳಸಿ ಈ ಪಾಸ್ಪೋರ್ಟ್ ಸೇವಾ 2.0 ಯೋಜನೆಯನ್ನು ಜಾರಿಗೆ ತರಲಾಗಿದೆ. ಇದೀಗ ಗ್ಲೋಬಲ್ ಪಾಸ್ಪೋರ್ಟ್ ಸೇವಾ ಪ್ರೋಗ್ರಾಮ್ (GPSP 2.0 ) ಪರೀಕ್ಷಾ ಹಂತದಲ್ಲಿದೆ.
ಇ ಪಾಸ್ಪೋರ್ಟ್ ನ ಉಪಯೋಗ
* ಇ ಪಾಸ್ಪೋರ್ಟ್ ನಿಂದ ವಂಚನೆಯನ್ನ ತಡೆಗಟ್ಟಬಹುದಾಗಿದೆ.
* ಡೇಟಾಗಳು ಸುರಕ್ಷಿತವಾಗಿರುತ್ತದೆ.
* ಇ ಪಾಸ್ಪೋರ್ಟ್ ನಿಂದ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳುದಿಲ್ಲ.
*ಹಳೆಯ ಪಾಸ್ಪೋರ್ಟ್ ಗಳು ಮಾನ್ಯವಾಗಿರುತ್ತದೆ ಆದರೆ ಇ ಪಾಸ್ಪೋರ್ಟ್ ಸ್ಮಾರ್ಟ್ ಆಗಿದೆ.
ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಮೊದಲು https://www.passportindia.gov.in/psp ವೆಬ್ ಸೈಟ್ ಗೆ ಭೇಟಿ ನೀಡಿ, ಈ ಮೊದಲೇ ಲಾಗಿನ್ ಇದ್ದಾರೆ ಲಾಗಿನ್ ಮಾಡಿ, ಇಲ್ಲದವಾದರೆ ಯೂಸರ್ ID ರಚನೆ ಮಾಡಿ ಲಾಗಿನ್ ಮಾಡಿಕೊಳ್ಳಿ. ನಂತರ ಫಾರ್ಮ್ ಭರ್ತಿ ಮಾಡಿ, ಶುಲ್ಕವನ್ನ ಪಾವತಿಸಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications

