ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿರುವ ವಿಷಯಗಳಲ್ಲಿ ಟೀಮ್ ಇಂಡಿಯಾ ಆಟಗಾರರ ವಿಷಯ ಕೂಡ ಒಂದು ಎಂದು ಹೇಳಬಹುದು. ಹೌದು ಭಾರತ ತಂಡದ ಆಟಗಾರರು ನೀಡಿದ ಹೀನಾಯ ಪ್ರದರ್ಶನಕ್ಕೆ ಜನರು ಬಹಳ ಕೋಪ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು. ಈ ಬಾರಿ ವಿಶ್ವಕಪ್ ವಿನ್ ಆಗುವ ಬಲಿಷ್ಠ ತಂಡ ಎನಿಸಿಕೊಂಡಿದ್ದ ಭಾರತ ತಂಡ ನೀಡಿದ ಹೀನಾಯ ಪ್ರದರ್ಶನದ ಕಾರಣ ಜನರು ಬಹಳ ಕೋಪವನ್ನ ಮಾಡಿಕೊಂಡಿದ್ದು ತಮ್ಮ ಕೋಪವನ್ನ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಬಹುದು. ಆರಂಭರದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಹಿಣಿಯವಾಗಿ ಸೋಲನ್ನ ಅನುಭವಿಸಿದ್ದ ಭಾರತ ಮೊನ್ನೆ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಕೂಡ ಹೀನಾಯವಾಗಿ ಸೋಲನ್ನ ಅನುಭವಿಸಿದ್ದು ಇದು ಕ್ರಿಕೆಟ್ ಪ್ರಿಯರ ಕೋಪಕ್ಕೆ ಕಾರಣವಾಗಿದೆ ಎಂದು ಹೇಳಬಹುದು.
ಇನ್ನು ಇದರ ನಡುವೆ ಜನರಿಗೆ ಇನ್ನೊಂದು ಶಾಕಿಂಗ್ ಸುದ್ದಿ ಬಂದಿದೆ ಎಂದು ಹೇಳಬಹುದು. ಹೌದು ಭಾರತ ತಂಡ ವಿಶ್ವಕಪ್ ನಲ್ಲಿ ಹೀನಾಯವಾಗಿ ಸೋತ ಬೆನ್ನಲ್ಲೇ ಈಗ ಈಗ ಐಪಿಎಲ್ ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಭಾರತ ತಂಡ ವಿಶ್ವಕಪ್ ನಲ್ಲಿ ಹೀನಾಯವಾಗಿ ಸೋಲುತ್ತಿರುವುದಕ್ಕೂ ಐಪಿಎಲ್ ರದ್ದಾಗುವುದಕ್ಕೂ ಇರುವ ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಐಪಿಎಲ್ನಲ್ಲಿ ಮಿಂಚಿದ್ದ ಆಟಗಾರರು ಟೀಮ್ ಇಂಡಿಯಾ ಪರ ಆಡುವಾಗ ಕಳಪೆ ಆಟ ಪ್ರದರ್ಶಿಸಿದ್ದಾರೆ ಮತ್ತು ಅಷ್ಟೇ ಅಲ್ಲದೆ ಹೀನಾಯ ಪ್ರದರ್ಶನಕ್ಕೆ ಐಪಿಎಲ್ ಕಾರಣ ಎಂಬ ಟೀಕೆಗಳು ಕೂಡ ಕೇಳಿ ಬರುತ್ತಿವೆ. ಹೌದು ಐಪಿಎಲ್ ಮುಗಿದ ಬಳಿಕ ಬ್ರೇಕ್ ಪಡೆಯದೇ ಟೀಮ್ ಇಂಡಿಯಾ ಟಿ20 ವಿಶ್ವಕಪ್ಗೆ ಸಜ್ಜಾಗಿತ್ತು. ಇಲ್ಲಿ ಆಟಗಾರರಿಗೂ ಹಾಗೂ ಬಿಸಿಸಿಐಗೆ ಹಣವೇ ಮುಖ್ಯವಾಗಿತ್ತು ಹೊರತು ದೇಶದ ಪ್ರತಿಷ್ಠೆ ವಿಷಯವಾಗಿರಲಿಲ್ಲ. ಹೀಗಾಗಿ ಐಪಿಎಲ್ ಬ್ಯಾನ್ ಮಾಡುವಂತೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ. ಹೌದು ಮೊನ್ನೆ ಭಾರತ ತಂಡ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೋತ ನಂತರ ಟ್ವಿಟ್ಟರ್ ನಲ್ಲಿ ಬ್ಯಾನ್ ಐಪಿಎಲ್ ಬಹಳ ಟ್ರೆಂಡಿಂಗ್ ಆಗಿತ್ತು. ಈ ಹ್ಯಾಷ್ ಟ್ಯಾಗ್ ಈಗಲೂ ಮುಂದುವರೆದಿದ್ದು ಅನೇಕ ಕ್ರಿಕೆಟ್ ಪ್ರೇಮಿಗಳು ನಮಗೆ ಐಪಿಎಲ್ಗಿಂತ ಟೀಮ್ ಇಂಡಿಯಾದ ಪ್ರದರ್ಶನ ಮುಖ್ಯ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಭಾರತ ತಂಡದ 2 ಪಂದ್ಯಗಳ ಪ್ರದರ್ಶನ ಬಗ್ಗೆ ಕೋಪವನ್ನ ಕೂಡ ವ್ಯಕ್ತಪಡಿಸಿದ್ದಾರೆ. ಇನ್ನು ಅಫ್ಘಾನಿಸ್ತಾನ್, ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿ ನೆಟ್ ರನ್ರೇಟ್ ಹೆಚ್ಚಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ. ಒಂದು ವೇಳೆ ಈ ಮೂರು ಪಂದ್ಯಗಳಲ್ಲಿ ಭಾರತ ಜಯಿಸಿದರೂ ಸೆಮಿಫೈನಲ್ ಗೆ ಹೋಗುವುದು ಅನುಮಾನ. ಹೌದು ಅಫ್ಘಾನಿಸ್ತಾನ್ ಮತ್ತು ನ್ಯೂಜಿಲೆಂಡ್ ನಡುವಣ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಗೆದ್ದರೆ ಮಾತ್ರ ಟೀಮ್ ಇಂಡಿಯಾಗೆ ನೆಟ್ ರನ್ ರೇಟ್ ಮೂಲಕ ಸೆಮಿಫೈನಲ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಹೀಗಾಗಿ ಮುಂದಿನ 3 ಪಂದ್ಯಗಳಲ್ಲೂ ಜಯ ಸಾಧಿಸಿದರೂ ಸೆಮಿಫೈನಲ್ ಅವಕಾಶಕ್ಕಾಗಿ ಭಾರತ ತಂಡ ಅಫ್ಘಾನಿಸ್ತಾನ್ ಮತ್ತು ನ್ಯೂಜಿಲೆಂಡ್ ನಡುವಣ ಪಂದ್ಯದ ಫಲಿತಾಂಶವನ್ನು ಎದುರು ನೋಡಬೇಕು. ಸ್ನೇಹಿತರೆ ಟೀಮ್ ಇಂಡಿಯಾದ ಹೀನಾಯ ಸೋಲಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.