India: ಭಾರತಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದು ಯಾರು…? ಹೆಸರು ಬದಲಿಸಲು ಮುಂದಾದ ಮೋದಿ ಸರ್ಕಾರ.

ಭಾರತ ದೇಶಕ್ಕೆ ಇಂಡಿಯಾ ಅನ್ನುವ ಹೆದರು ಬಂದಿದ್ದು ಹೇಗೆ...?

India Name History: ಬಾಹ್ಯಾಕಾಶದಲ್ಲಿ ಚಂದ್ರಯಾನ 3 (Chandrayaan-3) ಭಾರತದ ಹೆಸರಿನಲ್ಲಿ ಇತಿಹಾಸ ಸೃಷ್ಟಿಸಿದೆ. ಭಾರತ ಹೆಸರು ಇದೀಗ ಎಲ್ಲಡೆ ಹರಡಿದೆ. ಚಂದ್ರಯಾನ 3 ಭಾರತದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ. ಚಂದ್ರಯಾನ ಯಶಸ್ಸಿನ ಬಳಿಕ ಇದೀಗ ದೇಶದಲ್ಲಿ ಹೊಸ ವಿಚಾರವೊಂದು ಬಾರಿ ಚರ್ಚೆಯಾಗುತ್ತಿದೆ.

ಸಾಮಾನ್ಯವಾಗಿ ಎಲ್ಲ ದೇಶಗಳಿಗೂ ಒಂದೊಂದು ಹೆಸರು ಇರುತ್ತದೆ. ಆದರೆ ನಮ್ಮ ಭಾರತ ಹೆಸರಿನಲ್ಲೂ ವಿಶೇಷವಾಗಿದೆ. ಏಕೆಂದರೆ India ಬದಲಾಗಿ ಭಾರತ ಎಂದು ಕೂಡ ನಮ್ಮ ದೇಶವನ್ನು ಕರೆಯುತ್ತಾರೆ. ಈಗಾಗಲೇ India ಬದಲಿಗೆ Bharat ಎಂದು ಮಾತ್ರ ಅಧಿಕೃತವಾಗಿ ಬಳಕೆ ಮಾಡಬೇಕು ಎಂದು ನರೇಂದ್ರ ಮೋದಿ (Narendra Modi) ಅವರು ಪ್ರಸ್ತಾಪಿಸಿದ್ದಾರೆ. ಇದೀಗ ನಮ್ಮ ಭಾರತ ದೇಶಕ್ಕೆ ಭಾರತ ಎನ್ನುವ ಹೆಸರು ಬಂದ ಹಿನ್ನಲೆಯ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಯೋಣ.

India Name History
Image Credit: Amazon

ಭಾರತ ಹೆಸರಿನ ಹಿಂದಿದೆ ಐತಿಹಾಸಿಕ ಕಥೆ
ನಮ್ಮ ದೇಶ India ಎಂದು ಹೇಗೆ ಕರೆಯಲ್ಪಡುತ್ತದೋ ಅದೇ ರೀತಿ ಭಾರತ ಎಂದು ಕೂಡ ಪ್ರಸಿದಿಯಾಗಿದೆ. ಅನೇಕ ಐತಿಹಾಸಿಕ ವಾಣಿಜ್ಯ ಮಾರ್ಗಗಳು ಹಾಗೂ ಪ್ರಾಚೀನ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಹುಟ್ಟಿದ್ದು, ನಾಲ್ಕು ಪ್ರಮುಖ ಧರ್ಮಗಳಾದ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಗಳು ಭಾರತದಲ್ಲಿ ಇವೆ. ರಾಮಾಯಣದ ದಶರಥನ ಮಗ ಭರತನಿಂದ ಭಾರತಕ್ಕೆ ಭಾರತ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ.

ಭಾರತಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದು ಯಾರು…?
ಭಾರತ ಎನ್ನುವ ಹೆಸರು ಭರತವರ್ಷ ಎನ್ನುವ ಹೆಸರಿನಿಂದ ಬಂದಿದ್ದು ಎನ್ನುವ ಬಗ್ಗೆ ವರದಿಯಾಗಿದೆ. ಭರತ ಚಕ್ರವರ್ತಿಯ ಸಾಮ್ರಾಜ್ಯವನ್ನು ಭರತವರ್ಷ ಎಂದು ಕರೆಯಲಾಗುತ್ತದೆ. ಇನ್ನು ಪೌರಾಣಿಕ ಹಿನ್ನಲೆಯಿಂದ ಈ ಹೆಸರು ಬಂದಿದೆ ಎನ್ನುವ ಮಾಹಿತಿ ಇದೆ. ವೃಷಭದೇವನ ಮಗ ಭರತ ಚಕ್ರವರ್ತಿಯಿಂದ ಅಥವಾ ಮಹಾರಾಜಾ ದುಷ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದಿದೆ ಎನ್ನಲಾಗಿದೆ.

India Name History
Image Credit: Freepik

ಇನ್ನು ಭಾರತಕ್ಕೆ ಸಿಂಧು ನದಿಯ ಪರ್ಷಿಯನ್ ರೂಪಾಂತರ ಇಂಡಸ್ ನಿಂದ INDIA ಎನ್ನುವ ಹೆಸರು ಬಂದಿದೆ. ಇನ್ನು ಕೇಂದ್ರದ ಮೋದಿ ಸರ್ಕಾರ INDIA ಹೆಸರಿನ ಬದಲಾಗಿ BHARAT ಹೆಸರಾಗಿ ಬದಲಾಯಿಸಲು ತೀರ್ಮಾನಿಸಿದೆ. ಆದರೆ ಮೋದಿಯ ಈ ತೀರ್ಮಾನಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗುತ್ತಿದೆ. ಇನ್ನು ಇಂಡಿಯಾದ ಹೆಸರು ಬದಲಾಗುತ್ತದೋ ಅಥವಾ ಇಲ್ಲವೋ ಎನ್ನುವು ಸದ್ಯದಲ್ಲೇ ತಿಳಿಯಲಿದೆ.

Join Nadunudi News WhatsApp Group

Join Nadunudi News WhatsApp Group