Team India: ಪಾಯಿಂಟ್ ಟೇಬಲ್ ನಲ್ಲಿ ಅಗ್ರ ಸ್ಥಾನದಲ್ಲಿ ಇದ್ದರೂ ಕೂಡ ಟೀಮ್ ಇಂಡಿಯಾ ಸೆಮಿ ಫೈನಲ್ ತಲುಪುದು ಕಷ್ಟ, ಯಾಕೆ ಗೊತ್ತಾ…?

ಸತತ 5 ಪಂದ್ಯ ಗೆದ್ದಿದ್ದರು ಭಾರತ ತಂಡಕ್ಕೆ ಸೆಮಿ ಫೈನಲ್ ಹಾದಿ ಕಷ್ಟ, ಕಾರಣ ಇಲ್ಲಿದೆ.

India Semi Final Match In World Cup: ICC World Cup 2023 ರಲ್ಲಿ ಜಯ ಸಾಧಿಸುವುದಕ್ಕಾಗಿ ಸಾಕಷ್ಟು ತಂಡಗಳ ನಡುವೆ ಹಣಾಹಣಿ ನಡೆಯುತ್ತಿದೆ. ಈ ಬಾರಿ ಭಾರತದಲ್ಲಿ ವಿಶ್ವ ಕಪ್ ನಡೆಯುತ್ತಿರುವುದು ವಿಶೇಷವಾಗಿದೆ. ಇನ್ನು ಟೀಮ್ ಇಂಡಿಯಾದ ಗೆಲುವಿಗಾಗಿ ಇಡಿ ದೇಶ ಕಾಯುತ್ತಿದೆ.

ಈ ಬಾರಿ Team India Cup ಗೆಲ್ಲುತ್ತದೆ ಎನ್ನುವ ನಿರೀಕ್ಷೆಯಲ್ಲಿಯೇ ಕ್ರಿಕೆಟ್ ಅಭಿಮಾನಿಗಳು ಪ್ರತಿ ಪಂದ್ಯವನ್ನು ಬಹಳ ಆಸಕ್ತಿಯಿಂದ ನೋಡುತ್ತಿದ್ದಾರೆ.

Team India Latest Updates
Image Credit: India Today

ಇನ್ನು 2 ಪಂದ್ಯ ಗೆದ್ದರೆ ಸೆಮಿ ಫೈನಲ್ ತಲುಪಲಿದೆ ಭಾರತ
ಈವರೆಗೆ ನಡೆದ ಪಂದ್ಯದಲ್ಲಿ Team India ಒಮ್ಮೆಯೂ ಕೂಡ ಸೋಲು ಕಾಣದಿರುವುದು ಭಾರತೀಯರಿಗೆ ಇನ್ನಷ್ಟು ಹುರುಪನ್ನು ಮೂಡಿಸುತ್ತಿದೆ ಎನ್ನಬಹುದು. ಹೀಗಾಗಿ ಫೈನಲ್ ಪಂದ್ಯದಲ್ಲೂ ಕೂಡ ಟೀಮ್ ಇಂಡಿಯಾ ವಿಜಯ ಸಾಧಿಸುತ್ತದೆ ಎನ್ನುವುದು ಎಲ್ಲ ನಿರೀಕ್ಷೆಯಾಗಿದೆ.

ಈವರೆಗೆ ಟೀಮ್ ಇಂಡಿಯಾ ಗೆಲುವು ಸಾಧಿಸಿರುವ ಲೆಕ್ಕಾಚಾರದ ಪ್ರಕಾರ ಸೆಮಿ ಫೈನಲ್ ಪ್ರವೇಶಿಸಲು ಭಾರತ ತಂಡ ಇನ್ನು 2 ಪಂದ್ಯ ಗೆಲುವನ್ನು ಸಾಧಿಸಬೇಕಿದೆ. ಆದರೆ ಸತತ 5 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡಕ್ಕೆ ಸೆಮಿ ಫೈನಲ್ ಹಾದಿ ಕೊಂಚ ಕಠಿಣ ಎನ್ನಬಹುದು. ಇದಕ್ಕೆ ಕಾರಣ ಏನೆಂದು ಚಿಂತಿಸುತ್ತಿದ್ದೀರಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

india semi final match
Image Credit: Hindustantimes

ಸತತ 5 ಪಂದ್ಯ ಗೆದ್ದಿದ್ದರು ಭಾರತ ತಂಡಕ್ಕೆ ಸೆಮಿ ಫೈನಲ್ ಹಾದಿ ಕಷ್ಟ
ಕಳೆದ ವಿಶ್ವಕಪ್ ಸಂದರ್ಭದಲ್ಲೂ ಭಾರತ ತಂಡ ಉತ್ತಮ ಫಾರ್ಮ್ ನಲ್ಲಿತ್ತು. ಆದರೆ ಸೆಮಿಫೈನಲ್‌ ನಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಕೊಂಚ ಎಡವಿದರೂ ಐದು ಪಂದ್ಯಗಳನ್ನು ಗೆದ್ದಿರುವ ಭಾರತ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತದೆ. ಭಾರತಕ್ಕೆ ಮುಂದಿನ ಎದುರಾಳಿ ಇಂಗ್ಲೆಂಡ್, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ.

Join Nadunudi News WhatsApp Group

ಭಾರತದ ಮುಂದಿನ ಪಂದ್ಯ October 29 ರಂದು ಲಕ್ನೋದ ಏಕನ ಸ್ಟೇಡಿಯಂ ನಲ್ಲಿ ಇಂಗ್ಲೆಂಡ್ ನ ವಿರುದ್ಧ ನಡೆದರೆ, November 5 ರಂದು ದಕ್ಷಿಣ ಆಫ್ರಿಕಾವನ್ನು ಭಾರತ ಎದುರಿಸಬೇಕಿದೆ. ಈ ಮೂರು ತಂಡಗಳ ಪೈಕಿ ದಕ್ಷಿಣ ಆಫ್ರಿಕಾ ಪ್ರಸ್ತುತ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಕೊಳಕಟ್ಟಡ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯ ಭಾರತಕ್ಕೆ ಕಠಿಣವಾಗಲಿದೆ.

Join Nadunudi News WhatsApp Group