World Cup 2023: ಭಾರತ ಪಾಕಿಸ್ತಾನ ಪಂದ್ಯ ನಡೆಯುವುದು ಅನುಮಾನ, ಬೇಸರದಲ್ಲಿ ಕ್ರಿಕೆಟ್ ಅಭಿಮಾನಿಗಳ.
ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯುವ ಸಾಧ್ಯತೆ ಕಡಿಮೆ.
India v/s Pakistan Match Cancelled: ಸದ್ಯ ಕ್ರಿಕೆಟ್ ಅಭಿಮಾನಿಗಳು India V/s Pakistan ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಭಾರತ ತಂಡವು ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸುವುದನ್ನು ನೋಡಲು ಭಾರತೀಯರು ಕಾಯುತ್ತಿದ್ದಾರೆ.
ಸದ್ಯ India V/s Pakistan ಪಂದ್ಯ ನಿರೀಕ್ಷೆ ಹೆಚ್ಚುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯುವುದು ಸಾಧ್ಯತೆ ಕಡಿಮೆ ಇದೆ.
India v/s Pakistan
ಶನಿವಾರದಂದು ಅಹಮದಾಬಾದ್ ನಲ್ಲಿ ICC World Cup 2023 ಗಾಗಿ ಭಾರತ ಹಾಗೂ ಪಾಕಿಸ್ತಾನ ತಂಡ ಸೆಣೆಸಾಡಲಿದೆ. ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ಆಗಲಿದೆ. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನ ಭಾರತೀಯರಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. October 14 ರಂದು ನಡೆಯಲಿರುವ India v/s Pakistan ಪಂದ್ಯಕ್ಕಾಗಿ ಎಲ್ಲರು ಕಾಯುತ್ತಿದ್ದಾರೆ.
ಭಾರತ ಪಾಕಿಸ್ತಾನ ಪಂದ್ಯ ನಡೆಯುವುದು ಅನುಮಾನ
India ಮತ್ತು Pakistan ತಂಡ World Cup 2023 ರಲ್ಲಿ ತಮ್ಮ ಮೊದಲ ಎರಡು ಪಂದ್ಯಗಳನ್ನು ಗೆದ್ದಿವೆ. ಸದ್ಯ October 14 ರಂದು ಈ ಎರಡು ತಂಡಗಳು ಮುಖಾಮುಖಿಯಾಗಲಿದೆ. ಆದರೆ ಶನಿವಾರ ನಡೆಯಬೇಕಿರುವ India v/s Pakistan ಪಂದ್ಯಕ್ಕೆ ವರುಣ ತೊಂದರೆ ನೀಡುವ ಸೂಚನೆ ಹೆಚ್ಚಾಗಿದೆ. ಈ ಸಮಯದಲ್ಲಿ ಉತ್ತರ ಗುಜರಾತ್ ನಲ್ಲಿ ಮಳೆಯಾಗಲಿದೆ ಎನ್ನುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂಡಿಯಾ v/s ಪಾಕಿಸ್ತಾನ ಪಂದ್ಯದಿಂದ ಸ್ಟಾರ್ ಆಟಗಾರ ಹೊರಕ್ಕೆ
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಶನಿವಾರ ಪಾಕಿಸ್ತಾನ ವಿರುದ್ದದ ಹೈವೋಲ್ಟೇಜ್ ಪಂದ್ಯಕ್ಕೆ ಗಿಲ್ ಭಾಗಿಯಾವುಗುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಗಿಲ್ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದರು ಪಂದ್ಯ ಆಡಲು ಹೆಚ್ಚು ಸಮಯ ಬೇಕಾಗಿದೆ. ಏಕೆಂದರೆ ಡೇಗ್ಯೂನಿಂದ ಚೇತರಿಸಿಕೊಂಡರು ದೇಹವು ಸ್ವಲ್ಪ ದಿನಗಳವರೆಗೆ ದುರ್ಬಲವಾಗಿರುತ್ತದೆ.
ಶುಭಮನ್ ಗಿಲ್ ಪಾಕಿಸ್ತಾನ ತಂಡದ ವಿರುದ್ಧ ಕಣಕ್ಕಿಳಿಯುವುದು ಶೇ. 90 ರಷ್ಟು ಅಸಾಧ್ಯ ಎನ್ನಬಹುದು. ಗಿಲ್ ಭಾರತ ತಂಡದಲ್ಲಿ ಆಡುತ್ತಿಲ್ಲ ಎನ್ನುವ ಸುದ್ದಿಯ ಬೆನ್ನಲ್ಲೇ ಇದೀಗ India v/s Pakistan ಪಂದ್ಯ ರದ್ದಾಗುವ ಬಗ್ಗೆ ಸುದ್ದಿ ಹರಡಿದೆ. ಕ್ರಿಕೆಟ್ ಪ್ರಿಯರಿಗೆ ಈ ಬಾರಿಯ ಪಂದ್ಯ ಹೆಚ್ಚಿನ ನಿರಾಸೆ ಉಂಟುಮಾಡಿದೆ. ಇನ್ನು October 14 ರಂದು India v/s Pakistan ಪಂದ್ಯ ನಡೆಯುತ್ತಾ ಇಂಡಿಯಾ ತಂಡದಲ್ಲಿ ಗಿಲ್ ಆಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.