Bank Privatization: ಬ್ಯಾಂಕ್ ಖಾತೆ ಇದ್ದವರಿಗೆ ಎಚ್ಚರಿಕೆ, ಕೆಲವೇ ದಿನಗಳಲ್ಲಿ ಖಾಸಗಿಯಾಗಲಿದೆ ಈ ಎಲ್ಲಾ ಬ್ಯಾಂಕುಗಳು.
ಸರ್ಕಾರೀ ಬ್ಯಾಂಕ್ ಗಳನ್ನೂ ಖಾಸಗೀಕರಣ ಗೊಳಿಸುವಲ್ಲಿ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
Indian Bank Privatization: ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗುತ್ತಿದೆ. ಆರ್ ಬಿಐ (RBI) ಇತ್ತೀಚಿಗೆ ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಲೈಸೆನ್ಸ್ ಅನ್ನು ಕೂಡ ರದ್ದುಪಡಿಸಿದೆ.
ಜುಲೈ ನಲ್ಲಿಯೇ ಬರೋಬ್ಬರಿ 5 ಬ್ಯಾಂಕ್ (Bank) ಗಳ ಪರವಾನಗಿಯನ್ನು ರದ್ದುಪಡಿಸಿ ಬ್ಯಾಂಕ್ ನ ಎಲ್ಲ ರೀತಿಯ ವಹಿವಾಟುಗಳನ್ನು ನಿಲ್ಲಿಸಲು ಆರ್ ಬಿಐ ಆದೇಶ ಹೊರಡಿಸಿದೆ. ಇನ್ನು ಆರ್ ಬಿಐ ಪರವಾನಗಿ ರದ್ದುಗೊಳಿಸಿದ ಬೆನ್ನಲ್ಲೇ ಇದೀಗ ಬ್ಯಾಂಕುಗಳಿಗೆ ಮತ್ತೊಂದು ಶಾಕ್ ಎದುರಾಗಿದೆ. ಬ್ಯಾಂಕುಗಳ ಖಾಸಗೀಕರಣದ ಸುದ್ದಿಗಳು ದಿನೇ ದಿನೇ ವೈರಲ್ ಆಗುತ್ತಿದೆ.
ಸರ್ಕಾರೀ ಬ್ಯಾಂಕ್ ಗಳ ಖಾಸಗೀಕರಣ
ಕೇಂದ್ರ ಸರ್ಕಾರವು ಅನೇಕ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ನಿರ್ಧರಿಸಿದೆ. ಸರ್ಕಾರೀ ಬ್ಯಾಂಕ್ ಗಳ ಖಾಸಗೀಕರಣದ ವಿಷಯವಾಗಿ ಈಗಾಗಲೇ ಸಾಕಷ್ಟು ಸುದ್ದಿಗಳು ಹರಡಿವೆ.
ದೇಶದಲ್ಲಿ ಅನೇಕ ಬ್ಯಾಂಕ್ ಗಳು ಸರ್ಕಾರಿ ಬ್ಯಾಂಕ್ ಗಳಾಗಿವೆ. ಕೇಂದ್ರ ಸರ್ಕಾರವು ಅನೇಕ ಬ್ಯಾಂಕ್ ಗಳ ಖಾಸಗೀಕರಣ ಮಾಡಿದೆ ಎನ್ನಲಾಗುತ್ತಿದೆ. ಬ್ಯಾಂಕ್ ಗಳ ಖಾಸಗೀಕರಣದ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ. ಇದೀಗ ಬ್ಯಾಂಕ್ ಗಳ ಖಾಸಗೀಕರಣದ (Bank Privatization) ಬಗ್ಗೆ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಬ್ಯಾಂಕ್ ಗಳನ್ನೂ ಖಾಸಗೀಕರಣಗೊಳಿಸುವಲ್ಲಿ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಅನೇಕ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಯೋಜನೆ ಹೂಡುತ್ತಿದೆ. ಇದೀಗ ಬ್ಯಾಂಕ್ ಗಳು ಹಾಗೂ ಕೆಲವು ಕಂಪನಿಗಳನ್ನು ಖಾಸಗೀಕರಣಗೊಳಿಸಲು ನಿರ್ಧರಿಸಿದೆ. ಬ್ಯಾಂಕ್ ಹಾಗೂ ಕಂಪನಿಗಳ ಖಾಸಗೀಕರಣದ ಕಾರ್ಯಗಳು ವೇಗವಾಗಿ ನಡೆಯುತ್ತಿದೆ. ಶೀಘ್ರದಲ್ಲಿಯೇ ಬ್ಯಾಂಕ್ ಗಳ ಖಾಸಗೀಕರಣ ಕಾರ್ಯ ಪೂರ್ಣಗೊಳ್ಳಲಿದೆ.
SBI ಹೊರತುಪಡಿಸಿ ಎಲ್ಲಾ ಬ್ಯಾಂಕುಗಳು ಖಾಸಗಿ ಆಗಲಿದೆ
ಬ್ಯಾಂಕ್ ಗಳ ಖಾಸಗೀಕರಣದ ಬಗ್ಗೆ ಸರ್ಕಾರಿ ನೌಕರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹೊರತುಪಡಿಸಿ ಎಲ್ಲಾ ಸರ್ಕಾರಿ ಬ್ಯಾಂಕ್ ಗಳು ಖಾಸಗಿ ಆಗಲಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಎಸ್ ಬಿಐ ಬ್ಯಾಂಕ್ ಸೇರಿದಂತೆ ದೇಶದ 6 ಸರ್ಕಾರಿ ಬ್ಯಾಂಕ್ ಗಳನ್ನೂ ಖಾಸಗೀಕರಣ ಮಾಡುವುದಿಲ್ಲ ಎಂದು NITI ಆಯೋಗ ತಿಳಿಸಿದೆ.
ಖಾಸಗೀಕರಣ ಆಗದ ಆರು ಬ್ಯಾಂಕ್ ಗಳು
ಯಾವ ಯಾವ ಬ್ಯಾಂಕ್ ಗಳನ್ನೂ ಖಾಸಗೀಕರಣ ಮಾಡುವುದಿಲ್ಲ ಎನ್ನುವ ಬಗ್ಗೆ ನೀತಿ ಆಯೋಗ ಮಾಹಿತಿ ನೀಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಎಸ್ ಬಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ಇಂಡಿಯನ್ ಬ್ಯಾಂಕ್ ಗಳನ್ನೂ ಖಾಸಗೀಕರಣ ಮಾಡುವುದಿಲ್ಲ ಎಂದು ನೀತಿ ಆಯೋಗ ತಿಳಿಸಿದೆ. ಇನ್ನು ಸರ್ಕಾರ ಶೀಘ್ರದಲ್ಲೇ IDBI ಬ್ಯಾಂಕ್ ಅನ್ನು ಖಾಸಗೀಕರಣಗೊಳಿಸಲು ಸಿದ್ಧತೆ ನಡೆಸುತ್ತಿದೆ ಎನ್ನುವ ಬಗ್ಗೆ ವರದಿಯಾಗಿದೆ.