Whatsapp: ವಾಟ್ಸಾಪ್ ನಲ್ಲಿ ಇಂತಹ ಕೆಲಸ ಕೆಲಸ ಮಾಡಿದರೆ 3 ವರ್ಷ ಜೈಲು, ವಾಟ್ಸಾಪ್ ನಿಯಮ ಬದಲಿಸಿದ ಭಾರತ ಸರ್ಕಾರ.
ಇನ್ನುಮುಂದೆ ವಾಟ್ಸಾಪ್ ನಲ್ಲಿ ಇಂತಹ ಕೆಲಸ ಮಾಡಿದವರ ಮೇಲೆ ಕಠಿಣ ಕ್ರಮ.
Government Alert For Whatsapp User: ಭಾರತದಲ್ಲಿ ಯಾವಾಗ ಇಂಟರ್ನೆಟ್(Internet) ಅತಿ ಕಡಿಮೆ ದರದಲ್ಲಿ ಆರಂಭವಾಯ್ತೋ ಅಂದಿನಿಂದ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆ ಕೂಡ ಹೆಚ್ಚಾಯ್ತು, ಅದರಂತೆಯೇ ಭಾರತ ಇಂದು ಸಾಮಾಜಿಕ ಜಾಲತಾಣಗಳು ಹಾಗು ಅಂತರ್ಜಾಲಗಳ ಬಳಕೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಇದರಿಂದ ಎಷ್ಟು ಲಾಭ ಆಗಿದ್ಯೋ ಅಷ್ಟೇ ನಷ್ಟ ಕೂಡ ಉಂಟಾಗಿದೆ.
ವಾಟ್ಸಪ್ಪ್ ಬಳಕೆದಾರರಿಗೆ ನಿಯಮ ಬದಲಾವಣೆ ಮಾಡಿದ ಸರ್ಕಾರ
ಹೌದು ಭಾರತದಲ್ಲಿ ಈಗಾಗಲೇ ಅತಿಹೆಚ್ಚು ಸಂಖ್ಯೆಯಲ್ಲಿ ವಾಟ್ಸಾಪ್ ಗಳಂತ ಮೆಸೆಂಜರ್ ಬಳಕೆ ಮಾಡುವವರ ಸಂಖ್ಯೆ ಅತಿಯಾಗಿದೆ. ಗುಡ್ ಮಾರ್ನಿಂಗ್ ನಿಂದ ಹಿಡಿದು ಗುಡ್ ನೈಟ್ ತನಕ, ಸಿನೆಮಾದಿಂದ ಹಿಡಿದು ರಾಜಕೀಯದ ತನಕ ಎಲ್ಲ ರೀತಿಯ ಸುದ್ದಿಗಳನ್ನು ಇಂದು ಜನ ವಾಟ್ಸಾಪ್ ನಲ್ಲಿಯೇ ಪಡೆಯುತ್ತಿದ್ದಾರೆ.
ವಾಟ್ಸಾಪ್ ನಲ್ಲಿ ಅತಿಯಾದ ಮಾಹಿತಿಗಳನ್ನು ಪಡೆಯುತ್ತಿರುವ ಜನರಿಗೆ ಇದೀಗ ಹೊಸ ಸಂಕಷ್ಟ ಸರ್ಕಾರ ತಂದಿಟ್ಟಿದೆ. ಹೌದು ಸರ್ಕಾರವೀಗ ವಾಟ್ಸಾಪ್ ಅಪರಾಧಗಳ ಮೇಲೆ ಹಲವಾರು ಕಾನೂನು ಕ್ರಮ ಜರುಗಿಸಲು ಮುಂದಾಗಿದೆ. ಹೌದು ಅನೇಕ ಮಂದಿ ವಾಟ್ಸಾಪ್ ಗಳಲ್ಲಿ ಗೊತ್ತೋ ಗೊತ್ತಿಲ್ಲದೆಯೋ ಯಾವುದೇ ಆಧಾರ ಇಲ್ಲದ ಸುಳ್ಳು ಸುದ್ದಿಗಳನ್ನು ಆಗಿಂದಾಗ ಶೇರ್ ಮಾಡುತ್ತಿರುವುದು ಸಮಾಜದ ಸ್ವಾಸ್ತ್ಯ ಕೆಡಿಸುತ್ತಿದೆ. ಇದೆ ಕಾರಣಕ್ಕಾಗಿ ಈಗ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಇಂತಹ ಕೆಲಸ ಮಾಡುವವರ ಮೇಲೆ ಕಠಿಣ ಕ್ರಮ
ಹೀಗಾಗಿ ದೇಶಾದ್ಯಂತ ಇನ್ಮೇಲೆ ಯಾರಾದರೂ ಭಾರತದ ಐಕ್ಯತೆಗೆ ಧಕ್ಕೆ ತರುವ ಹಾಗು ದೇಶದ ಬಗ್ಗೆ ಅವಹೇಳನ ಮಾಡುವ ಹಾಗು ಹೆಮ್ಮೆಯ ನಾಯಕರು ಹಾಗು ಸಂವಿಧಾನದ ಬಗ್ಗೆ ಕೆಟ್ಟದಾಗಿ ಸಂದೇಶ ರವಾನಿಸುವ ಎಲ್ಲರ ಮೇಲೂ ನಿಗಾ ಇರಿಸಲಿದೆ. ಇದೆ ಕಾರಣಕ್ಕಾಗಿ ಸರ್ಕಾರ ಈಗ ವಿಭಾಗ 195 (1) D ಪ್ರಕಾರ ಇಂತಹವರಿಗೆ 3 ವರ್ಷ ಕಠಿಣ ಶಿಕ್ಷೆ ವಿಧಿಸಲಿದೆ.
ಈ ಹಿಂದೆ ಇದ್ದ ಕಡಿಮೆ ಶಿಕ್ಷೆಯನ್ನು ತಗೆದುಹಾಕಿ ಸರ್ಕಾರ ಇದೀಗ ಹೊಸ ನಿರ್ಣಯ ಕೈಗೊಂಡಿದೆ. ಹೌದು ಸರ್ಕಾರದ ಈ ಕೆಲಸಕ್ಕೆ ಇದೀಗ ಹಲವು ಪಕ್ಷಗಳು ಕೂಡ ಸಾಥ್ ನೀಡಿವೆ. ಹೀಗಾಗಿ ಮುಂದಿನ ದಿನ ನೀವು ಆಧಾರ ರಹಿತ ಸುಳ್ಳು ಸುದ್ದಿಗಳನ್ನು ಶೇರ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಏಕೆಂದರೆ ಈ ಕಾಯ್ದೆಯಲ್ಲಿ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ