Team India: ಟೀಂ ಇಂಡಿಯಾದ ಆಟಗಾರರು ಒಂದು ಪಂದ್ಯ ಆಡಲು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ…?
ಬಿಸಿಸಿಐ ತನ್ನ ಎಲ್ಲಾ ಆಟಗಾರರಿಗೆ ಎಷ್ಟು ಸಂಬಳವನ್ನು ನೀಡುತ್ತದೆ ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ.
T 20 Cricket Players Remuneration: ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ. ಟೀಮ್ ಇಂಡಿಯಾ (Team India)ವನ್ನು ಪ್ರಸ್ತುತ ಬಿಸಿಸಿಐ ನೆಡೆಸುತ್ತಿದ್ದೆ. ಈ ಕ್ರಿಕೆಟ್ ಮಂಡಳಿ ತನ್ನ ಎಲ್ಲಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳ ಬಗ್ಗೆ ವಿಶೇಷ ಕಾಳಜಿಯನ್ನು ತೋರಿಸುತ್ತದೆ ಮತ್ತು ಅವರ ಮೂಲಭೂತ ಅವಶ್ಯಕತೆಗಳ ಬಗ್ಗೆ ಗಮನ ಹರಿಸುತ್ತದೆ.
ಟಿ 20 ಕ್ರಿಕೆಟ್ ಆಡಿದರೆ ಎಷ್ಟು ಹಣ ಸಿಗಲಿದೆ
ಪ್ರಸ್ತುತ ಟೀಮ್ ಇಂಡಿಯಾ ಟಿ 20 ಕ್ರಿಕೆಟ್ ನಲ್ಲಿ ನಂಬರ್ ಒನ್ ತಂಡವಾಗಿದೆ. ಟಿ 20 ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ ತನ್ನ ಸಾಮ್ರಾಜ್ಯವನ್ನ ಸೃಷ್ಟಿ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ವಿಂಡೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಕೇವಲ ಟಿ 20 ಪಂದ್ಯದ ಸರಣಿಯನ್ನು ಮಾತ್ರ ಆಡುತ್ತಿದೆ. ಬಿಸಿಸಿಐ ತನ್ನ ಎಲ್ಲಾ ಆಟಗಾರರಿಗೆ ಉತ್ತಮ ವೇತನವನ್ನು ನೀಡುತ್ತದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾ ನಂಬರ್ ಒನ್ ಸ್ಥಾನದಲ್ಲಿದೆ. ಟೀಮ್ ಇಂಡಿಯಾ ಸತತವಾಗಿ ಎರಡು ಬಾರಿ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ನಲ್ಲಿ ಆಡಿದೆ. ಇತ್ತೀಚಿಗೆ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸವನ್ನ ಕೈಗೊಂಡಿತ್ತು, ಆ ಪ್ರವಾಸದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಸೋಲಿಸಿದೆ.
ಬಿಸಿಸಿಐ ಟೆಸ್ಟ್ ಆಟಗಾರರಿಗೆ ಶುಲ್ಕವಾಗಿ ಹೆಚ್ಚಿನ ಹಣವನ್ನ ನೀಡುತ್ತದೆ. ವರದಿಗಳ ಪ್ರಕಾರ ಟೆಸ್ಟ್ ಪಂದ್ಯದ 11 ನೇ ಪಂದ್ಯದ ಭಾಗವಾಗಿರುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 15 ಲಕ್ಷ ಸಂಭಾವನೆಯನ್ನು ನೀಡಲಾಗುತ್ತದೆ. ಹಾಗೆ ತಂಡದ ಹೆಚ್ಚುವರಿ ಆಟಗಾರರಿಗೆ 7 .5 ಲಕ್ಷ ರೂ . ಅನ್ನು ಕೊಡಲಾಗುತ್ತದೆ.
ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಯಶಸ್ವಿ ತಂಡವಾಗಿದೆ. ಇತ್ತೀಚಿಗೆ ಟೀಮ್ ಇಂಡಿಯಾ ಏಕದಿನ ರಾಂಕಿಂಗ್ ನಲ್ಲಿ ಮೂರನೇ ಸ್ಥಾನ ಪಡೆದಿದೆ. ಈ ಟೀಮ್ ಎರಡು ಬಾರಿ ಏಕದಿನ ವಿಶ್ವಕಪ್ ಅನ್ನು ಗೆದ್ದಿದೆ. ಹಾಗೆ ಇದೀಗ ಮೂರನೇ ಟ್ರೋಪಿಯತ್ತ ಸಾಗುತ್ತಿದ್ದಾರೆ.
ಟೀಮ್ ಇಂಡಿಯಾ ಇತ್ತೀಚಿಗಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು 2 -1 ಅಂತರದಿಂದ ಗೆದ್ದುಕೊಂಡಿದೆ. ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಏಷ್ಯಾಕಪ್ ಹಾಗೆ ODI ವಿಶ್ವಕಪ್ 2023 ರಲ್ಲಿ ಭಾಗವಹಿಸಲಿದೆ. ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಟಗಾರರಿಗೆ 7 ಲಕ್ಷ ರೂಪಾಯಿಗಳನ್ನ ನೀಡಲಾಗುತ್ತದೆ.
ರೋಹಿತ್ ಹಾಗೂ ವಿರಾಟ್
ಬಿಸಿಸಿಐ ತನ್ನ ಎಲ್ಲಾ ಟಿ 20 ಆಟಗಾರರಿಗೆ ಪ್ರತಿ ಪಂದ್ಯಕ್ಕೆ 3 ಲಕ್ಷ ರೂಪಾಯಿಗಳನ್ನು ನೀಡುತ್ತದೆ. ಆದರೆ ವಾಸ್ತವ ವಿಷಯ ಏನೆಂದರೆ, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಹಾಗೂ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಹಳ ಕಾಲದ ವರೆಗೆ ಟಿ 20 ಕ್ರಿಕೆಟ್ ಆಡುತ್ತಿಲ್ಲ ಇದರಿಂದ ಅವರು ಪ್ರತಿ ಪಂದ್ಯಕ್ಕೆ 3 ಲಕ್ಷ ರೂಪಾಯಿ ನಷ್ಟ ಅನುಭವಿಸಬೇಕಾಗಬಹುದು.