ದೇಶದ ಎಲ್ಲಾ ಕಾರ್ಮಿಕರಿಗೆ ಬಂಪರ್ ಗೂಡ ನ್ಯೂಸ್, ಇನ್ನುಮುಂದೆ ವಾರಕ್ಕೆ 4 ದಿನ ಕೆಲಸ 3 ದಿನ ರಜೆ, ಕೇಂದ್ರದ ಆದೇಶ, ಹೊಸ ಸಂಹಿತೆ.
ದೇಶದಲ್ಲಿ ಹೊಸಹೊಸ ನಿಯಮಗಳನ್ನ ಜಾರಿಗೆ ತರಗಳುತ್ತಿದ್ದು ಇದು ಜನರ ಖುಷಿಗೆ ಕಾರಣವಾಗುತ್ತಿದೆ ಎಂದು ಹೇಳಬಹುದು. ಜನರ ಅನುಕೂಲ ಮತ್ತು ಅವರ ಭದ್ರತೆಯ ಉದ್ದೇಶದಿಂದ ದೇಶದಲ್ಲಿ ಕೇಂದ್ರ ಸರ್ಕಾರ ಹಲವು ಹೊಸ ನಿಯಮಗಳನ್ನ ಜಾರಿಗೆ ತರುತ್ತಿದ್ದು ಇದು ಜನರಿಗೆ ಬಹಳ ಸಹಾಯಕವಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದ ಕಾರ್ಮಿಕರಿಗೆ ಈಗ ಕೇಂದ್ರ ಸರ್ಕಾರ ಬಂಪರ್ ಗುಡ್ ನೀಡಲು ಮುಂದಾಗಿದ್ದು ಇದು ಕಾರ್ಮಿಕರ ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು ಮತ್ತು ಔದ್ಯೋಗಿಕ ಸುರಕ್ಷತೆ ಹೆಚ್ಚಿಸಲಿದೆ ಎಂದು ಹೇಳಿದರೆ ಸರ್ಕಾರ.
ಹಾಗಾದರೆ ಏನದು ಗುಡ್ ನ್ಯೂಸ್ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು ಮತ್ತು ಔದ್ಯೋಗಿಕ ಸುರಕ್ಷತೆ ಉದ್ದೇಶದಿಂದ ಕೇಂದ್ರ ಸರ್ಕಾರ ನಾಲ್ಕು ಹೊಸ ಕಾರ್ಮಿಕ ಸಂಹಿತೆಯನ್ನ ಜಾರಿಗೆ ತರಲು ಮುಂದಾಗಿದೆ. ಇನ್ನು ಜಾರಿಗೆ ಬರಲಿರುವ ಹೊಸ ಸಂಹಿತೆಯ ಅಡಿಯಲ್ಲಿ ಕಾರ್ಮಿಕ ವೇತನ, ಸುರಕ್ಷತೆ ಮತ್ತು ಅವರ ಕೆಲಸದ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಯನ್ನ ಮಾಡಲಾಗುತ್ತಿದೆ.
ಇನ್ನು ಸದ್ಯ ಜಾರಿಯಲ್ಲಿ ಸಂಹಿತೆಯ ಪ್ರಕಾರ ಇನ್ನುಮುಂದೆ ಕಾರ್ಮಿಕರಿಗೆ ವಾರಕ್ಕೆ ಐದು ದಿನ ಕೆಲಸವನ್ನ ಮಾಡುತ್ತಾರೆ, ಆದರೆ ಜಾರಿಗೆ ಬರಲಿರುವ ಹೊಸ ಸಂಹಿತೆಯ ಪ್ರಕಾರ ಸರ್ಕಾರೀ ಉದ್ಯೋಗಿಗಳು ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸವನ್ನ ಮಾಡಲಿದ್ದಾರೆ. ಇನ್ನು 48 ಗಂಟೆಗಳ ಸಾಪ್ತಾಹಿಕ ಕೆಲಸದ ಅವಶ್ಯಕತೆಯನ್ನು ಪೂರೈಸಬೇಕಾಗಿರುವುದರಿಂದ ನಾಲ್ಕು ದಿನಗಳಲ್ಲಿ 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಕಾರ್ಮಿಕ ಇಲಾಖೆ ಸ್ಪಷ್ಟಪಡಿಸಿದೆ. ಇನ್ನು ಹೊಸ ಸಂಹಿತೆಯ ಪ್ರಕಾರ ಕಾರ್ಮಿಕರಿಗೆ ನೀಡಲಾಗುವ ಸಂಬಳದಲ್ಲಿ ಕೊಂಚ ಕಡಿಮೆ ಆಗಲಿದೆ, ಆದರೆ ಅವರ ಪಿಎಫ್ ನಲ್ಲಿ ಏರಿಕೆ ಹೆಚ್ಚಳವನ್ನ ಕಾಣಬಹುದಾಗಿದೆ.
ಇನ್ನು ಎಲ್ಲ ಬಗೆಯ ಭತ್ಯೆಗಳು ನೌಕರರ ಒಟ್ಟು ವೇತನದ ಶೇಕಡ 50 ರಷ್ಟನ್ನು ಮೀರುವಂತಿಲ್ಲ, ಅಂದರೆ ಒಟ್ಟು ಸಂಬಳದಲ್ಲಿ ಶೇಕಡ 50 ರಷ್ಟು ಭಾಗವು ಮೂಲ ವೇತನ ಆಗಿರಬೇಕು. ಪಿಎಫ್ ಖಾತೆಗೆ ವರ್ಗಾವಣೆ ಆಗುವ ಮೊತ್ತವನ್ನು ನೌಕರರ ಮೂಲವೇತನದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಇನ್ನು ಈ ಹೊಸ ಸಂಹಿತೆ ಹೊಸ ವರ್ಷದಿಂದ ಜಾರಿಗೆ ಬಹುತೇಕ ಎಲ್ಲಾ ಲಕ್ಷಣ ಇದೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ಜಾರಿಗೆ ಬರಲಿರುವ ಈ ಹೊಸ ಕಾರ್ಮಿಕ ಸಂಹಿತೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಕಾರ್ಮಿಕರಿಗೆ ತಲುಪಿಸಿ.