Marriage Law 2023: ಪ್ರೀತಿಸಿ ಮದುವೆಯಾಗುವ ಎಲ್ಲರಿಗೂ ಹೈಕೋರ್ಟ್ ನಿಂದ ಹೊಸ ತೀರ್ಪು, ಹಕ್ಕುಗಳ ಬಗ್ಗೆ ತಿಳಿಸಿದ ಕೋರ್ಟ್.
ಮದುವೆಯ ಕುರಿತಂತೆ ಹೈಕೋರ್ಟ್ ಇನ್ನೊಂದು ಆದೇಶವನ್ನ ಹೊರಡಿಸಿದೆ.
High Court Verdict About Love Marriage: ಹಿಂದೂ ಸಂಪ್ರದಾಯದಲ್ಲಿ ಮದುವೆಗೆ (Marriage) ಅದರದ್ದೇ ಆದ ಮಹತ್ವವಿದೆ. ಮದುವೆಯ ಸಾಮಯದಲ್ಲಿ ಶಾಸ್ತ್ರೋಸ್ತ್ರವಾಗಿ ಮದುವೆಯಾಗುವುದು ಎಷ್ಟು ಮುಖ್ಯಅವೋ ಅದೇ ರೀತಿಯ ಭಾರತೀಯ ಕಾನೂನಿನ ಪ್ರಕಾರ ಮದುವೆಯಾಗುವುದು ಕೂಡ ಅಷ್ಟೇ ಮುಖ್ಯ. ಇನ್ನು ಭಾರತೀಯ ಕಾನೂನು ಯಾರೊಬ್ಬರೂ ಮದುವೆಯಾಗುವುದನ್ನು ವಿರೋಧಿಸುವುದಿಲ್ಲ.
ಸಾಮಾನ್ಯವಾಗಿ ಪ್ರೀತಿಸಿ ಮದುವೆಯಾದ ಅನೇಕ ಪ್ರಕರಣಗಳು ಕೋರ್ಟ್ ನ ಮೆಟ್ಟಿಲೇರುತ್ತವೆ. ಇದಕ್ಕೆ ಕಾರಣ ಮದುವೆಯಾಗಿರುವ ಹುಡಗ ಅಥವಾ ಹುಡುಗಿಯ ಪೋಷಕರ ವಿರೋಧ ಇರುವುದು. ಸದ್ಯ ಭಾರತೀಯ ಹೈಕೋರ್ಟ್ ಪ್ರೀತಿಸಿ ಮದುವೆಯಾಗುವವರಿಗೆ ತಮ್ಮ ಹಕ್ಕುಗಳ ಬಗ್ಗೆ ಮಹತ್ವದ ತೀರ್ಪನ್ನು ನೀಡಿದೆ. ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಯಾವ ರೀತಿಯ ತೀರ್ಪನ್ನು ನೀಡಿದೆ ಎನ್ನುವಾ ಬಗ್ಗೆ ಮಾಹಿತಿ ತಿಳಿಯೋಣ.
ಪ್ರೀತಿಸಿ ಮದುವೆಯಾಗುವ ಎಲ್ಲರಿಗೂ ಹೈಕೋರ್ಟ್ ನಿಂದ ಹೊಸ ತೀರ್ಪು
ಸದ್ಯ ಪ್ರೀತಿಸಿ ಮದುವೆಯಾದ ದಂಪತಿಗಳಿಗೆ ಅವರ ಕುಟುಂಬದಿಂದ ಬೆದರಿಕೆ ಹೆಚ್ಚುತ್ತಿದ್ದು, ದಂಪತಿ ಹೈಕೋರ್ಟ್ ಮನವಿ ಸಲ್ಲಿಸಿದ್ದು, ಪೊಲೀಸ್ ರಕ್ಷಣೆ ನೀಡುವಂತೆ ಕೇಳಿದ್ದಾರೆ. ಈ ಬಗ್ಗೆ ಹೈಕೋರ್ಟ್ ತನಿಖೆ ನಡೆಸಿ ಮಹತ್ವದ ಆದೇಶ ಹೊರಡಿಸಿದೆ.
“ಒಬ್ಬರು ಸ್ವಂತ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಹೊಂದಿರುತ್ತಾರೆ. ಅವರ ಹಕ್ಕನ್ನು ಅಳಿಸಲಾಗುವುದಿಲ್ಲ. ಸಾಂವಿಧಾನಿಕವಾಗಿ ಅವರ ಮದುವೆಯ ಹಕ್ಕು ರಕ್ಷಿಸಲ್ಪಟ್ಟಿದೆ. ಹಾಗೆಯೆ ಕುಟುಂಬ ಸದಸ್ಯರು ಸಹ ಅಂತಹ ವೈವಾಹಿಕ ಸಂಬಂಧಗಳನ್ನು ಅಪೇಕ್ಷಿಸಲು ಸಾಧ್ಯವಿಲ್ಲ” ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಈ ಮೂಲಕ ಪ್ರೀತಿಸಿ ಮದುವೆಯಾಗುವವರಿಗೆ ಪೋಷಕರ ಕುಟುಂಬದಿಂದ ಯಾವುದೇ ಅಡ್ಡಿ ಮಾಡಿದರು ಅದು ಕಾನೂನು ನಿಯಮ ಉಲ್ಲಂಘನೆ ಆಗುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಭಾರತೀಯ ನ್ಯಾಯಾಲಯ ಮದುವೆಯ ಹಕ್ಕುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸಿದೆ.