Railway Rule: ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ರೂಲ್ಸ್, ರೈಲು ಇಳಿಯುವಾಗ ಈ ತಪ್ಪು ಮಾಡುವಂತಿಲ್ಲ

ಪ್ರಯಾಣಿಕರು ರೈಲಿನಿಂದ ಇಳಿಯುವ ಮುನ್ನ ಈ ಕೆಲಸಗಳನ್ನು ಮಾಡುವುದು ಅಗತ್ಯವಾಗಿದೆ.

Indian New Railway Rule: ರೈಲುಪ್ರಯಾಣವು ಹೆಚ್ಚಿನ ಸುರಕ್ಷತೆಯ ಜೊತೆಗೆ ರಾತ್ರಿ ಪ್ರಯಾಣಕ್ಕೆ ಉತ್ತಮವಾಗಿರುವ ಕಾರಣ ಪ್ರತಿನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಕರು ರೈಲುಪ್ರಯಾಣವನ್ನು ಮಾಡುತ್ತಾರೆ. ಇತ್ತೀಚೆಗಂತೂ ಭಾರತೀಯ ರೈಲ್ವೆಗಳಲ್ಲಿ ಪ್ರಯಾಣಿಕರಿಗಾಗಿ ಹತ್ತು ಹಲವು ಸೌಕರ್ಯವನ್ನು ಇಲಾಖೆ ಪರಿಚಯಿಸುತ್ತಿದೆ.

ಇನ್ನು ರೈಲು ಪ್ರಯಾಣವನ್ನು ಮಾಡುವ ಮುನ್ನ ರೈಲ್ವೆ ಪ್ರತಿ ನಿಯಮವನ್ನು ತಿಳಿಯುವುದು ಅಗತ್ಯವಾಗಿದೆ. ಯಾವುದೇ ನಿಯಮ ಉಲ್ಲಂಘನೆಗೆ ಮುಂದಾದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸದ್ಯ ರೈಲಿನಲ್ಲಿ ಪ್ರಯಾಣ ಮಾಡಿದ ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳ ಬಗ್ಗೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಪ್ರಯಾಣಿಕರು ತಮ್ಮ ಸ್ಥಳವನ್ನು ತಲುಪಿದಾಗ ರೈಲಿನಿಂದ ಇಳಿಯುವ ಮುನ್ನ ಈ ಕೆಲಸಗಳನ್ನು ಮಾಡುವುದು ಅಗತ್ಯವಾಗಿದೆ.

Indian New Railway Rule
Image Credit: Moneycontrol

ರೈಲಿನಿಂದ ಇಳಿಯುವ ಮುನ್ನ ಪ್ರಯಾಣಿಕರು ಈ ನಿಯಮ ಪಾಲಿಸುವುದು ಕಡ್ಡಾಯ
ರೈಲಿನಲ್ಲಿ ಪ್ರಯಾಣ ಮಾಡಲು ಪ್ರಯಾಣಿಕರು ತಮಗಾಗಿ ಸೀಟುಗಳನ್ನು ಕಾಯ್ದಿರಿಸುತ್ತಾರೆ. ಇನ್ನು ರೈಲುಗಳಲ್ಲಿ ಉತ್ತಮ ದರ್ಜೆಯ ಭೋಗಿಗಳ ಸೌಲಭ್ಯ ಇರುತ್ತದೆ. ರೈಲಿನಲ್ಲಿ AC ಕೋಚ್ ನಲ್ಲಿ ಪ್ರಯಾಣ ಮಾಡುವವರಿಗೆ ಇಲಾಖೆಯು ಹೆಚ್ಚಿನ ಸೌಲಭ್ಯವನ್ನು ನೀಡುತ್ತದೆ. ಆದರೆ ಎಸಿ ಕೋಚ್ ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಈ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ. ನಿಗದಿತ ಸ್ಥಳದಲ್ಲಿ ರೈಲಿನಿಂದ ಇಳಿಯುವಾಗ ಸಂಬಂಧಪಟ್ಟ ಪ್ರಯಾಣಿಕರು ರೈಲಿನ ವಸ್ತುಗಳನ್ನು (ಹೊದಿಕೆ, ಟವಲ್) ರೈಲು ಸಿಬ್ಬಂದಿಗೆ ಹಸ್ತಾಂತರಿಸುವುದು ಕಡ್ಡಾಯವಾಗಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಇತ್ತೀಚೆಗೆ ಮಾಹಿತಿ ನೀಡಿದರು.

Indian Railway New Updates
Image Credit: Zeebiz

ಈ ತಪ್ಪು ಮಾಡಿದರೆ ದಂಡದ ಜೊತೆಗೆ ಜೈಲು ಶಿಕ್ಷೆ ಖಚಿತ
ನಿಗದಿತ ಸ್ಥಳದಲ್ಲಿ ರೈಲಿನಿಂದ ಇಳಿಯುವಾಗ ಸಂಬಂಧಪಟ್ಟ ಪ್ರಯಾಣಿಕರು ರೈಲಿನ ವಸ್ತುಗಳನ್ನು ರೈಲು ಸಿಬ್ಬಂದಿಗೆ ಹಸ್ತಾಂತರಿಸುವುದು ಪ್ರಯಾಣಿಕರ ಜವಾಬ್ದಾರಿ ಎಂಬುದು ರೈಲ್ವೆ ಇಲಾಖೆ ಹೇಳುತ್ತದೆ. ಯಾವುದೇ ಪ್ರಯಾಣಿಕರು ಬ್ಲಾಂಕೆಟ್ ಅಥವಾ ಹೊದಿಕೆಯನ್ನು ಸಾಗಿಸುವಾಗ ಸಿಕ್ಕಿಬಿದ್ದರೆ, ಆ ಪ್ರಯಾಣಿಕರನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಲಾಗುತ್ತದೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರೀತಿ ರಿಸರ್ವೇಶನ್ ಜಾಗದಿಂದ ಬ್ಲಾಂಕೆಟ್ ಅಥವಾ ಹೊದಿಕೆ ಕಳೆದುಹೋದರೆ ಅದು ಪ್ರಯಾಣಿಕರ ಜವಾಬ್ದಾರಿಯಾಗಿರುತ್ತದೆ ಮತ್ತು ರೈಲ್ವೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಶಿಕ್ಷೆ ಅಥವಾ ದಂಡವನ್ನು ವಿಧಿಸುತ್ತದೆ.

Join Nadunudi News WhatsApp Group

Join Nadunudi News WhatsApp Group