Ads By Google

Solar Stove: LPG ಗ್ಯಾಸ್ ಬದಲು ಉಚಿತ ಸೋಲಾರ್ ಸ್ಟವ್, ಕೇಂದ್ರ ಸರ್ಕಾರದ ಭರ್ಜರಿ ಯೋಜನೆ.

Now central government has made a scheme to distribute solar stoves instead of gas
Ads By Google

LPG Gas And Solar Stove: ದೇಶದೆಲ್ಲೆಡೆ ಗ್ಯಾಸ್ ಸಿಲಿಂಡರ್ (Gas Cylinder) ಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಹೊಸ ಹಣಕಾಸು ವರ್ಷದ ಆರಂಭದಿಂದ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡುಬರುತ್ತಿದೆ. ಈ ಬಾರಿ ಹಣಕಾಸು ವರ್ಷ ಜನತೆಗೆ ಆರ್ಥಿಕ ನಷ್ಟವನ್ನು ಉಂಟುಮಾಡುತ್ತಿದೆ.

ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದೀಗ ಗ್ಯಾಸ್ ಸಿಲಿಂಡರ್ ಗಳ ಬೆಲೆ ಏರಿಕೆಯಿಂದ ಜನರಿಗೆ ಮುಕ್ತಿ ನೀಡಲು ಸರ್ಕಾರ ಹೊಸ ಸೌಲಭ್ಯವನ್ನು ಒದಗಿಸಿದೆ. ಜನಸಾಮಾನ್ಯರಿಗೆ ಉಚಿತ ಸೋಲಾರ್ ಸ್ಟವ್ (solar Stove)  ನೀಡುವುದಾಗಿ ಸರ್ಕಾರ ನಿರ್ಧರಿಸಿದೆ.

Imge Credit: bqprime

ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಕುರಿತು ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಇದೀಗ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಜನಸಾಮಾನ್ಯರು ಗ್ಯಾಸ್ ಸಿಲಿಂಡರ್ ಬೆಲೆಯ ಏರಿಕೆಯ ಪರಿಸ್ಥಿತಿಯಿಂದ ಮುಕ್ತಿ ಪಡೆಯಬಹುದು. ಹೆಚ್ಚುತ್ತಿರುವ ಗ್ಯಾಸ್ ಬೆಲೆಗೆ ಬ್ರೇಕ್ ನೀಡಲು ಇದೀಗ ಸರ್ಕಾರ ಮುಂದಾಗಿದೆ. ಸೋಲಾರ್ ಸ್ಟವ್ ನ ಮೂಲಕ ಇನ್ನುಮುಂದೆ ಜನಸಾಮಾನ್ಯ ಅಡುಗೆ ತಯಾರಿಸಿಕೊಳ್ಳಬಹುದು.

Image Credit: aajtak

LPG ಗ್ಯಾಸ್ ಬದಲು ಉಚಿತ ಸೋಲಾರ್ ಸ್ಟವ್
LPG ಗ್ಯಾಸ್ ಬದಲಾಗಿ ಕೇಂದ್ರ ಸರ್ಕಾರ ಇದೀಗ ಸೂರ್ಯ ನೂತನ ಸೋಲಾರ್ ಸ್ಟವ್ ಅನ್ನು ನೀಡಲಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಈ ಸೋಲಾರ್ ಸ್ಟವ್ ಅನ್ನುತಯಾರಿಸಲಿದೆ. ಈ ಸೋಲಾರ್ ಸ್ಟವ್ ಅನ್ನು ಬಿಸಿಲಿನಲ್ಲಿ ಇಡುವ ಅಗತ್ಯ ಇರುವುದಿಲ್ಲ. ಅಡುಗೆ ಮನೆಯಲ್ಲಿ ಇದನ್ನು ಅಳವಡಿಸಿ 24 ಗಂಟೆಗಳ ಕಾಲ ಬಳಸಿಕೊಳ್ಳಬಹುದು.

Image Credit: ibc24

ಸೋಲಾರ್ ಸ್ಟವ್ ಬಳಸುವ ವಿಧಾನ
ಸೋಲಾರ್ ಸ್ಟವ್ ಎರಡು ಘಟಕಗಳನ್ನು ಹೊಂದಿದೆ. ಒಂದನ್ನು ಅಡುಗೆಮನೆಯಲ್ಲಿ ಇನ್ನೊಂದನ್ನು ಬಿಸಿಲಿನಲ್ಲಿ ಇಡಬೇಕು. ಹಗಲಿನಲ್ಲಿ ಬಿಸಿಲಿನ ಶಕ್ತಿಯನ್ನು ಇದು ಸಂಗ್ರಹಿಸುತ್ತದೆ. ಸೋಲಾರ್ ಸ್ಟವ್ ಎರಡು ರೂಪಾಂತರಗಳಲ್ಲಿ ಇವೆ. ಒಂದು ರೂಪಾಂತರದ ಸೋಲಾರ್ ಸ್ಟವ್ 12 ಸಾವಿರ ಬೆಲೆಯದ್ದಾಗಿದೆ, ಇನ್ನೊಂದು 23 ಸಾವಿರ ರೂಪಾಯಿ ಆಗಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field