Post Office Job: 10 ನೇ ತರಗತಿ ಪಾಸ್ ಆದವರಿಗೆ ಪೋಸ್ಟ್ ಆಫೀಸ್ ನಲ್ಲಿ ಉತ್ತಮ ಉದ್ಯೋಗ ಅವಕಾಶ, 50 ಸಾವಿರ ರೂ ಸಂಬಳ

10 ನೇ ತರಗತಿ ಪಾಸ್ ಆದವರಿಗೆ ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಉದ್ಯೋಗ

Indian Post Office Job Application: ಭಾರತೀಯ ಅಂಚೆ ಇಲಾಖೆ (Indian Post Office) ಜನಸಾಮಾನ್ಯರಿಗೆ ವಿವಿಧ ಯೋಜನೆಯನ್ನು ನೀಡುತ್ತದೆ. ಜನರು ಅಂಚೆ ಇಲಾಖೆಯ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

ಇನ್ನು ಅಂಚೆ ಇಲಾಖೆಯು ಯೋಜನೆಯನ್ನು ಜಾರಿಗೊಳಿಸುವುದರ ಜೊತೆಗೆ ನಿರುದ್ಯೋಗಿಗಳಿಗೆ ಸಹಾಯವಾಗಲು ಹುದ್ದೆಗೆ ಅರ್ಜಿ ಆಹ್ವಾನ ನೀಡುತ್ತಿರುತ್ತದೆ. ಸದ್ಯ ಸರ್ಕಾರಿ ಉದ್ಯೋಗಕ್ಕಾಗಿ ಓದುತ್ತಿರುವವರಿಗೆ ಈ ಮಾಹಿತಿ ಉಪಯುಕ್ತವಾಗಲಿದೆ. ಇದೀಗ ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

Indian Post Office Job Application
Image Credit: Times Of India

ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು
*Gramin Dak Sevak
*Postman
*MTS
*Postal Assistant
*Mail Guard
*Sorting Assistant
ಕರ್ನಾಟಕದಲ್ಲಿ ಒಟ್ಟು 5731 ಹುದ್ದೆಗಳಿವೆ. ರಾಜ್ಯದಲ್ಲಿ MTS-1754, Postman-3887, Mail Guard-90 ಹುದ್ದೆಗಳಿಗೆ ನೇಮಕಾತಿ ನೆಡೆಯಲಿದೆ.

ಅರ್ಜಿ ಶುಲ್ಕ ಹಾಗೂ ವಯೋಮಿತಿ
ಸಾಮಾನ್ಯ, OBC, EWS ವಿಭಾಗದ ಅಭ್ಯರ್ಥಿಗಳ ಅರ್ಜಿ ಶುಲ್ಕ 100 ರೂಪಾಯಿ, ಮಹಿಳಾ ಹಾಗು SC/ST ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ. 18 ರಿಂದ 40 ರ ವಯೋಮಿತಿಯಲ್ಲಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Post Office Recruitment 2024
Image Credit: Zeebiz

ಹುದ್ದೆಯ ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 3 ಗಂಟೆಗಳ ಈ ಪರೀಕ್ಷೆ 100 ಅಂಕಗಳನ್ನು ಒಳಗೊಂಡಿದೆ. ಗಣಿತ, ರೀಸನಿಂಗ್‌, ಹಿಂದಿ, ಇಂಗ್ಲಿಷ್‌ ವಿಷಯಗಳ ತಲಾ 25 ಅಂಕಗಳ ಪ್ರಶ್ನೆಗಳಿರುತ್ತವೆ. ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಮೇಲಿನ ಹಿಡಿತ ಹೊಂದಿರುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಕಂಪ್ಯೂಟರ್‌ ಜ್ಞಾನ ಮತ್ತು ಕಂಪ್ಯೂಟರ್‌ ಕಲಿಕೆಯ ಪ್ರಮಾಣ ಪತ್ರ ಹೊಂದಿರಬೇಕು.

Join Nadunudi News WhatsApp Group

Join Nadunudi News WhatsApp Group