Railway Facility: ಇಂತವರಿಗೆ ರೈಲಿನಲ್ಲಿ ಎಲ್ಲವೂ ಉಚಿತ, ರೈಲ್ವೆ ಇಲಾಖೆಯ ಹೊಸ ಯೋಜನೆ.
ಭಾರತೀಯ ರೈಲ್ವೆ ಇಲಾಖೆಯಿಂದ ಹೊಸ ಸೌಲಭ್ಯ ಬಿಡುಗಡೆ, ಇಂತಹ ಜನರಿಗೆ ಎಲ್ಲವೂ ಉಚಿತ.
Indian Railway Facilities: ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಹೊಸ ಹೊಸ ಸೌಲಭ್ಯವನ್ನು ಒದಗಿಸುತ್ತಿದೆ. ಇತ್ತೀಚಿಗಂತೂ ರೈಲ್ವೆ ತನ್ನ ಪ್ರಯಾಣಿಕರಿಗಾಗಿ ಅನೇಕ ಸೌಲಭ್ಯವನ್ನು ಜಾರಿ ಮಾಡಿದೆ. ಸದ್ಯ ಭಾರತೀಯ ರೈಲ್ವೆ ದೇಶದಲ್ಲಿ ಅನೇಕ ಸೇವೆಗಳನ್ನ ಜಾರಿಗೆ ತಂದಿದ್ದು ಇದು ಜನರ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಬಹುದು.
ಇನ್ನು ರೈಲ್ವೆ ಇಲಾಖೆ ಈಗ ಇನ್ನೊಂದು ಹೊಸ ಸೇವೆಯನ್ನ ಜಾರಿಗೆ ತರಲು ತೀರ್ಮಾನವನ್ನ ಮಾಡಿದ್ದು ಇಂತಹ ಜನರಿಗೆ ಕೆಲವು ಸೇವೆಗಳನ್ನ ಉಚಿತವಾಗಿ ನೀಡಲು ನಿರ್ಧಾರವನ್ನ ಮಾಡಿದೆ.
ರೈಲ್ವೆ ಇಲಾಖೆಯಿಂದ ಹೊಸ ಮಾಹಿತಿ
ರೈಲ್ವೆ ಇಲಾಖೆಯಿಂದ ಪ್ರತಿದಿನ 10,000 ಕ್ಕೂ ಹೆಚ್ಚು ರೈಲುಗಳು ಓಡುತ್ತದೆ ಮತ್ತು ಇವುಗಳಲ್ಲಿ ದೇಶದ ಹಿರಿಯ ನಾಗರಿಕರು ಅನೇಕ ಸೌಲಭ್ಯಗಳನ್ನು ಪಡೆಯುತ್ತಾರೆ ಎಂದು ರೈಲ್ವೆ ಮಾಹಿತಿ ನೀಡಿದೆ. ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಿರಿಯ ನಾಗರಿಕರು ರೈಲಿನಲ್ಲಿ ದೃಡೀಕೃತ ಲೋವರ್ ಬರ್ತ್ ಗಳ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎದು ಹೇಳಿದ್ದಾರೆ.
ಇದಕ್ಕಾಗಿ ರೈಲ್ವೆಯಲ್ಲಿ ಪ್ರತ್ಯೇಕ ಅವಕಾಶವಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರು ಕೆಳ ಬರ್ತ್ ಗಾಗಿ ಯಾವುದೇ ಆಯ್ಕೆಯನ್ನು ಆರಿಸಬೇಕಾಗಿಲ್ಲ. ಈ ಪ್ರಯಾಣಿಕರು ಸ್ವಯಂಚಾಲಿತವಾಗಿ ರೈಲ್ವೇ ಕಡೆಯಿಂದ ಲೋವರ್ ಬರ್ತ್ ಪಡೆಯುತ್ತಾರೆ.
ರೈಲ್ವೆಯಿಂದ ಹೊಸ ಸೌಲಭ್ಯ
ಇನ್ನು ರೈಲ್ವೆಯಿಂದ ಬಂದಿರುವ ಮಾಹಿತಿಯ ಪ್ರಕಾರ ಸ್ಲೀಪರ್ ವಿಭಾಗದಲ್ಲಿ ಹಿರಿಯ ನಾಗರಿಕರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ 6 ಲೋವರ್ ಬರ್ತ್ ಗಳನ್ನೂ ಕಾಯ್ದಿರಿಸಲಾಗಿದೆ. ಇದರೊಂದಿದೆ 3 ಎಸಿಯಲ್ಲಿ ಪ್ರತಿ ಕೋಚ್ ನಲ್ಲಿ ನಾಲ್ಕರಿಂದ ಐದು ಲೋವರ್ ಬರ್ತ್ ಗಳನ್ನೂ 2 ಎಸಿಯಲ್ಲಿ ಪ್ರತಿ ಕೋಚ್ ನಲ್ಲಿ 3 ರಿಂದ ನಾಲ್ಕು ಲೋವರ್ ಬರ್ತ್ ಗಳನ್ನೂ ನಿಗದಿಪಡಿಸಲಾಗಿದೆ.
ರೈಲು ಟಿಕೆಟ್ ವಿನಾಯಿತಿ ಕುರಿತು ರೈಲ್ವೆ ಸಚಿವರು ಮಾತನಾಡಿದ್ದಾರೆ. ಇದಲ್ಲದೆ ರೈಲಿನಲ್ಲಿ ಯಾವುದೇ ಕೆಳಗಿನ ಬರ್ತ್ ಖಾಲಿಯಿದ್ದರೆ, ಹಿರಿಯ ನಾಗರಿಕರು, ಅಂಗವಿಕಲರು ಮತ್ತು ವ್ಯವಸ್ಯೆ ಮೇಲಿನ ಸ್ಥಾನ ಪಡೆದ ಮಹಿಳೆಯರು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.