Railway Facility: ರೈಲಿನಲ್ಲಿ ಮಹಿಳೆಯರಿಗೆ ಈ ಎಲ್ಲಾ ಸೇವೆಗಳು ಉಚಿತವಾಗಿ ಸಿಗಲಿದೆ, ರೈಲ್ವೆ ರೂಲ್ಸ್

ಭಾರತೀಯ ರೈಲ್ವೆಯಿಂದ ಮಹಿಳೆಯರಿಗೆ ಸಿಗುವ ವಿಶೇಷ ಸೌಲಭ್ಯಗಳು

Indian Railway Facility For Women’s: ದೇಶದಲ್ಲಿ ರೈಲುಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಲು ಬಳಸುವವರು ಸಾಮಾನ್ಯವಾಗಿ ರೈಲು ಪ್ರಯಾಣವನ್ನು ಇಷ್ಟ ಪಡುತ್ತಾರೆ.

ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಭಾರತ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುತ್ತದೆ. ಸದ್ಯ ರೈಲ್ವೆ ಇಲಾಖೆ ಮಹಿಳಾ ಪ್ರಯಾಣಿಕರಿಗೆ ವಿಶೇಷ ಸೌಲಭ್ಯಗಳನ್ನು ನೀಡಲು ಮುಂದಾಗಿದೆ.

Indian Railway Facility For Women's
Image Credit: Onmanorama

ಈ ಸಮಯದಲ್ಲಿ ಮಹಿಳೆಯನ್ನು ರೈಲಿನಿಂದ ಕೆಳಗಿಳಿಸಿದರೆ ಆಕೆಯ ಸುರಕ್ಷತೆಯ ಜವಾಬ್ದಾರಿ RPF/GRP ದ್ದಾಗಿರುತ್ತದೆ
ಕೆಲವು ಕಾರಣಾಂತರಗಳಿಂದ ಮಹಿಳೆ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಆಕೆಯನ್ನು TC ರೈಲಿನಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಒಂದು ವೇಳೆ ಆ ಮಹಿಳೆಯನ್ನು ಕೆಳಗಿಳಿಸಿದರೆ ಆಕೆಯ ಸುರಕ್ಷತೆಯ ಜವಾಬ್ದಾರಿ RPF / GRP ದ್ದಾಗಿರುತ್ತದೆ. ಯಾವುದೇ ಟಿಸಿ ಇದನ್ನು ಮಾಡಿದರೆ ಆ ಮಹಿಳೆ ಅವರ ವಿರುದ್ಧ ರೈಲ್ವೆ ಪ್ರಾಧಿಕಾರಕ್ಕೆ ದೂರು ನೀಡಬಹುದು. ಹಾಗೆ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವುದು ಕಾನೂನುಬಾಹಿರ ಎನ್ನುದನ್ನು ಮೊದಲು ತಿಳಿದಿರಬೇಕು.

Indian Railway Facility Updates
Image Credit: Business-Standard

ಭಾರತೀಯ ರೈಲ್ವೆಯಿಂದ ಮಹಿಳೆಯರಿಗೆ ಸಿಗುವ ವಿಶೇಷ ಸೌಲಭ್ಯಗಳು
*ಗರ್ಭಿಣಿಯರು, ಹಿರಿಯ ನಾಗರಿಕರು, 45 ವರ್ಷ ಮೇಲ್ಪಟ್ಟ ಮಹಿಳೆಯರು ರೈಲಿನಲ್ಲಿ ಪ್ರಯಾಣಿಸಿದರೆ ಅವರಿಗೆ ಈ ಕೋಟಾದಡಿ ಸೀಟು ನೀಡಲಾಗುತ್ತದೆ.

*ಪ್ರತಿ ಸ್ಲೀಪರ್ ಕೋಚ್ ನಲ್ಲಿ ಲೋವರ್ ಬರ್ತ್ ಅನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದೆ.

Join Nadunudi News WhatsApp Group

*ಉಪನಗರ ಅಥವಾ ಸ್ಥಳೀಯ ರೈಲುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕೋಚ್

*ಮಹಿಳೆಯರಿಗಾಗಿ ಹಲವು ವಿಶೇಷ ರೈಲನ್ನು ನೆಡೆಸಲಾಗುತ್ತಿದೆ. ರೈಲ್ವೆ ಕಚೇರಿಗೆ ಭೇಟಿ ನೀಡುವ ಮೂಲಕ ಈ ರೈಲುಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

*ಅನೇಕ ರೈಲು ನಿಲ್ದಾಣಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕಾಯುವ ಕೊಠಡಿ

*ಮಹಿಳಾ ಪ್ರಯಾಣಿಕರು 182 ಗೆ ಕರೆ ಮಾಡುವ ಮೂಲಕ ಭದ್ರತಾ ಸಹಾಯವನ್ನು ಪಡೆಯಬಹುದು.

Join Nadunudi News WhatsApp Group