Railway: ದೇಶದ ಎಲ್ಲಾ ಜನತೆಗೆ ಗಿಫ್ಟ್ ಕೊಟ್ಟ ರೈಲ್ವೇ, 35 ಪೈಸೆ ಕೊಟ್ಟು ರಿಜಿಸ್ಟರ್ ಮಾಡುತ್ತಿರುವ ಜನ
ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಸಿಗಲಿದೆ 10 ಲಕ್ಷ, ರೈಲು ಪ್ರಯಾಣಿಕರಿಗಾಗಿ ರೈಲ್ವೆ ಇಲಾಖೆಯ ಹೊಸ ಯೋಜನೆ ಜಾರಿ.
Indian Railway 35 Paisa Insurance: ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ (Indian Railway) ಇಲಾಖೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಇನ್ನು ಹೊಸ ನಿಯಮಗಳನ್ನು ಪರಿಚಯಿಸುವುದರ ಜೊತೆಗೆ ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಇನ್ನಷ್ಟು ಸೌಲಭ್ಯವನ್ನು ಒದಗಿಸುತ್ತಿದೆ..
ಇನ್ನು ಪ್ರತಿನಿತ್ಯ ರೈಲುಗಳಲ್ಲಿ ಸಾವಿರರು ಮಂದಿ ಪ್ರಯಾಣಿಸುತ್ತಾರೆ. ದೂರದ ಪ್ರಯಾಣಕ್ಕಾಗಿ ಹೆಚ್ಚಿನ ಜನರು ರೈಲು ಪ್ರಯಾಣವನ್ನೇ ಆರಿಸುತ್ತಾರೆ. ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಭಾರತದಲ್ಲಿ ಸಾಕಷ್ಟು ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಅಂತಹವರಿಗೆ ಭಾರತೀಯ ರೈಲ್ವೆಯು ಹೊಸ ಆದೇಶವನ್ನು ಹೊರಡಿಸಿದೆ.
ಇತ್ತೀಚಿಗೆ ಒಡಿಶಾದಲ್ಲಿ ರೈಲು ದುರಂತ ನಡೆದಿದ್ದು ಸಾಕಷ್ಟು ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಲ್ಲದೆ ಅನೇಕ ಜನರು ಗಾಯಗೊಂಡರು. ಈ ಘಟನೆಯ ನಂತರ ಭಾರತೀಯ ರೈಲು ಇಲಾಖೆ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಹಲವು ಸೌಲಭ್ಯ ಒದಗಿಸಿ ಕೊಡುತ್ತಿದೆ.
IRCTC ಹೊಸ ಸೌಲಭ್ಯ
ಇದೀಗ ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಹೆಚ್ಚುವರಿಯಾಗಿ, ಪ್ರಯಾಣಿಕರು IRCTC ಪ್ರಯಾಣ ವಿಮಾ ಪಾಲಿಸಿಯನ್ನು ಪಡೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಕೇವಲ 35 ಪೈಸೆಯ ಕನಿಷ್ಠ ಪ್ರೀಮಿಯಂ ನಲ್ಲಿ ಲಭ್ಯವಿರುವ ಈ ವಿಮಾ ಪಾಲಿಸಿಯು ಎಲ್ಲಾ ವರ್ಗದ ಪ್ರಯಾಣಿಕರಿಗೆ ಏಕರೂಪದ ರಕ್ಷಣೆಯನ್ನು ನೀಡುತ್ತದೆ, ಮರಣ ಅಥವಾ ಶಾಶ್ವತ ಅಂಗವೈಕಲ್ಯಗಳ ಸಂದರ್ಭದಲ್ಲಿ ರೂ 10 ಲಕ್ಷದವರೆಗೆ ವಿಮಾ ಮೊತ್ತವನ್ನು ನೀಡುತ್ತದೆ.
ಇನ್ನು IRCTC ಇತ್ತೀಚಿಗೆ ರೈಲಿನಲ್ಲಿ ಸಾಕು ಪ್ರಾಣಿಗಳನ್ನು ಕರೆದುಕೊಂಡು ಹೋಗಲು ಹೊಸ ಸೌಲಭ್ಯ ನೀಡಿತ್ತು. ಸಾಕು ನಾಯಿಗಳು ಅಥವಾ ಬೆಕ್ಕುಗಳನ್ನು ರೈಲಿನಲ್ಲಿ ಎಲ್ಲಿ ಬೇಕಾದರೂ ಕರೆದುಕೊಂಡು ಹೋಗಬಹುದು. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಸಾಕುಪ್ರಾಣಿಗಳಿಗೆ ಆನ್ ಲೈನ್ ಟಿಕೆಟ್ ಬುಕಿಂಗ್ ಅನ್ನು ಅನುಮತಿಸಬಹುದು ಎಂದು IRCTC ಆದೇಶ ನೀಡಿತ್ತು.