Indian Railway: ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್, ರಾತ್ರೋರಾತ್ರಿ ಜಾರಿಗೆ ಬಂತು ಐತಿಹಾಸಿಕ ಯೋಜನೆ.
ರೈಲ್ವೆ ಇಲಾಖೆಯಿಂದ ರೈಲು ಪ್ರಯಾಣಿಕರಿಗಾಗಿ ಹೊಸ ಯೋಜನೆ ಜಾರಿ.
Indian Railway New Facility: ಭಾರತೀಯ ರೈಲ್ವೆ (Indian Railway) ಪ್ರಯಾಣಿಕ ಅನುಕೂಲಕ್ಕಾಗಿ ವಿವಿಧ ಸೌಲಭ್ಯವನ್ನು ಒದಗಿಸುತ್ತಿದೆ. ವಿವಿಧ ಸೌಲಭ್ಯಗಳ ಜೊತೆಗೆ ಪ್ರಯಾಣಿಕ ಸುರಕ್ಷತೆಗಾಗಿ ಹಲವಾರು ನಿಯಮವನ್ನು ಜಾರಿಗೊಳಿಸುತ್ತಿದೆ.
ಇನ್ನು ರೈಲ್ವೆ ಇಲಾಖೆಯು ಇತ್ತೀಚಿಗೆ ಗ್ರಾಹಕರಿಗಾಗಿ ವಿವಿಧ ಸೌಲಭ್ಯವನ್ನು ನೀಡಿದ್ದು, ಪ್ರಯಾಣಿಕರು ಅನುಕೂಲವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಒದಗಿಸಲಿದೆ.
ರೈಲು ಪ್ರಯಾಣಿಕರಿಗಾಗಿ ಹೊಸ ಸೌಲಭ್ಯ
ರೈಲ್ವೆ ಇಲಾಖೆಯು ಇದೀಗ ಪ್ರಯಾಣಿಕರಿಗಾಗಿ ಬೆಟರ್ ಫೀಲಿಂಗ್ ಮತ್ತು ವಿಸ್ಟಾಡೋಮ್ ಕೋಚ್ ಗಳು ಸೇರಿದಂತೆ ಎಸಿ ಆಸನ ಸೌಲಭ್ಯದೊಂದಿಗೆ ಎಲ್ಲ ರೈಲುಗಳ ಎಸಿ ರೈಲುಗಳ ಎಸಿ ಚೆರ್ ಕಾರ್ ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ ನಲ್ಲಿ ವಿಶ್ರಾಂತಿ ನೀಡುವ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಇನ್ನುಮುಂದೆ ರೈಲು ಪ್ರಯಾಣಿಕರಿಗೆ ಗಾಜಿನ ಮೇಲ್ಛಾವಣಿ, ರಿವಾಲ್ವಿಂಗ್ ಚೇರ್ ಗಳು ಮತ್ತು ಎಲ್ ಸಿಡಿ ಟಿವಿಗಳನ್ನು ಒಳಗೊಂಡಿರುವ ವಿಸ್ಟಾಡೋಮ್ ಕೋಚ್ ಗಳಲ್ಲಿ ವಿಶೇಷ ರಿಯಾಯಿತಿಯನ್ನು ರೈಲ್ವೆ ಇಲಾಖೆ ನೀಡಲಿದೆ.
ರೈಲ್ವೆ ಇಲಾಖೆಯಿಂದ ಪ್ರಯಾಣಿಕರಿಗಾಗಿ ಹೊಸ ಯೋಜನೆ ಜಾರಿ
ವಿಶೇಷ ಸೌಲಭ್ಯವನ್ನು ಪಡೆಯಲು ಪ್ರಯಾಣಿಕರಿಗಾಗಿ ರಿಯಾಯಿತಿಯನ್ನು ನೀಡಲು ಫ್ಲೆಕ್ಸಿ ದರ ಯೋಜನೆಯನ್ನು ಪ್ರಾರಂಭಿಸಲಿದೆ. ವಿಶೇಷ ಸೌಲಭ್ಯ ನೀಡಲಾಗುವ ಕೋಚ್ ಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ದರದಲ್ಲಿ 25 % ರಿಯಾಯಿತಿಯನ್ನು ಪಡೆಯಬಹುದು.
ಇನ್ನು ಎಸಿ ಆಸನದ ಸೌಲಭ್ಯ ಹೊಂದಿರುವ ಭೋಗಿಗಳಿಗೆ ರಿಯಾಯಿತಿಯನ್ನು ನೀಡಿದ್ದು ಪ್ರಯಾಣಿಕರಿಗೆ ಒಂದಿಷ್ಟು ಷರತ್ತುಗಳನ್ನು ನೀಡಿದೆ. ಆಕ್ಯುಪೆನ್ಸಿಗೆ ಅನುಗುಣವಾಗಿ ಎಲ್ಲಾ ತರಗತಿಗಳಲ್ಲಿ ರಿಯಾಯಿತಿಯನ್ನು ನೀಡಲಾಗುತ್ತದೆ.
ವಿಸ್ಟಾಡೋಮ್ ಕೋಚ್ ನ ವಿವರ
ಫ್ಲೆಕ್ಸಿ ದರ ಯೋಜನೆಯ ಅಡಿಯಲ್ಲಿ ರಿಯಾಯಿತಿಯನ್ನು ಪ್ರಯಾಣದ ಮೊದಲ ವಿಭಾಗ/ ಪ್ರಯಾಣದ ಕೊನೆಯ ವಿಭಾಗ ಅಥವಾ ಪ್ರಯಾಣದ ಅಂತ್ಯದಿಂದ ಕೊನೆಯವರೆಗೆ ಆಕ್ಯುಪೆನ್ಸಿಯನ್ನು ಒದಗಿಸಲಿದೆ.
ಯೋಜನೆಯಲ್ಲಿ ವಿನಿಯಾಯಿತಿ ಅಥವಾ ತಿದ್ದುಪಡಿಯನ್ನು ಮಾಡಲು ನಿರ್ಧರಿಸಲಾಗಿದೆ. ವಿಸ್ಟಾಡೋಮ್ ನಲ್ಲಿನ ಸೌಲಭ್ಯವು ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡಲಿದೆ. ವಿಸ್ಟಾಡೋಮ್ ಕೋಚ್ 40 ಆಸನಗಳನ್ನು ಹೊಂದಿದ್ದು, ಈ ಕೋಚ್ ನಲ್ಲಿ ಪ್ರಯಾಣಿಸಲು ಟಿಕೆಟ್ ನ ಬೆಲೆ 2,235 ರೂ. ಆಗಿದೆ.