Indian Railway: ರೈಲಿನಲ್ಲಿ ನಿದ್ರೆ ಮಾಡುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ದೇಶದಲ್ಲಿ ಜಾರಿಗೆ ಬಂತು ಹೊಸ ರೈಲ್ವೆ ಯೋಜನೆ.

ರೈಲಿನಲ್ಲಿ ನಿದ್ರೆ ಮಾಡುವವರನ್ನ ಎಬ್ಬಿಸಲು ಹೊಸ ಸೇವೆ ಆರಂಭ.

Indian Railway AI Facility: ರೈಲ್ವೆ ಇಲಾಖೆ (Indian Railway) ಪ್ರಯಾಣಿಕರಿಗೆ ವಿವಿಧ ರೀತಿಯ ಸೌಲಭ್ಯವನ್ನು ಒದಗಿಸುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಅನೇಕ ನಿಯಮಗಳ ಜೊತೆಗೆ ವಿವಿಧ ಸೌಲಭ್ಯವನ್ನು ಒದಗಿಸಿಕೊಡುತ್ತಿದೆ. ಇದೀಗ ರೈಲ್ವೆ ಇಲಾಖೆ ರೈಲು ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಸಾಧನವನ್ನು ಅಳವಡಿಸಲು ಮುಂದಾಗಿದೆ. ಅದೇನೆಂದು ನಾವೀಗ ತಿಳಿದುಕೊಳ್ಳೋಣ.

indian railway latest news update
Image Credit: Other Source

ರೈಲು ಚಾಲಕರು ನಿದ್ರೆ ಮಾಡಿದ್ರೆ ಎಚ್ಚರಿಸಲು ಹೊಸ ಮಿಷನ್
ಈಶಾನ್ಯ ಫ್ರಾಂಟಿಯರ್ ರೈಲ್ವೆ ಕೃತಕ ಬುದ್ದಿಮತ್ತೆ ಆಧಾರಿತ ಸಾಧನವನ್ನು ಅಭಿವೃದ್ಧಿ ಪಡಿಸುತ್ತದೆ. AI ಮಿಷನ್ ಚಾಲಕರ ಮಿಟುಕಿಸುವ ಕಣ್ಣುಗಳನ್ನು ಓದಲು ಮತ್ತು ಅವರಿಗೆ ಎಚ್ಚರಿಕೆ ನೀಡಲು ಅಥವಾ ಅವರಿಗೆ ನಿದ್ರೆ ಬಂದರೆ ರೈಲನ್ನು ನಿಲ್ಲಿಸಲು ಸಾಧ್ಯವಾಗುತ್ತದೆ. ಜೂನ್ ನಲ್ಲಿ ರೈಲು ಚಾಲಕರ ಜಾಗರೂಕತೆಯನ್ನು ಪತ್ತೆಹಚ್ಚುವ ಸಾಧನವನ್ನು ಅಭಿವೃದ್ಧಿ ಪಡಿಸಲು NFR ಗೆ ಕೇಳಿಕೊಂಡಿತ್ತು.

ರೈಲ್ವೆ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಚಾಲಕನು ನಿರ್ದಿಷ್ಟ ಸಮಯದವರೆಗೆ ಜಾಗರೂಕತೆಯನ್ನು ಕಳೆದುಕೊಂಡರೆ ಅಥವಾ ನಿದ್ರೆಗೆ ಜಾರಿದರೆ ಎಚ್ಚರಿಕೆಯನ್ನು ಧ್ವನಿಸುದು ಮಾತ್ರವಲ್ಲದೆ ತುರ್ತು ಬ್ರೇಕ್ ಗಳನ್ನೂ ಒದಗಿಸುತ್ತದೆ. ಈ ಸಾಧನವು ಇನ್ನು ಅಭಿವೃದ್ಧಿಯ ಹಂತದಲ್ಲಿದೆ ಮತ್ತು ಅದರ ಸರಿಯಾದ ಕಾರ್ಯನಿರ್ವಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಳು ನೆಡೆಯುತ್ತಿದೆ. ಕೆಲವೇ ವಾರಗಳಲ್ಲಿ ಇದು ಸಿದ್ಧವಾಗಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

Indian Railway New Facility
Image Credit: Rightsofemployees

ಆಗಸ್ಟ್ 2 ರಂದು ರೈಲ್ವೆ ಮಂಡಳಿಯು NFR ಗೆ ಪತ್ರ ಬರೆದು RDAS ನ ಆಂತರಿಕ ಅಭಿವೃದ್ಧಿಯನ್ನು ತ್ವರಿತಗೊಳಿಸುವಂತೆ ಕೇಳಿವೆ. ಈ ಸದನ ಸಿದ್ದವಾದ ನಂತರ 20 ಸರಕು ರೈಲು ಎಂಜಿನ್ ಮತ್ತು ಪ್ಯಾಸೆಂಜರ್ ರೈಲು ಎಂಜಿನ್ ಗಳಲ್ಲಿ ಅಳವಡಿಸಲಾಗುತ್ತದೆ ಎಂದು ಹೇಳಿವೆ.

Join Nadunudi News WhatsApp Group

Join Nadunudi News WhatsApp Group